ಡಿ.6 ರಿಂದ ಐಕಾನಿಕ್​ ಬೆಂಗಳೂರು ರೆಸ್ಟೋರೆಂಟ್​ ನ್ಯೂ ಕೃಷ್ಣ ಭವನ ಕ್ಲೋಸ್​; ಇಲ್ಲಿದೆ ವಿವರ

|

Updated on: Nov 28, 2023 | 10:16 PM

ಸಸ್ಯಹಾರಿ ಊಟಕ್ಕೆ ಹೆಸರುವಾಸಿಯಾಗಿರುವ ಬೆಂಗಳೂರಿನ ಹಳೆಯ ಹೋಟೆಲ್​ಗಳಲ್ಲಿ ಒಂದಾದ ನ್ಯೂ ಕೃಷ್ಣ ಭವನವು ಡಿಸೆಂಬರ್​ 6 ರಿಂದ ಬಂದ್​ ಆಗಲಿದೆ. ಗ್ರಾಹಕರ ನೆಚ್ಚಿನ ಹೋಟೆಲ್​ ಆಗಿದ್ದ NKB, ಕ್ಲೋಸ್​ ಆಗಲಿದೆ.

ಡಿ.6 ರಿಂದ ಐಕಾನಿಕ್​ ಬೆಂಗಳೂರು ರೆಸ್ಟೋರೆಂಟ್​ ನ್ಯೂ ಕೃಷ್ಣ ಭವನ ಕ್ಲೋಸ್​; ಇಲ್ಲಿದೆ ವಿವರ
ಡಿ.6 ರಂದು ಐಕಾನಿಕ್​ ಬೆಂಗಳೂರು ರೆಸ್ಟೋರೆಂಟ್​ ನ್ಯೂ ಕೃಷ್ಣ ಭವನ ಕ್ಲೋಸ್​
Follow us on

ಬೆಂಗಳೂರು, ನ.28: ಬೆಂಗಳೂರಿನ ಅತ್ಯಂತ ಹಳೆಯ ರೆಸ್ಟೋರೆಂಟ್​ಗಳಲ್ಲಿ ಒಂದಾದ ನ್ಯೂ ಕೃಷ್ಣ ಭವನ(NKB)ವು ಡಿಸೆಂಬರ್​ 6 ರಿಂದ ಬಂದ್​ ಆಗಲಿದೆ. ಮಲ್ಲೇಶ್ವರಂ(Malleshwaram)ನ ಹೃದಯ ಭಾಗದ ಸಂಪಿಗೆ ಥಿಯೇಟರ್​ ಎದುರಿರುವ ನ್ಯೂ ಕೃಷ್ಣ ಭವನ, ಸಸ್ಯಹಾರಿ ಊಟ, ಗ್ರೀನ್​ ಮಸಾಲೆ ಇಡ್ಲಿಗಳು, ಮಂಡ್ಯ ಶೈಲಿಯ ರಾಗಿ ದೋಸೆಗಳು ಮತ್ತು ಇನ್ನಿತರ ಸಸ್ಯಹಾರಿ ಅಡುಗೆಗಳಿಗೆ ಹೆಸರುವಾಸಿಯಾಗಿದೆ. ಆದರೆ, ಇದೀಗ ಬಂದ್​ ಆಗಲಿದೆ ಎಂದು ​ರೆಸ್ಟೋರೆಂಟ್ ಮುಂಭಾಗದಲ್ಲಿ ಬ್ಯಾನ್​ರ್​ ಹಾಕಲಾಗಿದೆ. ಇದರಿಂದ ಗ್ರಾಹಕರಿಗೆ ಶಾಕ್​ ನೀಡಿದಂತಾಗಿದೆ.

1954 ರಲ್ಲಿ ಪ್ರಾರಂಭವಾಗಿದ್ದ ಹೋಟೆಲ್​

ಹಳೆಯ ಕಾಲದ ಆಕರ್ಷಣೆಯೊಂದಿಗೆ 1954 ರಲ್ಲಿ ನ್ಯೂ ಕೃಷ್ಣ ಭವನವು ಪ್ರಾರಂಭವಾಯಿತು. ಸಾಂಪ್ರದಾಯಿಕ ಉಡುಪಿ ಭಕ್ಷ್ಯಗಳ ಜೊತೆಗೆ ನ್ಯೂ ಕೃಷ್ಣ ಭವನವು ಕಾಫಿ ಮತ್ತು ಉತ್ತರ ಭಾರತದ ಅಡುಗೆಗೆ ಹೆಚ್ಚು ಹೆಸರುವಾಸಿಯಾಗಿದೆ. ‘ಒಂದು ಕಾಲದಲ್ಲಿ ಈ ರೆಸ್ಟೋರೆಂಟ್​ ದಿನಕ್ಕೆ 2500 ಕ್ಕೂ ಹೆಚ್ಚು ಊಟವನ್ನು ನೀಡುತ್ತಿತ್ತು ಎಂದು ಹಿರಿಯರು ಹೇಳುತ್ತಾರೆ. ಇನ್ನು ಪ್ರತಿ ದಿನವೂ ಪ್ರತ್ಯೇಕವಾದ ಕಸವನ್ನು ಹಂದಿ ಸಾಕಾಣಿಕೆ ಮಾಡುವವರಿಗೆ ಕಳುಹಿಸುವ ಮೂಲಕ ಶೂನ್ಯ ತ್ಯಾಜ್ಯ ನೀತಿಯನ್ನು ಅಳವಡಿಸಿಕೊಂಡ ಹಳೆಯ  ರೆಸ್ಟೋರೆಂಟ್​ಗಳಲ್ಲಿ ಇದು ಕೂಡ ಒಂದಾಗಿದೆ.

ಇದನ್ನೂ ಓದಿ:1985ರ ರೆಸ್ಟೋರೆಂಟ್​ ಬಿಲ್​ ನೋಡಿ ಹೌಹಾರುತ್ತಿರುವ ನೆಟ್ಟಿಗರು

ಸಿಬ್ಬಂದಿಗಳಿಗೆ ಬಹುದೊಡ್ದ ಹೊಡೆತ

ಗ್ರಾಹಕರಿಗೆಯೇ ಹೋಟೆಲ್​ ಮುಚ್ಚುವಿಕೆಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಇನ್ನೂ ಇಲ್ಲಿಯೇ ಕೆಲಸ ಮಾಡಿಕೊಂಡಿರುವ ಸಿಬ್ಬಂದಿಗಳ ಮುಂದಿನ ಜೀವನ ಹೇಗೆ ಎಂಬ ಪ್ರಶ್ನೆ ಮೂಡಿದೆ. ಇಲ್ಲಿ ಸುಮಾರು 100 ಜನ ಕೆಲಸವನ್ನು ಮಾಡುತ್ತಾರೆ. ಈ ವಯಸ್ಸಿನಲ್ಲಿ ಹೊಸ ಉದ್ಯೋಗವನ್ನು ಹುಡುಕುವುದು ಅಸಾಧ್ಯವಾಗಿದೆ ಎಂದು ಕಳೆದ 25 ವರ್ಷಗಳಿಂದ ಕೆಲಸ ಮಾಡಿಕೊಂಡಿರುವ ಸಿಬ್ಬಂದಿಯೊಬ್ಬರು ಕಣ್ಣೀರು ಹಾಕುತ್ತ ನೋವುವನ್ನು ಹಂಚಿಕೊಂಡಿದ್ದಾರೆ.

ಹೊಸ ಹೋಟೆಲ್​ ನಿರ್ಮಾಣ

ಇನ್ನು ಭೀಮಾ ಜ್ಯುವೆಲರ್ಸ್​ಗೆ ಆಸ್ತಿಯನ್ನು ಮಾರಾಟ ಮಾಡಲಾಗಿದೆ. ಶೀಘ್ರದಲ್ಲೇ ಅದು ಈಗಿರುವುದಕ್ಕಿಂತ ಸಂಪೂರ್ಣ ಹೊಸದಾಗಿ ಬರಲಿದೆ ಎಂದು ಮಾಲೀಕರ ಆಪ್ತ ಮೂಲಗಳು ತಿಳಿಸಿವೆ. ಈ ಕುರಿತು ಮಾತನಾಡಿದ ಹೋಟೆಲ್​ ಮಾಲೀಕರ ಸಂಘದ ಅಧ್ಯಕ್ಷ ‘ಕಳೆದೊಂದು ವರ್ಷದಿಂದ ಮಾತುಕತೆ ನಡೆದಿದ್ದು, ಮಾಲೀಕರು ಆಸ್ತಿಯನ್ನು ಮಾರಾಟ ಮಾಡಲು ನಿರ್ಧರಿಸಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:41 pm, Tue, 28 November 23