ಜೈಲಿನಿಂದ ಯುವತಿ ನಗ್ನ ಫೋಟೋ ಕಳಿಸಿ ಹಣಕ್ಕೆ ಬೇಡಿಕೆ; ರೌಡಿಶೀಟರ್, ಸಹಚರರ ಬಂಧಿಸಿದ ಸಿಸಿಬಿ
ಜೈಲಿನಲ್ಲೂ ಕೂಡ ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ ಎಂದು ಟಿವಿ9 ವರದಿ ಮಾಡಿಕೊಂಡು ಬಂದಿದೆ. ಹಣವೊಂದಿದ್ದರೆ ಸಾಕು ಖೈದಿಗಳು ಸೆರೆಮನೆಯಲ್ಲೂ ರಾಜನಂತೆ ಇರಬಹುದು ಎಂಬುದು ಮತ್ತೊಮ್ಮೆ ಸಾಭೀತಾಗಿದೆ. ಇಲ್ಲೊಬ್ಬ ಜೈಲಿನಿಂದಲೇ ಮಹಿಳೆಯ ಬೆತ್ತಲೆ ಫೋಟೋ ಕಳುಹಿಸಿ ಬ್ಲ್ಯಾಕ್ಮೇಲ್ ಮಾಡಿದ್ದ. ಇದೀಗ ಆತನನ್ನು ಹಾಗೂ ಸಹಚರರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು, ಫೆ.18: ಜೈಲಿನಿಂದ ಮಹಿಳೆಯ ಬೆತ್ತಲೆ ಫೋಟೋ ಕಳುಹಿಸಿದ್ದ ರೌಡಿಶೀಟರ್(Rowdy Sheeter) ಹಾಗೂ ಸಹಚರರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪರಿಚಯಸ್ಥ ಮಹಿಳೆಗೆ ಯಲಹಂಕ(Yalahanka) ರೌಡಿಶೀಟರ್ ಮನೋಜ್ ಅಲಿಯಾಸ್ ಕೆಂಚ ಎಂಬಾತ ಜೈಲಲ್ಲಿ ಕುಳಿತುಕೊಂಡು ಮಾರ್ಫ್ ಮಾಡಿದ ಬೆತ್ತಲೆ ಫೋಟೋ ಕಳುಹಿಸಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ. ಈ ಹಿನ್ನಲೆ ಮನೋಜ್ ಅಲಿಯಾಸ್ ಕೆಂಚ, ಸುಭಾಷ್ ಹಾಗೂ ಯೋಗೆಶ್ ಎಂಬುವವರನ್ನು ಬಂಧಿಸಲಾಗಿದೆ.
ಘಟನೆ ವಿವರ
ರೌಡಿಶೀಟರ್ ಮನೋಜ್ ಕಳೆದ ವರ್ಷ ಅಗಸ್ಟ್ನಲ್ಲಿ ಯುವತಿಯ ತಾಯಿಗೆ ಕರೆ ಮಾಡಿ, ನಿನ್ನ ಮಗಳ ಬೆತ್ತಲೆ ಫೋಟೋವನ್ನು ನಿನ್ನ ಅಳಿಯನಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ. ಇದರಿಂದ ಬೆದರಿದ ಯುವತಿಯ ತಾಯಿ, ರೌಡಿಶೀಟರ್ ಮನೋಜ್ಗೆ 40 ಸಾವಿರ ಹಣ ನೀಡಿದ್ದರು. ನಂತರ ಫೆಬ್ರವರಿ 9 ರಂದು ಮನೋಜ್ ಸಹಚರ ಕಾರ್ತಿಕ್ ಎಂಬಾತ ಯುವತಿಯ ತಾಯಿಗೆ ವಾಟ್ಸಪ್ ಮೂಲಕ ಕರೆ ಮಾಡಿ, ನಾನು (ಕಾರ್ತಿಕ್) ಮನೋಜ್ ಕಡೆಯ ಹುಡುಗ. ನೀವು 5 ಲಕ್ಷ ರೂ. ಕೊಡದಿದ್ದರೆ ನಿಮ್ಮಗಳ ಮಗಳ ನಗ್ನ ಫೋಟೋವನ್ನು ನಿನ್ನ ಅಳಿಯನಿಗೆ ಕಳಸುತ್ತೇನೆ ಎಂದು ಬ್ಲ್ಯಾಕ್ಮೇಲ್ ಮಾಡಿದ್ದಾನೆ.
ಇದನ್ನೂ ಓದಿ:ರೌಡೀಶೀಟರ್ ಜೈಲಿನಿಂದ ಯುವತಿಯ ನಗ್ನ ಫೋಟೋ ಕಳಿಸಿ ಹಣ ನೀಡುವಂತೆ ಬೆದರಿಕೆ
ಇದಾದ ನಂತರ ಫೆಬ್ರವರಿ 12 ರಂದು ಮನೋಜ್ ಜೈಲಿನಿಂದಲೇ ಯುವತಿಯ ತಾಯಿ ವಾಟ್ಸಾಪ್ ಹಾಗೂ ಮೆಸೆಂಜರ್ ಮೂಲಕ ಕರೆ ಮಾಡಿ, ಹಣ ನೀಡದಿದ್ದರೆ ನಿನ್ನ ಮಗಳ ನಗ್ನ ಫೋಟೋ ರಿವೀಲ್ ಮಾಡುತ್ತೇನೆ ಅಂತ ಬೆದರಿಕೆ ಹಾಕಿದ್ದಾನೆ. ಇದರಿಂದ ರೋಸಿ ಹೋದ ಸಂತ್ರಸ್ತರು ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇನ್ಫಾರ್ಮೇಶನ್ ಟೆಕ್ನಾಲಜಿ ಆ್ಯಕ್ಟ್ 67, ಐಪಿಸಿ 34 ಅಂಡ್ 384 ಅಡಿ ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರಣವನ್ನ ಸಿಸಿಬಿಗೆ ವರ್ಗಾವಣೆ ಮಾಡಲಾಗಿತ್ತು. ಜೈಲಿನಲ್ಲಿದ್ದ ಮನೋಜ್ ಅಲಿಯಾಸ್ ಕೆಂಚನನ್ನ ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದ ಸಿಸಿಬಿ, ಕೆಂಚನಿಗೆ ಸಹಾಯ ಮಾಡಿದ್ದ ಯೊಗೇಶ್ ಹಾಗೂ ಸುಭಾಷ್ ಅವರನ್ನು ಬಂಧಿಸಿದ್ದಾರೆ.
ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ