65 ವರ್ಷದ ವೃದ್ಧೆ ಮೇಲೆ 20 ವರ್ಷದ ಯುವಕನಿಂದ ಹೇಯ ಕೃತ್ಯ; ಹಲ್ಲೆ ನಡೆಸಿ ಕೊಲೆ

ಬೆಂಗಳೂರಿನ ಕೆಂಗೇರಿಯ ಕೋನಸಂದ್ರದಲ್ಲಿ ದೇವಸ್ಥಾನದ ಮುಂದೆ ಮಲಗಿದ್ದ 65 ವರ್ಷದ ವೃದ್ಧೆಯ ಮೇಲೆ 20 ವರ್ಷದ ಯುವಕ ಅತ್ಯಾಚಾರವೆಸಗಿ, ಪಕ್ಕೆಲುಬು ಮುರಿದು ಬರ್ಬರವಾಗಿ ಹತ್ಯೆ ಮಾಡಿರುವ ಹೇಯ ಕೃತ್ಯ ಬೆಳಕಿಗೆ ಬಂದಿದೆ. ಮೊದಲು ವೃದ್ದೆಯ ಚಿನ್ನ ಕಿತ್ತುಕೊಳ್ಳಲು ಆರೋಪಿ ಯೋಜನೆ ರೂಪಿಸಿದ್ದ. ಅದರಂತೆ ಆಭರಣ ಕಿತ್ತುಕೊಂಡು ಆಕೆಯ ಮೇಲೆ ಹಲ್ಲೆ ನಡೆಸಿದ್ದ. ಹೊಡೆತದ ರಭಸಕ್ಕೆ ಆಕೆಯ ಎದೆಯ ಮೂಳೆ ಮುರಿದು ಹೋಗಿತ್ತು. ಇಷ್ಟಾದರೂ ಬಿಡದ ಆತ ವೃದ್ಧೆಯ ಮೇಲೆರಗಿ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ.

65 ವರ್ಷದ ವೃದ್ಧೆ ಮೇಲೆ 20 ವರ್ಷದ ಯುವಕನಿಂದ ಹೇಯ ಕೃತ್ಯ; ಹಲ್ಲೆ ನಡೆಸಿ ಕೊಲೆ
ಸಾಂದರ್ಭಿಕ ಚಿತ್ರ
Image Credit source: Getty Images
Edited By:

Updated on: Nov 08, 2026 | 1:56 PM

ಬೆಂಗಳೂರು, ನವೆಂಬರ್​​ 08: ದೇವಸ್ಥಾನದ ಮುಂದೆ ಮಲಗಿದ್ದ 65 ವರ್ಷದ ವೃದ್ಧೆಯನ್ನು 20 ವರ್ಷದ ಯುವಕನೋರ್ವ ಅತ್ಯಾಚಾರವೆಸಗಿ ಬಳಿಕ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಕೆಂಗೇರಿಯ ಕೋನಸಂದ್ರದಲ್ಲಿ ನಡೆದಿದೆ. ಆಕೆಯ ಬಳಿಯಿದ್ದ ಆಭರಣ ಮತ್ತು ಹಣವನ್ನೂ ಆರೋಪಿ ದೋಚಿದ್ದಾನೆ ಎನ್ನಲಾಗಿದೆ. ವೃದ್ಧೆಯ ಪಕ್ಕೆಲುಬಿಗೆ ಹೊಡೆದು ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಆರೋಪಿ, ಬಳಿಕ ವೃದ್ಧೆ ಬಳಿಯಿದ್ದ ಚಿನ್ನದ ಉಂಗುರು ಕಿತ್ತು ಕೊಂಡಿದ್ದ. ಸ್ಥಳೀಯನೊಬ್ಬ ಇದನ್ನು ನೋಡಿ ಪ್ರಶ್ನೆ ಮಾಡಿದ್ದಾಗ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಸಾತ್ವಿಕ್​​ ಎಂದು ಗುರುತಿಸಲಾಗಿದೆ.

ಅತ್ಯಾಚಾರ ನಡೆದಿರೋದು ತನಿಖೆ ವೇಳೆ ಬಯಲು

ಘಟನೆ ನಡೆದಿರುವ ಸ್ಥಳದಲ್ಲಿ ರಕ್ತದ ಕಲೆ ಮತ್ತು ವೃದ್ಧೆಯ ದೇಹದ ಮೇಲೆ ಯಾವುದೇ ಗಾಯದ ಗುರುತು ಇಲ್ಲದ ಕಾರಣ ಮೊದಲು ಇದೊಂದು ಅಸಹಜ ಸಾವು ಎಂದು ಪೊಲೀಸರು ಕೇಸ್ ದಾಖಲು ಮಾಡಿದ್ದರು. ಆದರೆ ಘಟನೆ ಕಣ್ಣಾರೆ ಕಂಡಿದ್ದ ಕ್ಯಾಬ್​​ ಚಾಲಕನೋರ್ವ ನೀಡಿದ ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ ಮೃತಳ ಕೈಯಲ್ಲಿದ್ದ ಉಂಗುರ ನಾಪತ್ತೆಯಾಗಿರುವುದು ಗೊತ್ತಾಗಿದೆ. ಹೀಗಾಗಿ ಚಿನ್ನಕ್ಕಾಗಿ ಕೊಲೆ ನಡೆದಿದೆ ಎಂದು ಪೊಲೀಸರು ಭಾವಿಸಿದ್ದರು. ಆರೋಪಿಯನ್ನೂ ಪತ್ತೆ ಮಾಡಿ ಬಂಧಿಸಿದ್ದರು. ಆ ಬಳಿಕ ವೃದ್ಧೆ ಮೇಲೆ ಯುವಕ ನಡೆಸಿರುವ ಹೇಯ ಕೃತ್ಯ ಗೊತ್ತಾಗಿದೆ.

Loading...

ಇದನ್ನೂ ಓದಿ: 7 ಜನರ ಹತ್ಯೆ ಪ್ರಕರಣ: ಆರೋಪಿ ಇಂದುಶೇಖರ್ ಸಹೋದರನೂ ಬೆಂಗಳೂರಲ್ಲಿ ಡಬಲ್​​ ಮರ್ಡರ್​​ ಮಾಡಿ ಸೃಷ್ಟಿಸಿದ್ದ ಸಂಚಲನ!

ಮೊದಲು ವೃದ್ದೆಯ ಚಿನ್ನ ಕಿತ್ತುಕೊಳ್ಳಲು ಆರೋಪಿ ಯೋಜನೆ ರೂಪಿಸಿದ್ದ. ಅದರಂತೆ ಆಭರಣ ಕಿತ್ತುಕೊಂಡು ಆಕೆಯ ಮೇಲೆ ಹಲ್ಲೆ ನಡೆಸಿದ್ದ. ಹೊಡೆತದ ರಭಸಕ್ಕೆ ಆಕೆಯ ಎದೆಯ ಮೂಳೆ ಮುರಿದು ಹೋಗಿತ್ತು. ಇಷ್ಟಾದರೂ ಬಿಡದ ಆತ ವೃದ್ಧೆಯ ಮೇಲೆರಗಿ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ಆರೋಪಿ ವಿರುದ್ದ ಈಗಾಗಲೇ ಒಂದು ಸರಗಳ್ಳತನ ಹಾಹೂ ಎನ್​​ಡಿಪಿಎಸ್​​ ಕೇಸ್ ಇರುವುದು ತನಿಖೆ ವೇಳೆ ಗೊತ್ತಾಗಿದೆ. ಅತ್ಯಾಚಾರ ಸಂಬಂಧ ಅನ್ವಯಿಸುವ ಕಾಯ್ದೆಗಳನ್ನೂ ಸೇರಿಸಿ ಆರೋಪಿ ವಿರುದ್ಧ ತನಿಖೆ ಮುಂದುವರಿಸಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
Loading...
Unable to load recommendations.
Follow Us