ಅಸಲಿಗೆ ಸರ್ಕಾರಿ ಅತಿಥಿಗೃಹ ಕೆಕೆ ಗೆಸ್ಟ್ ಹೌಸ್​​ ನಲ್ಲಿ ಚೈತ್ರಾ ಮೇಡಂಗೆ ರೂಮ್​ ಸಿಕ್ಕಿದ್ದು ಹೇಗೆ? ಯಾರ, ಯಾವ ಪ್ರಭಾವ ಅಲ್ಲಿ ಕೆಲಸ ಮಾಡಿತ್ತು?

| Updated By: ಸಾಧು ಶ್ರೀನಾಥ್​

Updated on: Sep 22, 2023 | 11:57 AM

ಬೆಂಗಳೂರಿನಲ್ಲಿರುವ ಸರ್ಕಾರಿ ಅತಿಥಿ ಗೃಹದಲ್ಲಿ ಚೈತ್ರಾ ಮೇಡಂ ಯಾರ/ಯಾವ ಪ್ರಭಾವ ಬಳಸಿ ರೂಂ ಬುಕ್ ಮಾಡಿದಳು ಅನ್ನೋದೇ ಆಶ್ಚರ್ಯ, ಅನುಮಾನಕ್ಕೆ ಕಾರಣವಾಗಿದೆ. ಕೆ.ಕೆ. ಗೆಸ್ಟ್ ಹೌಸ್ ರೂಂ ಬುಕ್ ಮಾಡಿ ಸಹಕಾರ ನೀಡಿರೋದು ಯಾರು ಅನ್ನೋ ಬಗ್ಗೆ ಈಗ ಅನುಮಾನ ಎದ್ದಿದೆ. ತನಗೆ ಪರಿಚಯವಿರುವ ಪ್ರಭಾವಿ ರಾಜಕೀಯ ಮುಖಂಡನ ಹೆಸರು ಬಳಕೆ‌ ಮಾಡಿಕೊಂಡಿರುವ ಸಾಧ್ಯತೆಯಿದೆ.

ಅಸಲಿಗೆ ಸರ್ಕಾರಿ ಅತಿಥಿಗೃಹ ಕೆಕೆ ಗೆಸ್ಟ್ ಹೌಸ್​​ ನಲ್ಲಿ ಚೈತ್ರಾ ಮೇಡಂಗೆ ರೂಮ್​ ಸಿಕ್ಕಿದ್ದು ಹೇಗೆ? ಯಾರ, ಯಾವ ಪ್ರಭಾವ ಅಲ್ಲಿ ಕೆಲಸ ಮಾಡಿತ್ತು?
ಕೆಕೆ ಗೆಸ್ಟ್ ಹೌಸ್​​ ನಲ್ಲಿ ಚೈತ್ರಾ ಮೇಡಂಗೆ ರೂಮ್​ ಸಿಕ್ಕಿದ್ದು ಹೇಗೆ?
Follow us on

ಬೆಂಗಳೂರು: ಬೈಂದೂರು ಅಸೆಂಬ್ಲಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ (MLA Ticket Cheating) ಸುಮಾರು 5 ಕೋಟಿ ರೂಪಾಯಿ ವಂಚನೆ ಎಸಗಿರುವ ಪ್ರಕರಣದ ಸೂತ್ರಧಾರಣಿ​ ಚೈತ್ರಾ ಕುಂದಾಪುರ (Chaitra Kundapura) ಸಂತ್ರಸ್ತ ಗೋವಿಂದ ಬಾಬು ಪೂಜಾರಿಯವರನ್ನು (Govinda Babu Pujari) ನಂಬಿಸಲು ಬರೋಬ್ಬರಿ ಎರಡು ಗಂಟೆ ಕಾಲ ಹೈ ಡ್ರಾಮಾ ನಡೆಸಿರುವುದು ಬಹಿರಂಗವಾಗಿದೆ.

ಬೆಂಗಳೂರಿನಲ್ಲಿರುವ ಸರ್ಕಾರಿ ಅತಿಥಿ ಗೃಹ ಕೆಕೆ ಗೆಸ್ಟ್ ಹೌಸ್​​​ ನಲ್ಲಿ ನಡೆದಿತ್ತು ಆ ಎರಡು ಗಂಟೆಗಳ ಡ್ರಾಮಾ. ಡ್ರಾಮಾ ಪ್ರದರ್ಶನ ಮಾಡಲು ಡೈರೆಕ್ಟರ್ ಚೈತ್ರಾ ಕುಂದಾಪುರಳಿಂದಲೇ ಕೆ.ಕೆ. ಗೆಸ್ಟ್ ಹೌಸ್ ರೂಂ (KK Guest House) ಬುಕ್ಕಿಂಗ್ ಆಗಿತ್ತು. ಚೈತ್ರಾ ಕುಂದಾಪುರ, ತನ್ನದೇ ಹೆಸರನ್ನು ಬಳಸಿಕೊಂಡು ರೂಂ ಬುಕ್ ಮಾಡಿದ್ದಳು. ಕುತೂಹಲಕಾರಿ ಸಂಗತಿಯೆಂದರೆ ಜನಸಾಮಾನ್ಯರು ಕೆ.ಕೆ.‌ ಗೆಸ್ಟ್ ಹೌಸ್ ನತ್ತ ಹೆಜ್ಜೆ ಹಾಕುವುದೇ ಅಸಾಧ್ಯದ ಮಾತಾಗಿರುವಾಗ, ಅದೇ ಕೆ.ಕೆ.‌ ಗೆಸ್ಟ್ ಹೌಸ್ ನಲ್ಲಿ ರೂಂ ಪಡೆಯುವ ಮಾತು ಇನ್ನೂ ಕಷ್ಟ ಸಾಧ್ಯ! ಅಂತಹುದರಲ್ಲಿ ಚೈತ್ರಾ ಮೇಡಂ ಯಾರ/ಯಾವ ಪ್ರಭಾವ ಬಳಸಿ ರೂಂ ಬುಕ್ ಮಾಡಿದಳು ಅನ್ನೋದೇ ಆಶ್ಚರ್ಯ, ಅನುಮಾನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಗೋವಿಂದ ಬಾಬು ಆಪ್ತನಿಗೆ ಸಿಸಿಬಿ ಬುಲಾವ್, ಹಿಂದೂ ಕಾರ್ಯಕರ್ತ ತುಡುಕೂರು ಮಂಜುನಿಂದ ಮಹತ್ವದ ಮಾಹಿತಿ ಪಡೆಯಲಿರುವ ಸಿಸಿಬಿ

ಕೆ.ಕೆ. ಗೆಸ್ಟ್ ಹೌಸ್ ರೂಂ ಬುಕ್ ಮಾಡಿ ಸಹಕಾರ ನೀಡಿರೋದು ಯಾರು ಅನ್ನೋ ಬಗ್ಗೆ ಈಗ ಅನುಮಾನ ಎದ್ದಿದೆ. ತನಗೆ ಪರಿಚಯವಿರುವ ಪ್ರಭಾವಿ ರಾಜಕೀಯ ಮುಖಂಡನ ಹೆಸರು ಬಳಕೆ‌ ಮಾಡಿಕೊಂಡು, ಚೈತ್ರಾ ಮೇಡಂ ಸುಲಭವಾಗಿ ರೂಂ ಬುಕ್ಕಿಂಗ್ ಮಾಡಿಸಿರುವ ಸಾಧ್ಯತೆಯಿದೆ.

ಅದೇ ಕೆ.ಕೆ. ಗೆಸ್ಟ್ ಹೌಸಿನ ಕೋಣೆಯಲ್ಲಿ ಜಸ್ಟ್ ಎರಡೇ ನಿಮಿಷದಲ್ಲಿ‌ ಚನ್ನಾ ನಾಯಕ್ ನ ಕೈಯಲ್ಲಿ ಡ್ರಾಮಾ ಪ್ರದರ್ಶನ ನಡೆದಿರುವುದು. ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯನ ಪಾತ್ರಧಾರಿ ಚನ್ನಾ ನಾಯ್ಕ್ ನಿಂದ ಡ್ರಾಮಾ ಮಾಡಿಸಿ, ಬಿಜೆಪಿ ಟಿಕೆಟ್​ ಆಕಾಂಕ್ಷಿ, ಸಂತ್ರಸ್ತ, ಉದ್ಯಮಿ ಗೋವಿಂದ ಬಾಬು ಪೂಜಾರಿಯನ್ನ ನಂಬಿಸಿತ್ತು ಚೈತ್ರಾ ಅಂಡ್ ಗ್ಯಾಂಗ್!

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

 

Published On - 11:55 am, Fri, 22 September 23