AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

7 ಜನರ ಹತ್ಯೆ ಪ್ರಕರಣ: ಆರೋಪಿ ಇಂದುಶೇಖರ್ ಸಹೋದರನೂ ಬೆಂಗಳೂರಲ್ಲಿ ಡಬಲ್​​ ಮರ್ಡರ್​​ ಮಾಡಿ ಸೃಷ್ಟಿಸಿದ್ದ ಸಂಚಲನ!

ಬೆಂಗಳೂರಿನ 7 ಜನರ ಭೀಕರ ಕೊಲೆ ಪ್ರಕರಣದ ಆರೋಪಿ ಇಂದುಶೇಖರ್, 8 ವರ್ಷಗಳ ಹಿಂದೆ ಕೋಟಿ ಮೌಲ್ಯದ ಆಸ್ತಿಗಾಗಿ ಅವಳಿ ಕೊಲೆ ನಡೆಸಿದ್ದ ಕಾಡುಗೋಡಿ ನಟೋರಿಯಸ್ ರೌಡಿಶೀಟರ್ ಬೆಳತೂರು ರಮೇಶ್‌ನ ಸಹೋದರ ಎಂಬ ಸ್ಫೋಟಕ ಮಾಹಿತಿ ಬಯಲಾಗಿದೆ. 15 ಕೋಟಿ ಮೌಲ್ಯದ 1.8 ಎಕರೆ ಜಾಗಕ್ಕಾಗಿ ಇಬ್ಬರನ್ನು ಸಿನಿಮಾ ಸ್ಟೈಲ್​​ನಲ್ಲಿ ಈತನ ಸಹೋದರ ರಮೇಶ್​​ ಹತ್ಯೆ ಮಾಡಿದ್ದ. ಆ ಪ್ರಕರಣ ಕೂಡ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು.

7 ಜನರ ಹತ್ಯೆ ಪ್ರಕರಣ: ಆರೋಪಿ ಇಂದುಶೇಖರ್ ಸಹೋದರನೂ ಬೆಂಗಳೂರಲ್ಲಿ ಡಬಲ್​​ ಮರ್ಡರ್​​ ಮಾಡಿ ಸೃಷ್ಟಿಸಿದ್ದ ಸಂಚಲನ!
ಇಂದುಶೇಖರ್​​ ಮತ್ತು ರಮೇಶ್​
ವಿಕಾಸ್​ ಬಿಎಂ
| Edited By: |

Updated on:Nov 08, 2026 | 8:31 AM

Share

ಬೆಂಗಳೂರು, ನವೆಂಬರ್​​ 08: ರಾಜಧಾನಿ ಬೆಂಗಳೂರಲ್ಲಿ ನಡೆದಿರುವ ಒಂದೇ ಕುಟುಂಬದ 7 ಜನರ ಹತ್ಯೆ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದೆ. ಪುಟ್ಟ ಮಗು ಸೇರಿದಂತೆ ಕುಟುಂಬವನ್ನೇ ಬರ್ಬರವಾಗಿ ಕೊಲೆ ಮಾಡಿರೋದನ್ನು ಸೈಕೋ ಇಂದುಶೇಖರ್​​ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದ್ದು, ಈ ಸಂಬಂಧ ತನಿಖೆ ಮುಂದುವರಿದಿದೆ. ಈ ಎಲ್ಲದರ ನಡುವೆ ಮತ್ತೊಂದು ಸ್ಫೋಟಕ ವಿಚಾರ ಬಯಲಾಗಿದೆ. ಇಂದುಶೇಖರ್​​ ಬೆಳತೂರು ರಮೇಶ್ ಕಾಡುಗೋಡಿಯ ನಟೋರಿಯಸ್ ರೌಡಿಶೀಟರ್ ರಮೇಶ್​​ನ ಸಹೋದರ ಎಂಬುದು ತಿಳಿದುಬಂದಿದೆ. ಎಂಟು ವರ್ಷಗಳ ಹಿಂದೆ ಆಸ್ತಿಗಾಗಿ‌ ರಮೇಶ್​​ ಮಾಡಿದ್ದ ಡಬಲ್​​ ಮರ್ಡರ್​​ ಪ್ರಕರಣ ಕೂಡ ರಾಜ್ಯವನ್ನೆ ಬೆಚ್ಚಿಬೀಳಿಸಿತ್ತು.

15 ಕೋಟಿ ಮೌಲ್ಯದ ಜಾಗಕ್ಕಾಗಿ ನಡೆಸಿದ್ದ ಅವಳಿ ಕೊಲೆ

ಹೌದು, ಎಂಟು ವರ್ಷಗಳ ಹಿಂದೆ 15 ಕೋಟಿ ಮೌಲ್ಯದ 1.8 ಎಕರೆ ಜಾಗಕ್ಕಾಗಿ ಇಬ್ಬರನ್ನು ಸಿನಿಮಾ ಸ್ಟೈಲ್​​ನಲ್ಲಿ ರಮೇಶ್​​ ಹತ್ಯೆ ಮಾಡಿದ್ದ. ಬೆಂಗಳೂರಿನ ಬೆಳತೂರು ಸಮೀಪ ಜಾಗ ಹೊಂದಿದ್ದ ನಂಜಪ್ಪ ಎಂಬವರು ವಯೋಸಹಜವಾಗಿ ಮೃತಪಟ್ಟಿದ್ದರು. ಅವರ ಅನಾಥ ಕೋಟಿ ಮೌಲ್ಯದ ಜಾಗದ ಮೇಲೆ ರಮೇಶ್ ಕಣ್ಣುಹಾಕಿದ್ದ. ಇದಕ್ಕಾಗಿ ವೆಂಕಟರಮಣ ಎಂಬುವನನ್ನ ಕರೆತಂದು ನಂಜಪ್ಪ ಎಂದು ಬಿಂಬಿಸಿದ್ದ. ಆತನ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ವಿಲ್ ಬರೆಸಿಕೊಂಡಿದ್ದ. ನಂತರ ಕೃಷ್ಣಪ್ಪ ಎಂಬ ಮತ್ತೊಬ್ಬ ವ್ಯಕ್ತಿಯನ್ನು ಕರೆತಂದಿದ್ದ. ನಕಲಿ ನಂಜಪ್ಪನನ್ನಾಗಿ ಬಿಂಬಿಸಿದ್ದ ಆತನಿಗೆ ಭೇದಿ ಮಾತ್ರೆ ನೀಡಿ ಕೊಲೆ ಮಾಡಿದ್ದ. ಕೃಷ್ಣಪ್ಪ ಸತ್ತ ನಂತರ ನಂಜಪ್ಪ ಹೆಸರಿನಲ್ಲಿ ನಕಲಿ ಮರಣ ಪ್ರಮಾಣಪತ್ರ ಮಾಡಿಸಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಒಂದೇ ಕುಟುಂಬದ 7 ಜನರ ಹತ್ಯೆ ಪ್ರಕರಣ: ಖತರ್ನಾಕ್​​ ಪ್ಲ್ಯಾನ್​​ ಮಾಡಿ ಶವಗಳನ್ನು ಸಾಗಿಸಿದ್ದ ಆರೋಪಿ ಇಂದುಶೇಖರ್​​!

ಇನ್ನು ಈ ಕೊಲೆ ಸಂದರ್ಭದಲ್ಲಿ ರಮೇಶ್ ಜೊತೆಗಿದ್ದ ಆತನ ತೋಟದ ಸೆಕ್ಯೂರಿಟಿ ವೆಂಕಟಸ್ವಾಮಿ ಈ ವಿಚಾರವನ್ನು ತನ್ನ ಪತ್ನಿ ಸುಧಾರಾಣಿಗೆ ಹೇಳಿದ್ದ. ಕೊಲೆಯನ್ನ ಸುಧಾರಾಣಿ ವಿರೋಧಿಸಿದ್ದ ಕಾರಣ ಆಕೆಗೆ ಬೆಂಕಿಹಚ್ಚಿ ಮನೆಯಲ್ಲೇ ಕೊಲೆ ಮಾಡಲಾಗಿತ್ತು. ಬಳಿಕ ಘಟನೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗಿತ್ತು. ಆದರೆ ತನಿಖೆಯಲ್ಲಿ ಸುಧಾರಾಣಿಯದ್ದು ಕೊಲೆ ಎಂದು ಪತ್ತೆಯಾಗಿತ್ತು. ನಂತರ ಬೆಳತೂರು ರಮೇಶ್ ಮತ್ತು ವೆಂಕಟಸ್ವಾಮಿಯನ್ನ ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದರು. ಮೂರು ವರ್ಷ ಜೈಲಲ್ಲಿದ್ದ ರಮೇಶ್ 2021ರಲ್ಲಿ ಜೈಲಿನಲ್ಲೇ ಸಾವಿಗೀಡಾಗಿದ್ದ‌. ವರ್ತೂರು ಭಾಗದಲ್ಲಿ ಭೂ ಮಾಫಿಯಾವನ್ನು ಕೂಡ ರಮೇಶ್ ನಡೆಸಿದ್ದ. ನಕಲಿ ದಾಖಲೆ ಸೃಷ್ಟಿ, ಧಮ್ಕಿ ಸೇರಿ ಹಲವು ಪ್ರಕರಣದಲ್ಲಿ ಈತನ ಹೆಸರು ಕೇಳಿಬಂದಿತ್ತು. ಈ ಹಿನ್ನಲೆ ರಮೇಶ್​​ ವಿರುದ್ಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ರೌಡಿಶೀಟ್ ಕೂಡ ಓಪನ್​​ ಆಗಿತ್ತು. ಈಗ ಸಹೋದರನಂತೆಯೇ ಇಂದುಶೇಖರ್​​ ಕೂಡ ಅಂತಹುದ್ದೇ ಕೃತ್ಯ ಮಾಡಿ ಸುದ್ದಿಯಾಗಿದ್ದಾನೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 8:28 am, Sun, 8 November 26

Follow Us
ವಿಕಾಸ್​ ಬಿಎಂ
ವಿಕಾಸ್​ ಬಿಎಂ

ವಿಕಾಸ್​ ಬಿಎಂ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ. ಮೈಸೂರು ಯೂನಿವರ್ಸಿಟಿ ಯಲ್ಲಿ ಶಿಕ್ಷಣ ಮುಗಿಸಿ, 2014 ರಿಂದ ಎಲೆಕ್ಟ್ರಾನಿಕ್ ಮಾದ್ಯಮದಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ಸದ್ಯ ಬೆಂಗಳೂರು ಕ್ರೈಂ ವರದಿಗಾರನಾಗಿ 11 ವರ್ಷ ಸೇವೆ ಸಲ್ಲಿಸಿದ್ದಾರೆ. ಕ್ರೈಂ ರಿಪೋರ್ಟಿಂಗ್ ಹಾಗು ಇನ್ವೆಷ್ಟಿಗೇಟಿವ್ ವರದಿಗಾರರಾಗಿ ಹಾಗು ಸ್ಟಿಂಗ್ ಆಪರೇಷನ್​ಗಳನ್ನ ಮಾಡಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಸುದ್ದಿ ಮೊದಲು ಬ್ರೇಕ್ ಮಾಡಿದ್ದಲ್ಲದೆ, ಶಂಕಿತರ ಸಿಸಿ ಕ್ಯಾಮರಾ ವಿಡಿಯೋಗಳನ್ನ ಪ್ರಸರಣ ಮಾಡಿ ಸಂಸ್ಥೆಯಿಂದ ಪ್ರಶಂಸೆಗೆ ಪಾತ್ರನಾಗಿದ್ದಾರೆ. ಅಲ್ಲದೇ ಬೆಂಗಳೂರಲ್ಲಿ ಟೈಡಾಲ್ ಡ್ರಗ್ ಸೇವನೆಯ ಸ್ಟಿಂಗ್ ಆಪರೇಷನ್ ಮಾಡಿ, ಮೆಡಿಕಲ್ ಗಳಲ್ಲಿ ಟೈಡಾಲ್ ಮಾತ್ರೆಯ ಮಾರಟ ನಿಯಂತ್ರಣಕ್ಕೆ ಬರುವಂತೆ ಮಾಡಿದ್ದಾರೆ. ನೊಂದವರ ಪರವಾಗಿ ನಿಂತು ವಸ್ತುನಿಷ್ಠವಾಗಿ ಸುದ್ದಿಗಳನ್ನ ನೀಡಿ ನ್ಯಾಯ ಕೊಡಿಸುವುದು ಇವರ ಮೊದಲ ಉದ್ದೇಶ. ಸದ್ಯ ಟಿವಿ9 ಸಂಸ್ಥೆಯಲ್ಲಿ ಬೆಂಗಳೂರು ಕ್ರೈಂ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ರೋಡ್ ಟ್ರಿಪ್, ಕ್ರಿಕೆಟ್‌, ವಾಲಿಬಾಲ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್ ಪುಸ್ತಕ ಓದುವುದು ಮತ್ತು ಕ್ರೈಂ ತ್ರಿಲ್ಲರ್ ಸಿನಿಮಾಗಳನ್ನ ನೋಡುವುದು ಇವರ ಹವ್ಯಾಸಗಳು.

Read More
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ಕರ್ನಾಟಕದ ಡಿಪಿಆರ್‌ ತಿರಸ್ಕರಿಸಲು ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ
ಕರ್ನಾಟಕದ ಡಿಪಿಆರ್‌ ತಿರಸ್ಕರಿಸಲು ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ
ಪೋಲೆಂಡ್‌ನ ಕ್ರಾಕೋವ್‌ನಲ್ಲಿ ಗುಂಡಿನ ದಾಳಿ; 5 ಜನ ಸಾವು
ಪೋಲೆಂಡ್‌ನ ಕ್ರಾಕೋವ್‌ನಲ್ಲಿ ಗುಂಡಿನ ದಾಳಿ; 5 ಜನ ಸಾವು
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ
ಗಾನವಿ ಮಾಡಿದ ಡ್ರಾಮಾ ಬಯಲು ಮಾಡಿದ ಸುದೀಪ್: ವಿಡಿಯೋ ನೋಡಿ
ಗಾನವಿ ಮಾಡಿದ ಡ್ರಾಮಾ ಬಯಲು ಮಾಡಿದ ಸುದೀಪ್: ವಿಡಿಯೋ ನೋಡಿ
ಬೆಲೆ ಏರಿಕೆ ಭಾಗ್ಯದ ಸರ್ಕಾರವಲ್ಲ, ಗ್ಯಾರಂಟಿಗಳ ಸರ್ಕಾರ: ಡಿಕೆ ಸುರೇಶ್
ಬೆಲೆ ಏರಿಕೆ ಭಾಗ್ಯದ ಸರ್ಕಾರವಲ್ಲ, ಗ್ಯಾರಂಟಿಗಳ ಸರ್ಕಾರ: ಡಿಕೆ ಸುರೇಶ್