AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೌಡೀಶೀಟರ್​ ಜೈಲಿನಿಂದ ಯುವತಿಯ ನಗ್ನ ಫೋಟೋ ಕಳಿಸಿ ಹಣ ನೀಡುವಂತೆ ಬೆದರಿಕೆ

ಕಾಸು ಇದ್ದರೆ ಜೈಲಲ್ಲೂ ರಾಜರಂತೆ ಇರಬಹುದು ಎಂಬ ಮಾತು ಪದೆ ಪದೇ ಸತ್ಯವಾಗುತ್ತಿದೆ. ರಾಜ್ಯ ಕೇಂದ್ರ ಕಾರಾಗೃಹಗಳಲ್ಲಿನ ಕೈದಿಗಳು ಮೊಬೈಲ್​ ಫೋನ್ ಉಪಯೋಗಿಸುತ್ತಿದ್ದು, ದುಷ್ಕೃತ್ಯ ಎಸಗುತ್ತಿದ್ದಾರೆ. ಇದನ್ನು ತಡೆಗಟ್ಟಲು ರಾಜ್ಯ ಪೊಲೀಸ್​ ಇಲಾಖೆ ಎಷ್ಟೇ ಕ್ರಮ ಕೈಗೊಂಡರು ಉಪಯೋಗವಾಗುತ್ತಿಲ್ಲ ಎಂಬ ಮಾತು ಈ ಪ್ರಕರಣದ ಮೂಲಕ ಸತ್ಯವಾಗಿದೆ.

ರೌಡೀಶೀಟರ್​ ಜೈಲಿನಿಂದ ಯುವತಿಯ ನಗ್ನ ಫೋಟೋ ಕಳಿಸಿ ಹಣ ನೀಡುವಂತೆ ಬೆದರಿಕೆ
ಆರೋಪಿ ಮನೋಜ್​​​, ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Feb 15, 2024 | 9:35 AM

Share

ಬೆಂಗಳೂರು, ಫೆಬ್ರವರಿ 15: ಜೈಲಿನಲ್ಲಿ ಇದ್ದುಕೊಂಡು ಯುವತಿಯ (Young Girl) ನಗ್ನ ಫೋಟೋ ಕಳಿಸಿ ಹಣ ನೀಡುವಂತೆ ಬೆದರಿಕೆ ಹಾಕಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ರೌಡಿಶೀಟರ್​​​ ಮನೋಜ್ ಅಲಿಯಾಸ್​​ ಕೆಂಚ ಬ್ಯ್ಲಾಕ್​ಮೇಲ್ (Blackmail) ಮಾಡಿದ ಆರೋಪಿ. ರೌಡಿಶೀಟರ್​​​ ಮನೋಜ್ ಕಳೆದ ವರ್ಷ ಅಗಸ್ಟ್​​ನಲ್ಲಿ ಯುವತಿಯ ತಾಯಿಗೆ ಕರೆ ಮಾಡಿ, ನಿನ್ನ ಮಗಳ ಬೆತ್ತಲೆ ಫೋಟೋವನ್ನು ನಿನ್ನ ಅಳಿಯನಿಗೆ ಕಳುಹಿಸುತ್ತೇನೆ ಅಂತ ಬೆದರಿಕೆ ಹಾಕಿದ್ದನು. ಇದರಿಂದ ಬೆದರಿದ ಯುವತಿಯ ತಾಯಿ, ರೌಡಿಶೀಟರ್​​​ ಮನೋಜ್​​ಗೆ 40 ಸಾವಿರ ಹಣ ನೀಡಿದ್ದರು.

ನಂತರ ಫೆಬ್ರವರಿ 9 ರಂದು ಮನೋಜ್​ ಸಹಚರ ಕಾರ್ತಿಕ್​ ಯುವತಿಯ ತಾಯಿಗೆ ವಾಟ್ಸಪ್ ಮೂಲಕ ಕರೆ ಮಾಡಿ, ನಾನು (ಕಾರ್ತಿಕ್​) ಮನೋಜ್​ ಕಡೆಯ ಹುಡುಗ. ನೀವು 5 ಲಕ್ಷ ರೂ. ಕೊಡದಿದ್ದರೆ ನಿಮ್ಮಗಳ ಮಗಳ ನಗ್ನ ಫೋಟೋವನ್ನು ನಿನ್ನ ಅಳಿಯನಿಗೆ ಕಳಸುತ್ತೇನೆ ಅಂತ ಬ್ಲ್ಯಾಕ್​ಮೇಲ್​ ಮಾಡಿದ್ದಾನೆ. ಇದಾದ ಬಳಿಕ ಫೆಬ್ರವರಿ 12 ರಂದು ಮನೋಜ್​​ ಜೈಲಿನಿಂದಲೇ ಯುವತಿಯ ತಾಯಿಗೆ ವಾಟ್ಸಾಪ್ ಹಾಗೂ ಮೆಸೆಂಜರ್ ಮೂಲಕ ಕರೆ ಮಾಡಿ, ಹಣ ನೀಡದಿದ್ದರೆ ನಿನ್ನ ಮಗಳ ನಗ್ನ ಫೋಟೋ ರಿವೀಲ್ ಮಾಡುತ್ತೇನೆ ಅಂತ ಬೆದರಿಕೆ ಹಾಕಿದ್ದಾನೆ.

ಇದರಿಂದ ರೋಸಿಹೋದ ಸಂತ್ರಸ್ತರು ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ಫಾರ್ಮೇಶನ್ ಟೆಕ್ನಾಲಜಿ ಆ್ಯಕ್ಟ್ 67, ಐಪಿಸಿ 34 ಅಂಡ್ 384 ಅಡಿ ಪ್ರಕರಣ ದಾಖಲಾಗಿದೆ. ಸದ್ಯ ಮನೋಜ್​ನನ್ನು ಜೈಲಿನಿಂದ ಬಾಡಿವಾರೆಂಟ್ ಮೇಲೆ ವಶಕ್ಕೆ ಪಡೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಯಸಿಯ ಫೋಟೋ ಎಡಿಟ್​ ಮಾಡಿ ಬ್ಯ್ಲಾಕ್​ಮೇಲ್

ಕಳೆದ ವರ್ಷ ನವೆಂಬರ್​​ನಲ್ಲಿ ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ಪ್ರೀತಿ ನಿರಾಕರಿಸಿದ್ದಕ್ಕೆ ಡೀಪ್​ ಫೇಕ್ ​ಮೂಲಕ ಯಾರದೋ ನಗ್ನ ದೇಹಕ್ಕೆ ತಾನು ಪ್ರೀತಿಸಿದ ಯುವತಿಯ ಭಾವಚಿತ್ರ ಅಳವಡಿಸಿ ಯುವಕ ಬ್ಯ್ಲಾಕ್​ಮೇಲ್ ​​ಮಾಡಿರುವ ಘಟನೆ ನಡೆದಿತ್ತು. ಫೋಟೋ ಎಡಿಟ್​ ಮಾಡಿ ಬ್ಯ್ಲಾಕ್​ಮೇಲ್​ ಮಾಡಿದ್ದ ಆರೋಪಿ ಮಂಥನ್ ಪಾಟೀಲ್​ (22)​ನನ್ನು ಖಾನಾಪುರ ಪೊಲೀಸರು ಬಂಧಿಸಿದ್ದರು. ಯುವತಿ ಮತ್ತು ಆರೋಪಿ ಮಂಥನ್ ಪಾಟೀಲ್ ಒಂದೇ ಊರವನರಾಗಿದ್ದರು. ಮಂಥನ್ ಪಾಟೀಲ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಆರೋಪಿ ಮಂಥನ್​ ಪಾಟೀಲ್​​ ಯುವತಿಗೆ ಪ್ರೀತಿ ಮಾಡುವಂತೆ ಬೆನ್ನು ಬಿದ್ದಿದ್ದನು.

ಇದನ್ನೂ ಓದಿ: ಇನ್​​ಸ್ಟಾಗ್ರಾಮ್ ಮೂಲಕ ಯುವತಿಯರನ್ನು ಪರಿಚಯಿಸಿಕೊಂಡು ನಗ್ನ ಚಿತ್ರ ಪಡೆದು ಬ್ಲ್ಯಾಕ್​ಮೇಲ್​​ ಮಾಡುತ್ತಿದ್ದ ಆರೋಪಿ ಅರೆಸ್ಟ್​​

ಆದರೆ ಯುವತಿ ಈತನ ಲವ್​ ಪ್ರಪೋಸಲ್​ಗೆ ಒಪ್ಪಿರಲಿಲ್ಲ. ಹೀಗಾಗಿ ಆರೋಪಿ ಮಂಥನ್​ ಪಾಟೀಲ್​, ಸಾಮಾಜಿಕ ಜಾಲತಾಣದಿಂದ ಯುವತಿಯ ಫೋಟೋ ತೆಗೆದುಕೊಂಡು ನಗ್ನವಾಗಿ ಎಡಿಟ್​ ಮಾಡಿ ವೈರಲ್​ ಮಾಡುತ್ತೇನೆ ಎಂದು ಬ್ಲ್ಯಾಕ್​​ಮೇಲ್​ ಮಾಡಿದ್ದನು. ಆದರೂ ಯುವತಿ ಪ್ರೀತಿ ಮಾಡಲು ಒಪ್ಪಿರುವುದಿಲ್ಲ. ಯುವತಿಯ ಮೇಲೆ ಮತ್ತಷ್ಟು ಒತ್ತಡ ಹಾಕಲು ಆರೋಪಿ ಮಂಥನ್​ ಪಾಟೀಲ್​ ಯುವತಿ ಮತ್ತು ಆಕೆಯ ಗೆಳತಿಯರು ಒಟ್ಟಿಗೆ ಇರುವ ಭಾವಚಿತ್ರ ತೆಗೆದುಕೊಂಡು ಯಾರದ್ದೋ ನಗ್ನ ಭಾವಚಿತ್ರಕ್ಕೆ ಇವರ ಮುಖವನ್ನು ಅಳವಡಿಸಿದ್ದನು. ನಂತರ dram_quen_arati8 ಅಂತಾ ಫೇಕ್ ಅಕೌಂಟ್ ಕ್ರಿಯೆಟ್ ಮಾಡಿ ಎಡಿಟ್​ ಮಾಡಿದ್ದ ಯುವತಿಯರ ಭಾವಚಿತ್ರವನ್ನು ಅಪ್ಲೋಡ್​ ಮಾಡಿದ್ದನು.

ಜೈಲಿನಲ್ಲಿ ಮೊಬೈಲ್​ ಪತ್ತೆ, ಗಡ್ಕರಿಗೆ ಬೆದರಿಕೆ

ಕಾಸು ಇದ್ದರೆ ಜೈಲಲ್ಲೂ ರಾಜರಂತೆ ಇರಬಹುದು ಎಂಬ ಮಾತು ಪದೆ ಪದೇ ಸತ್ಯವಾಗುತ್ತಿದೆ. ರಾಜ್ಯ ಕೇಂದ್ರ ಕಾರಾಗೃಹಗಳಲ್ಲಿನ ಕೈದಿಗಳು ಮೊಬೈಲ್​ ಫೋನ್ ಉಪಯೋಗಿಸುತ್ತಿದ್ದು, ದುಷ್ಕೃತ್ಯ ಎಸಗುತ್ತಿದ್ದಾರೆ. ಕಳೆದ ವರ್ಷ ಬೆಳಗಾವಿಯ ಹಿಂಡಗಲಗಾ ಕೇಂದ್ರ ಕಾರಾಗೃಹದಿಂದ ಕೇಂದ್ರ ರಸ್ತೆ ಸಾರಿಗೆ ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಅವರಿಗೆ ಜೀವ ಬೆದರಿಕೆ ಕರೆ ಮಾಡಲಾಗಿತ್ತು. ಇದಾದ ನಂತರ ಸ್ವತಃ ಗೃಹ ಸಚಿವ ಡಾ. ಜಿ ಪರಮೇಶ್ವರ್​ ಅವರು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಜೈಲಿನೊಳಗೆ ಮೊಬೈಲ್​ಗಳು ಹೇಗೆ ಬರುತ್ತವೆ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದರು.

ಸಚಿವರು ಕ್ಲಾಸ್​ ತೆಗೆದುಕೊಂಡ ನಂತರ ಫುಲ್​ ಆಕ್ಟಿವ್​ ಆದ ರಾಜ್ಯ ಪೊಲೀಸ್​ ಇಲಾಖೆ, ಕಾರಾಗೃಹಗಳಲ್ಲಿ ತಪಾಸಣೆಗೆ ಇಳಿದಿದ್ದರು. ಈ ವೇಳೆ ಕೈದಿಗಳ ಬಳಿ ಫೋನ್​ಗಳು ಪತ್ತೆಯಾಗಿದ್ದವು. ಈ ಬಗ್ಗೆ ಕಠಿಣ ಕ್ರಮಗೊಳ್ಳಲಾಗುವುದು ಎಂದು ಗೃಹ ಸಚಿವರು ಭರವಸೆ ನೀಡಿದ್ದರು. ಆದರೂ ಕೂಡ ಸರ್ಕಾರ ಎಷ್ಟೇ ಕ್ರಮ ಕೈಗೊಂಡು ಜೈಲಿನಲ್ಲಿ ಅಕ್ರಮ ಚಟುವಟಿಕೆ ನಿಲ್ಲುತ್ತಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ