ಬೆಂಗಳೂರು: ಶ್ರೀಕಿ ಬಿಟ್ ಕಾಯಿನ್ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ದಿನದಿಂದ ದಿನಕ್ಕೆ ಬಿಟ್ ಕಾಯಿನ್ ಕಿತ್ತಾಟ ತಾರಕಕ್ಕೇರಿದೆ. ಒಂದ್ಕಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಈ ವಿಚಾರವನ್ನ ನಾವ್ ಕೈ ಬಿಡೋದಿಲ್ಲ ಅಂತಾ ಗರ್ಜಿಸ್ತಿದ್ರೆ. ಮತ್ತೊಂದ್ಕಡೆ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಟ್ ಕಾಯಿನ್ ಸತ್ಯ ಹೊರಗೆ ಬಂದ್ರೆ ಸರ್ಕಾರ ಉಳಿಯುತ್ತಾ ಅಂತಾ ಸವಾಲ್ ಹಾಕ್ತಿದ್ದಾರೆ. ಸದ್ಯ ನನಗೆ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಪರಿಚಯ ಇದೆ ಎಂದು ಟಿವಿ9ಗೆ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಹೇಳಿಕೆ ನೀಡಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿ ಸ್ಪಷ್ಟನೆ ನೀಡಿದ ಹ್ಯಾರಿಸ್ ನಲಪಾಡ್, ನನಗೂ ಶ್ರೀಕಿಗೂ ಪರಿಚಯವಿಲ್ಲ ಅಂದ್ರೆ ತಪ್ಪಾಗುತ್ತದೆ. ನನಗೆ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಪರಿಚಯ ಇದೆ ಎಂದರು. ನನ್ನ ತಮ್ಮನ ಸ್ನೇಹಿತ ಮನೀಶ್ ಮೂಲಕ ಶ್ರೀಕಿ ಪರಿಚಯವಾಯ್ತು. ಶ್ರೀಕಿ ಹ್ಯಾಕ್ ಮಾಡ್ತಾನೋ ಇಲ್ವೋ ನನಗೆ ಗೊತ್ತಿಲ್ಲ. ಫರ್ಜಿ ಕೆಫೆ ಘಟನೆ ಬಳಿಕ ಶ್ರೀಕಿಗೂ ನನಗೆ ಸಂಬಂಧವಿಲ್ಲ. ಇದನ್ನೇ ಶ್ರೀಕಿ ತನ್ನ ಸ್ವಯಂ ಹೇಳಿಕೆಯಲ್ಲಿ ಹೇಳಿದ್ದಾನೆ. ಬಿಟ್ ಕಾಯಿನ್ ಬಗ್ಗೆ ನಾನು ಎಂದೂ ಚರ್ಚೆ ಮಾಡಿಲ್ಲ. ಬಿಟ್ ಕಾಯಿನ್‌ನಲ್ಲಿ ನಾನು ಭಾಗಿಯಾಗಿದ್ದರೆ ಬಿಡ್ತಿದ್ರಾ? ನಾನು ಯುವುದೇ ತಪ್ಪು ಮಾಡಿಲ್ಲ, ನನಗೇಕೆ ಆತಂಕ? ನಾನು, ಶ್ರೀಕೃಷ್ಣ ಒಂದು ಕೇಸ್‌ನಲ್ಲಿದ್ದೇವೆ ಅಷ್ಟೆ. ಅದು ಬಿಟ್ಟು ನನಗೂ ಅವನಿಗೂ ಯಾವುದೇ ಸಂಬಂಧವಿಲ್ಲ ಎಂದು ಮೊಹಮ್ಮದ್ ಹ್ಯಾರಿಸ್ ನಲಪಾಡ್ ತಿಳಿಸಿದ್ದಾರೆ.
ಇನ್ನು ಕಾಂಗ್ರೆಸ್ ಒಳಗೆ ಮೊಹಮ್ಮದ್ ನಲಪಾಡ್ ವಿರುದ್ಧ ಷಡ್ಯಂತ್ರ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ನಲಪಾಡ್, 2018ರಲ್ಲಿ ಒಂದು ತಪ್ಪಿಗೆ 117 ದಿನಗಳ ಕಾಲ ಜೈಲಿನಲ್ಲಿದ್ದೆ. ನಾನು ಶಾಸಕನ ಪುತ್ರನಾಗಿದ್ದಕ್ಕೆ ದೊಡ್ಡ ವಿಚಾರವಾಗಿತ್ತು. ನಾನು ಹುಷಾರಾಗಿ ಇರಬೇಕಿತ್ತು. ಸಾಮಾನ್ಯ ವ್ಯಕ್ತಿಯಾಗಿದ್ದರೆ 17 ದಿನದಲ್ಲಿ ಹೊರಗೆ ಬರ್ತಿದ್ರು. ನಾನು ಯೂತ್ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಗೆದ್ದೆ. ಆದರೆ ಈಗ ಇದೇ ಕೇಸ್ ನನಗೆ ಅಡ್ಡಿಯಾಗಿದೆ ಎಂದರು.
Published On - 9:16 am, Sun, 14 November 21