AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾರ್ಕ್​ ಮಾಡಿದ್ದ ನಿಮ್ಮ ಕಾರು ಎಲ್ಲಿದೆ ಎಂದು ಮರೆತುಹೋಗಿದೆಯೇ? ಗೂಗಲ್ ಮ್ಯಾಪ್ಸ್‌ನಲ್ಲಿದೆ ಸುಲಭ ಪರಿಹಾರ!

ಜನನಿಬಿಡ ಪ್ರದೇಶಗಳು ಅಥವಾ ಮಾಲ್‌ಗಳಲ್ಲಿ ಕಾರನ್ನು ಪಾರ್ಕ್ ಮಾಡಿ ಜಾಗ ಮರೆತುಹೋಗುವ ಸಮಸ್ಯೆಗೆ ಗೂಗಲ್ ಮ್ಯಾಪ್ಸ್‌ನಲ್ಲಿ ಪರಿಹಾರವಿದೆ. ಮ್ಯಾಪ್‌ನಲ್ಲಿರುವ 'ಸೇವ್ ಪಾರ್ಕಿಂಗ್' ಫೀಚರ್ ಬಳಸಿ ವಾಹನದ ಸ್ಥಳ, ಪಿಲ್ಲರ್ ಸಂಖ್ಯೆ ಹಾಗೂ ಫೋಟೋ ಸೇವ್ ಮಾಡಿಕೊಳ್ಳಬಹುದು. ವಾಹನದ ಬಳಿಗೆ ಹಿಂತಿರುಗುವಾಗ ಮ್ಯಾಪ್ ನೀಡುವ ನೇರ ಮಾರ್ಗದರ್ಶನದ ಮೂಲಕ ಕಾರನ್ನು ಸುಲಭವಾಗಿ ಹುಡುಕಬಹುದು.

ಪಾರ್ಕ್​ ಮಾಡಿದ್ದ ನಿಮ್ಮ ಕಾರು ಎಲ್ಲಿದೆ ಎಂದು ಮರೆತುಹೋಗಿದೆಯೇ? ಗೂಗಲ್ ಮ್ಯಾಪ್ಸ್‌ನಲ್ಲಿದೆ ಸುಲಭ ಪರಿಹಾರ!
ಸಾಂದರ್ಭಿಕ ಚಿತ್ರImage Credit source: gettyimages.com
ಭಾವನಾ ಹೆಗಡೆ
|

Updated on: Sep 07, 2026 | 2:23 PM

Share

ಮುಖ್ಯಾಂಶಗಳು

  • ಪಾರ್ಕ್ ಮಾಡಿದ ಕಾರಿನ ಸ್ಥಳ ನೆನಪಿಡಲು ಗೂಗಲ್ ಮ್ಯಾಪ್ಸ್‌ನಲ್ಲಿದೆ ಉಪಯುಕ್ತ ಫೀಚರ್.
  • ಬ್ಲೂ ಡಾಟ್ ಬಳಸಿ ವಾಹನದ ಪಾರ್ಕಿಂಗ್ ಲೋಕೇಶನ್ ಸುಲಭವಾಗಿ ಸೇವ್ ಮಾಡಬಹುದು.
  • ಪಾರ್ಕಿಂಗ್ ಸ್ಥಳಕ್ಕೆ ಮ್ಯಾಪ್ ನೀಡುವ ಡೈರೆಕ್ಷನ್ ಬಳಸಿ ಸುಲಭವಾಗಿ ತಲುಪಬಹುದು.

ಬೆಂಗಳೂರು, ಸೆಪ್ಟೆಂಬರ್ 07: ಹೊಸ ನಗರಗಳು, ಮಾಲ್‌ಗಳು ಅಥವಾ ಜನನಿಬಿಡ ಮಾರುಕಟ್ಟೆಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡಿದಾಗ, ಹಲವು ಬಾರಿ ನಾವು ಕಾರನ್ನು ಎಲ್ಲಿ ನಿಲ್ಲಿಸಿದ್ದೇವೆ ಎಂಬುದನ್ನೇ ಮರೆತುಬಿಡುತ್ತೇವೆ. ಇದರಿಂದಾಗಿ ಸ್ವಂತ ವಾಹನ ಹುಡುಕಲು ಗಂಟೆಗಟ್ಟಲೆ ಸಮಯ ವ್ಯರ್ಥವಾಗುತ್ತದೆ. ಆದರೆ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ ಗೂಗಲ್ ಮ್ಯಾಪ್ಸ್‌ನ ಸೇವ್ಡ್ ಪಾರ್ಕಿಂಗ್ ಫೀಚರ್ ಮೂಲಕ ಈ ಸಮಸ್ಯೆಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು.

ಪಾರ್ಕಿಂಗ್ ಲೋಕೇಶನ್ ಸೇವ್ ಮಾಡುವುದು ಹೇಗೆ?

  1.  ಆಂಡ್ರಾಯ್ಡ್ ಮತ್ತು ಐಫೋನ್ಗಳಲ್ಲಿ ಮೊದಲು ನಿಮ್ಮ ಫೋನ್‌ನಲ್ಲಿ GPS ಆನ್ ಮಾಡಿ, ಗೂಗಲ್ ಮ್ಯಾಪ್ಸ್ ಆ್ಯಪ್ ತೆರೆಯಿರಿ.
  2. ನಿಮ್ಮ ಪ್ರಸ್ತುತ ಸ್ಥಳವನ್ನು ತೋರಿಸುವ ಬ್ಲೂ ಡಾಟ್ ಮೇಲೆ ಟ್ಯಾಪ್ ಮಾಡಿ.
  3. ಕೆಳಗೆ ಬರುವ ಆಯ್ಕೆಗಳಲ್ಲಿ ಸೇವ್ ಪಾರ್ಕಿಂಗ್ ಎಂಬುದನ್ನು ಆಯ್ಕೆ ಮಾಡಿ.
  4. ಹೀಗೆ ಮಾಡಿದಾಗ ಮ್ಯಾಪ್‌ನಲ್ಲಿ ‘ಪಿ’ ಸಿಂಬಲ್ ಕಾಣಿಸಿಕೊಳ್ಳುತ್ತದೆ. ಇಲ್ಲಿ ನೀವು ಪಿಲ್ಲರ್ ಸಂಖ್ಯೆ, ಫ್ಲೋರ್ ವಿವರಗಳು, ಸಮಯದ ಮಿತಿ ಅಥವಾ ಕಾರಿನ ಫೋಟೋವನ್ನು ಸಹ ನೋಟ್ ರೂಪದಲ್ಲಿ ಸೇರಿಸಬಹುದು.

ವಾಹನದ ಬಳಿಗೆ ಹಿಂತಿರುಗುವುದು ಹೇಗೆ?

ಕಾರಿನ ಬಳಿಗೆ ಹಿಂತಿರುಗುವಾಗ ಗೂಗಲ್ ಮ್ಯಾಪ್ಸ್ ತೆರೆದು, ಕೆಳಗೆ ಕಾಣಿಸುವ ‘ಸೇವ್ಡ್ ಪಾರ್ಕಿಂಗ್’ ಮೇಲೆ ಕ್ಲಿಕ್ ಮಾಡಿ ‘ಡೈರೆಕ್ಷನ್ಸ್’ ಅಥವಾ ‘ಸ್ಟಾರ್ಟ್​’ ನೀಡಿದರೆ, ಮ್ಯಾಪ್ ನಿಮ್ಮನ್ನು ನೇರವಾಗಿ ಕಾರಿನ ಬಳಿಗೆ ಕರೆದೊಯ್ಯುತ್ತದೆ. ವಾಹನ ತಲುಪಿದ ನಂತರ ‘ಕ್ಲಿಯರ್’ ಕೊಟ್ಟು ಆ ಪಾಯಿಂಟ್ ತೆಗೆದುಹಾಕಬಹುದು.

ಈ ಫೀಚರ್​ನಿಂದ ಪಾರ್ಕಿಂಗ್ ಫ್ಲೋರ್, ಪಿಲ್ಲರ್ ಸಂಖ್ಯೆ ಇತ್ಯಾದಿ ವಿವರಗಳನ್ನು ಬರೆದಿಡಬಹುದು. ಪಾರ್ಕಿಂಗ್ ಸಮಯದ ಮಿತಿಯನ್ನು ಹೊಂದಿಸಬಹುದು. ನಿಮ್ಮ ವಾಹನ ನಿಂತಿರುವ ಜಾಗದ ಫೋಟೋ ತೆಗೆದು ಅಪ್‌ಲೋಡ್ ಮಾಡಬಹುದು. ಈ ಪಾರ್ಕಿಂಗ್ ಸ್ಥಳವನ್ನು ಸ್ನೇಹಿತರು ಅಥವಾ ಕುಟುಂಬದವರೊಂದಿಗೆ ಶೇರ್ ಕೂಡ ಮಾಡಬಹುದು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us