ಬೆಂಗಳೂರು, ಫೆ.18: ರಾತ್ರಿ 11 ಗಂಟೆ ದಾಟಿದ್ರೆ ಸಾಕು ಊಟ ಎಲ್ಲಿ ಸಿಗುತ್ತೆ ಅಂತಾ ಅಲುದಾಡ್ತಿದ್ದ ಶ್ರಮಿಕರು, ಕಾರ್ಮಿಕರು ಹಾಗೂ ರಾತ್ರಿ ಪಾಳಯದ ಕೆಲಸಗಾರರ ಜೊತೆಗೆ ಹೊಟೇಲ್ ಮಾಲೀಕರಿಗೆ (Hotels) ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಬಜೆಟ್ ನಲ್ಲಿ ವ್ಯಾಪಾರ, ವಾಣಿಜ್ಯ ಅಭಿವೃದ್ಧಿ ಉದ್ದೇಶದಿಂದ ತಡರಾತ್ರಿ 1 ಗಂಟೆ ತನಕ ಹೊಟೇಲ್ ಓಪನ್ ಗೆ ಅವಕಾಶ ನೀಡಿರೋದಕ್ಕೆ ಹೊಟೇಲ್ ಮಾಲೀಕರು, ಗ್ರಾಹಕರು ಖುಷ್ ಆಗಿದ್ದಾರೆ. ನೈಟ್ ಲೈಫ್ ಎಂಜಾಯ್ ಮಾಡಬೇಕು ಅಂಡುಕೊಂಡವರಿಗೆ ಸರ್ಕಾರದ (Karnataka Government) ಈ ನಿಯಮ ಗುಡ್ ನ್ಯೂಸ್ ಕೊಟ್ಟರೇ, ಅತ್ತ ರಾತ್ರಿ ಪಾಳಯದ ಕಾರ್ಮಿಕರಿಗೆ, ಹೊಟೇಲ್ ಮಾಲೀಕರಿಗೂ ಸಂತಸ ತಂದಿದೆ. ಆದರೆ ಈಗ 24 ಗಂಟೆ ವ್ಯಾಪಾರ ಅನುಮತಿಗೆ ಆಗ್ರಹ ಕೇಳಿ ಬಂದಿದೆ.
ರಾಜ್ಯದಲ್ಲಿ ತಡರಾತ್ರಿ 1 ಗಂಟೆ ತನಕ ವ್ಯಾಪಾರ, ವಹಿವಾಟಿಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ವ್ಯಾಪಾರ, ವಾಣಿಜ್ಯ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡಿರೋ ಪ್ಲಾನ್ ಗೆ ಸಿಲಿಕಾನ್ ಸಿಟಿ ಮಂದಿ ಫುಲ್ ಖುಷ್ ಆಗಿದ್ದಾರೆ. ಮೊದಲೆಲ್ಲ ರಾತ್ರಿ 10 ,11 ಗಂಟೆಗೆ ಹೊಟೇಲ್ ಬಂದ್ ಆಗ್ತಿದ್ದರಿಂದ ಪರದಾಡ್ತಿದ್ದ ಜನರು, ಇದೀಗ 1 ಗಂಟೆ ತನಕ ಅವಕಾಶ ಕೊಟ್ಟಿರೋದಕ್ಕೆ ಸಂತಸ ವ್ಯಕ್ತಪಡಿಸ್ತಿದ್ದಾರೆ.
ಇದನ್ನೂ ಓದಿ: ತುಮಕೂರು: ನಿಂತಿದ್ದ ಟ್ರ್ಯಾಕ್ಟರ್ಗೆ ಟವೆರಾ ಕಾರು ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
ಇನ್ನು ಈ ಹಿಂದೆ 24 ಗಂಟೆಗಳ ಕಾಲ ವ್ಯಾಪಾರಕ್ಕೆ ಅವಕಾಶ ಕೋರಿ ಹೊಟೇಲ್ ಮಾಲೀಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ರು. ಆದ್ರೆ ಸರ್ಕಾರ ಮಾತ್ರ ಈ ಮನವಿಗೆ ಪುರಸ್ಕಾರ ಕೊಡದೇ ಇರೋದಕ್ಕೆ ಹೊಟೇಲ್ ಮಾಲೀಕರು ಅಸಮಾಧಾನ ಹೊರಹಾಕ್ತಿದ್ದಾರೆ. ಇಡೀ ರಾತ್ರಿ ವ್ಯಾಪಾರಕ್ಕೆ ಅವಕಾಶ ಕೊಟ್ಟರೇ ವಾಣಿಜ್ಯ ಚಟುವಟಿಕೆಗಳ ಅಭಿವೃದ್ಧಿ ಜೊತೆಗೆ ಕ್ರೈಂ ರೇಟ್ ಕೂಡ ಕಡಿಮೆಯಾಗುತ್ತೆ, ಸರ್ಕಾರ ಈ ಬಗ್ಗೆ ಗಮನಹರಿಸಲಿ ಅಂತಾ ಹೊಟೇಲ್ ಮಾಲೀಕರು ಆಗ್ರಹಿಸಿದ್ದಾರೆ.
ಸದ್ಯ ರಾತ್ರಿ 1 ಗಂಟೆ ತನಕ ವ್ಯಾಪಾರಕ್ಕೆ ಅವಕಾಶ ನೀಡೋ ಮೂಲಕ ಸರ್ಕಾರ, ವಾಣಿಜ್ಯ ಚಟುವಟಿಕೆಗಳ ಅಭಿವೃದ್ಧಿ ಜೊತೆಗೆ ಆದಾಯ ಹೆಚ್ಚಳಕ್ಕೂ ಪ್ಲಾನ್ ಮಾಡಿದೆ. 24 ಗಂಟೆಗಳ ಕಾಲ ವ್ಯಾಪಾರಕ್ಕೆ ಅನುಮತಿ ಕೊಡಬೇಕು ಅನ್ನೋ ಹೊಟೇಲ್ ಮಾಲೀಕರ ಸಂಘದ ಮನವಿಗೆ ಸರ್ಕಾರ ಸೊಪ್ಪು ಹಾಕುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ