ಗೋವಿಂದ ಬಾಬು ಆಪ್ತನಿಗೆ ಸಿಸಿಬಿ ಬುಲಾವ್, ಹಿಂದೂ ಕಾರ್ಯಕರ್ತ ತುಡುಕೂರು ಮಂಜುನಿಂದ ಮಹತ್ವದ ಮಾಹಿತಿ ಪಡೆಯಲಿರುವ ಸಿಸಿಬಿ
ಇಡೀ ವಂಚನೆ ಪ್ರಕರಣಕ್ಕೆ ಬಹು ಮುಖ್ಯ ಸಾಕ್ಷಿಯಾಗಿರುವ ಆರೋಪಿಗಳಾದ ಕಡೂರು ಮೂಲದ ರಮೇಶ್ ಮತ್ತು ಧನರಾಜ್ ಮೂಲಕ ಚೈತ್ರಾ-ಗಗನ್ ಟೀಮ್ ನಡೆಸಿದ ವಂಚನೆಯ ಪ್ಲಾನ್ ಅನ್ನು ಗೋವಿಂದ ಬಾಬುಗೆ ತಿಳಿಸಿದ್ದ ಚಿಕ್ಕಮಗಳೂರು ಜಿಲ್ಲೆಯ ಭಜರಂಗದಳದ ಮಾಜಿ ಸಂಚಾಲಕ ತುಡುಕೂರು ಮಂಜುಗೆ ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಚಿಕ್ಕಮಗಳೂರು, ಸೆಪ್ಟೆಂಬರ್ 22: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಚೈತ್ರಾ ಕುಂದಾಪುರ-ಗಗನ್ ಟೀಮ್ (Chaitra Kundapura) ಉದ್ಯಮಿ ಗೋವಿಂದ ಬಾಬು ಪೂಜಾರಿಗೆ 5 ಕೋಟಿ ರೂಪಾಯಿ ವಂಚನೆ ನಡೆಸಿರುವ ಪ್ರಕರಣ ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರಕರಣದಲ್ಲಿ ಒಟ್ಟು 8 ಜನರನ್ನ ಬಂಧಿಸಿರುವ ಸಿಸಿಬಿ ಪೊಲೀಸರು (Bangalore CCB) ವಂಚನೆಗೆ ಸಂಬಂಧಿಸಿದಂತೆ ತನಿಖೆಯನ್ನ ಚುರುಕುಗೊಳಿಸಿದ್ದು, ದೂರವಾಣಿ ಕರೆ ಮಾಡಿ ತನಿಖೆಗೆ ಹಾಜರಾಗುವಂತೆ ಗೋವಿಂದ ಬಾಬು ಆಪ್ತನಿಗೆ ಬುಲಾವ್ ನೀಡಿದೆ (Chikkamagaluru News).
ಇಡೀ ವಂಚನೆ ಪ್ರಕರಣಕ್ಕೆ ಬಹು ಮುಖ್ಯ ಸಾಕ್ಷಿಯಾಗಿರುವ ಆರೋಪಿಗಳಾದ ಕಡೂರು ಮೂಲದ ರಮೇಶ್ ಮತ್ತು ಧನರಾಜ್ ಮೂಲಕ ಚೈತ್ರಾ-ಗಗನ್ ಟೀಮ್ ನಡೆಸಿದ ವಂಚನೆಯ ಪ್ಲಾನ್ ಅನ್ನು ಗೋವಿಂದ ಬಾಬುಗೆ ತಿಳಿಸಿದ್ದ ಚಿಕ್ಕಮಗಳೂರು ಜಿಲ್ಲೆಯ ಭಜರಂಗದಳದ ಮಾಜಿ ಸಂಚಾಲಕ ತುಡುಕೂರು ಮಂಜುಗೆ ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ. ವಂಚನೆ ಸಂಬಂಧ ವಿಧಾನ ಸಭೆ ಚುನಾವಣೆ ಮುಗಿದ ಬಳಿಕ ಮೇ ತಿಂಗಳಿನಲ್ಲಿ ಚಿಕ್ಕಮಗಳೂರಿನಲ್ಲಿ ತುಡುಕೂರು ಮಂಜುನನ್ನ ಭೇಟಿಯಾಗಿದ್ದ ಗೋವಿಂದ ಬಾಬು, ಚೈತ್ರಾ-ಗಗನ್ ನಡೆಸಿದ ವಂಚನೆ ಬಗ್ಗೆ ಮಾಹಿತಿ ನೀಡಿದ್ದರು. ಟಿಕೆಟ್ ಕೊಡಿಸುವುದಾಗಿ ವಂಚನೆ ಮಾಡಿರುವುದಾಗಿ ತಿಳಿಸಿದ್ರು.
ಗಗನ್, ಚೈತ್ರಾ, ಹಾಲಶ್ರೀ ಹೊರತುಪಡಿಸಿ ಇನ್ನುಳಿದ ಆರೋಪಿಗಳ ಸುಳಿವು ಗೋವಿಂದ ಬಾಬುಗೆ ಇರಲಿಲ್ಲ:
ಟಿಕೆಟ್ ಗಾಗಿ ಚೈತ್ರಾ, ಗಗನ್, ಹಾಲಶ್ರೀ ಸ್ವಾಮೀಜಿ ಮಾತು ನಂಬಿದ್ದ ಗೋವಿಂದ ಬಾಬು ಟಿಕೆಟ್ಗಾಗಿ 5 ಕೋಟಿ ಹಣ ನೀಡಿದ್ರು. ಆದ್ರೆ ಚೈತ್ರಾ ,ಗಗನ್ ಪರಿಚಯಿಸಿದ್ದ RSS ಪ್ರಚಾರಕ ವಿಶ್ವನಾಥ್ ಜೀ, ಕೇಂದ್ರ ಚುನಾವಣಾ ಸಮಿತಿ ಸದಸ್ಯರು ಯಾರು ಎಂಬುದರ ಮಾಹಿತಿ ಇರಲಿಲ್ಲ. ಹಣ ವಾಪಸ್ ಕೇಳಿದಾಗ ವಿಶ್ವನಾಥ್ ಜೀ, ಕೇಂದ್ರ ಚುನಾವಣಾ ಸಮಿತಿ ಸದಸ್ಯ ನಿಮ್ಮ ಹಣವನ್ನ ತೆಗೆದುಕೊಂಡು ಹೋಗಿದ್ದಾರೆ. ವಿಶ್ವನಾಥ್ ಜೀ ಸಾವನ್ನಪ್ಪಿದ್ದಾರೆ ಎಂದು ಸ್ಟೋರಿ ಹೇಳಿದ್ದರು.
ಗಗನ್ ಮಾಹಿತಿ ಕಲೆಹಾಕಲು ಮಂಜು ಮೂಲಕ ತಂಡ ರಚನೆ ಮಾಡಿದ್ದ ಗೋವಿಂದ ಬಾಬು:
ವಂಚನೆ ಸಂಬಂಧ ಕಡೂರಿನಲ್ಲಿ ತನಿಖೆ ನಡೆಸಲು ತನ್ನದೇ ತಂಡವನ್ನ ಗೋವಿಂದ ಬಾಬು ಸಿದ್ದ ಮಾಡಿದ್ದರು. ಮಂಜು ಮೂಲಕ ತಂಡ ರಚನೆ ಮಾಡಿ ಗಗನ್ ಮಾಹಿತಿಯನ್ನ ಒಂದು ತಿಂಗಳ ಕಾಲ ಪಡೆದುಕೊಂಡು ಧನರಾಜ್ ರಮೇಶ್ ನನ್ನ ಮಂಜು ಸಹಾಯದಿಂದ ಪತ್ತೆ ಹಚ್ಚಿ ಚೈತ್ರಾ ಗಗನ್ ನಡೆಸಿದ ವಂಚನೆ ಬಗ್ಗೆ ಸಾಕ್ಷಿ ಸಂಗ್ರಹ ಮಾಡಿದ್ರು.
ಇದನ್ನೂ ಓದಿ: ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ವಂಚನೆ ಪ್ರಕರಣ: ಗೋವಿಂದ ಬಾಬು ವಿರುದ್ಧ ಇಡಿಗೆ ಪತ್ರ ಬರೆದ ಚೈತ್ರಾ ಕುಂದಾಪುರ !
ಚೈತ್ರಾ ,ಗಗನ್ ಗೋವಿಂದ ಬಾಬು ಪೂಜಾರಿಗೆ ಬೈಂದೂರು ಟಿಕೆಟ್ ಕೊಡಿಸುವುದಾಗಿ ನಂಬಿಸಿ ೫ ಕೋಟಿ ವಂಚನೆ ಪ್ಲಾನ್ ಕೇಳಿ ಗೋವಿಂದ ಬಾಬು ಶಾಕ್ ಆಗಿದ್ದಾರೆ. ಹಣ ವಾಪಸ್ ನೀಡುವಂತೆ ಗಗನ್ ಗೆ ಮಂಜು ಗೋವಿಂದ ಬಾಬು ಪರವಾಗಿ ನಾಲ್ಕು ಬಾರಿ ಸಂಧಾನ ನಡೆಸಿದ್ದರು. ಗಗನ್ ಚೈತ್ರಾ ಗೋವಿಂದ ಬಾಬು ಸೇರಿದಂತೆ ಮಂಜು ವಿರುದ್ಧ ಬ್ಲಾಕ್ ಮೇಲ್, ಅತ್ಯಾಚಾರ ಯತ್ನ ಪ್ರಕರಣ ದಾಖಲು ಮಾಡುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಮಂಜು ಮೂಲಕ ಮಹತ್ವದ ಮಾಹಿತಿ ಪಡೆಯಲಿರುವ ಸಿಸಿಬಿ:
ಕಡೂರಿನ ಸಲೂನ್ ನಲ್ಲಿ ಗಗನ್ ಸೂಚನೆಯಂತೆ ಧನರಾಜ್ ಚನ್ನಾನಾಯ್ಕ್ ನಿಗೆ ಕೇಂದ್ರ ಚುನಾವಣಾ ಸದಸ್ಯನ ವೇಷ ಹಾಕಿಸಿದ್ರು. ಈ ಒಂದು ಸುಳಿವಿನ ಮೇಲೆ ಧನರಾಜ್ ರಮೇಶ್ ನನ್ನ ವಿಚಾರಣೆ ನಡೆಸಿದಾಗ ಸಂಪೂರ್ಣ ವಂಚನೆ ಬಯಲಾಗಿತ್ತು. ಇಂದು ಸಿಸಿಬಿ ಪೊಲೀಸರ ಮುಂದೆ ಹಾಜರಾಗಲಿರುವ ಮಂಜು ಗೋವಿಂದ ಬಾಬು ಮತ್ತು ಚೈತ್ರಾ ಕುಂದಾಪುರ, ಗಗನ್ ಧನರಾಜ್ ರಮೇಶ್, ಚನ್ನಾನಾಯ್ಕ್ ಗೆ ಸಂಬಂಧಿಸಿದ ಮಾಹಿತಿಯನ್ನ ನೀಡಲಿದ್ದು, ಚೈತ್ರಾ ಗಗನ್ ಗೆ ಸಂಧಾನ ಮಾಡಲು ಯತ್ನಿಸಿದ ದಾಖಲೆ ಸೇರಿದಂತೆ ತುಡುಕೂರು ಮಂಜು ಗೆ ಚೈತ್ರಾ ಕುಂದಾಪುರ ದೂರು ನೀಡುವುದಾಗಿ ಬೆದರಿಕೆ ಹಾಕಿರುವ ಮಾಹಿತಿಯನ್ನ ನೀಡಲಿದ್ದು ಮಂಜು ಹೇಳಿಕೆ ಸಿಸಿಬಿ ಪೋಲಿಸರಿಗೆ ಈ ಪ್ರಕರಣದಲ್ಲಿ ಮಹತ್ವದ ಸಾಕ್ಷಿಯಾಗಲಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ