AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೋಷಕರಿಗೆ ಸಮಸ್ಯೆ ಆದ ಕಡೆ ಕಾನೂನಿನಡಿ ಕ್ರಮಕೈಗೊಳ್ಳುತ್ತೇವೆ; ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಸರ್ಕಾರದ ನಿಯಮಗಳನ್ನು ಎಷ್ಟರ ಮಟ್ಟಿಗೆ ಜಾರಿಗೆ ತರಬಹುದೋ ತಂದಿದ್ದೇವೆ. ಸರ್ಕಾರ ವಿದ್ಯಾರ್ಥಿಗಳು, ಪೋಷಕರ ಪರವಾಗಿಯೇ ನಿಂತಿದ್ದೇವೆ. ಎಲ್ಲೆಲ್ಲಿ ಪೋಷಕರಿಗೆ ಸಮಸ್ಯೆ ಆಗಿದೆಯೋ ಅಲ್ಲಲ್ಲಿ ಸರ್ಕಾರದ ಚೌಕಟ್ಟಿನಲ್ಲಿ ಕಾನೂನು ಕ್ರಮ ಜರುಗಿಸಿದ್ದೇವೆ.

ಪೋಷಕರಿಗೆ ಸಮಸ್ಯೆ ಆದ ಕಡೆ ಕಾನೂನಿನಡಿ ಕ್ರಮಕೈಗೊಳ್ಳುತ್ತೇವೆ; ಶಿಕ್ಷಣ ಸಚಿವ ಬಿ.ಸಿ.ನಾಗೇಶ್
ಶಿಕ್ಷಣ ಸಚಿವ ಬಿಸಿ ನಾಗೇಶ್
TV9 Web
| Edited By: sandhya thejappa|

Updated on:Aug 16, 2021 | 11:50 AM

Share

ಬೆಂಗಳೂರು: ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆ ಒಂದು ಸುತ್ತು ಮಾತುಕತೆ ಆಗಿದೆ ಎಂದು ತಿಳಿಸಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಯಾವುದನ್ನೂ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೇರುವುದಕ್ಕೆ ಆಗಲ್ಲ. ಆದರೆ ಪೋಷಕರನ್ನು ಗ್ರಾಹಕರ ತರ ನೋಡಬೇಡಿ ಅಂತ ಹೇಳಿದ್ದೇನೆ. ಅನೇಕ ಜಿಲ್ಲೆಗಳಲ್ಲಿ ಇವತ್ತಿಗೂ ಸರಿಯಾಗಿ ಶಿಕ್ಷಣವನ್ನು ಉಚಿತವಾಗಿ ನೀಡಿದ ಖಾಸಗಿ ಶಾಲೆಗಳೂ ಇವೆ. ಶೇ.50ಕ್ಕೂ ಹೆಚ್ಚು ಹೈ ಸ್ಕೂಲ್ ಮಕ್ಕಳು ಖಾಸಗಿ ಶಾಲೆಗಳಲ್ಲೇ ಓದುತ್ತಿದ್ದಾರೆ. ಸೈನ್ಸ್ ಮತ್ತು ಕಾಮರ್ಸ್ ವಿಚಾರದಲ್ಲಿ ಹೆಚ್ಚು ಖಾಸಗಿ ಶಾಲೆಗಳನ್ನೇ ನಂಬಿಕೊಂಡಿದ್ದಾರೆ. ಆದರೆ ಪೋಷಕರಿಗೆ ಸಮಸ್ಯೆ ಆದ ಕಡೆ ಕಾನೂನಿನಡಿ ಕ್ರಮಕೈಗೊಳ್ಳುತ್ತೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸರ್ಕಾರದ ನಿಯಮಗಳನ್ನು ಎಷ್ಟರ ಮಟ್ಟಿಗೆ ಜಾರಿಗೆ ತರಬಹುದೋ ತಂದಿದ್ದೇವೆ. ಸರ್ಕಾರ ವಿದ್ಯಾರ್ಥಿಗಳು, ಪೋಷಕರ ಪರವಾಗಿಯೇ ನಿಂತಿದ್ದೇವೆ. ಎಲ್ಲೆಲ್ಲಿ ಪೋಷಕರಿಗೆ ಸಮಸ್ಯೆ ಆಗಿದೆಯೋ ಅಲ್ಲಲ್ಲಿ ಸರ್ಕಾರದ ಚೌಕಟ್ಟಿನಲ್ಲಿ ಕಾನೂನು ಕ್ರಮ ಜರುಗಿಸಿದ್ದೇವೆ. ಆಗಸ್ಟ್ 23ರ ಒಳಗೆ ಎಲ್ಲ ಶಿಕ್ಷಕರಿಗೆ ವ್ಯಾಕ್ಸಿನ್ ಹಾಕಿಸಲು ಸೂಚನೆ ನೀಡಲಾಗಿದೆ. ಶೇ.80 ರಷ್ಟು ಎಲ್ಲ ಕಡೆಯೂ ವ್ಯಾಕ್ಸಿನ್ ಆಗಿದೆ. ಕೆಲ ತಾಲೂಕುಗಳಲ್ಲಿ ಶೇ.100 ವ್ಯಾಕ್ಸಿನ್ ಆಗಿದೆ ಅಂತ ತಿಳಿಸಿದರು.

ಶಾಲೆಗಳ ಆರಂಭಕ್ಕೆ ಇಂದೇ ಮಾರ್ಗಸೂಚಿ ಪ್ರಕಟ ಇನ್ನು ಶಾಲೆಗಳ ಆರಂಭಕ್ಕೆ ಇಂದೇ ಮಾರ್ಗಸೂಚಿ ಹೊರಡಿಸ್ತೇವೆ ಎಂದು ವಿಧಾನಸೌಧದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ ನೀಡಿದ್ದಾರೆ. ಶೇ.2ಕ್ಕಿಂತ ಕಡಿಮೆ ಪಾಸಿಟಿವಿಟಿ ಇರುವ ಕಡೆ ಮಾತ್ರ ಶಾಲೆಗಳನ್ನು ಆರಂಭಿಸಲಾಗುತ್ತದೆ. ಮಕ್ಕಳಿಗೆ ಹಾಜರಾತಿ ಕಡ್ಡಾಯ ಮಾಡಿಲ್ಲ. ಸೋಂಕು ಪತ್ತೆಯಾದರೆ ಅಂತಹ ಶಾಲೆಗಳನ್ನ ಕ್ಲೋಸ್ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ

ಪೊಲೀಸರು ಇನ್ನು ಮುಂದೆ ರಾತ್ರಿ ಗಸ್ತು ಕಡ್ಡಾಯ ತಿರುಗಬೇಕು; ಬೆಂಗಳೂರಿನಲ್ಲಿ ಅಪರಾಧ ನಿಯಂತ್ರಣಕ್ಕೆ ಬಂತು ಹೊಸ ಇ- ಪ್ಲ್ಯಾನ್

CM Basavaraj Bommai: ಸಿಎಂ ಬಸವರಾಜ ಬೊಮ್ಮಾಯಿ ಭೇಟಿಗೆ ಬರುವ ಸಾರ್ವಜನಿಕರಿಗೆ ಮೊಬೈಲ್ ನಿಷೇಧ

(If there is a problem with parents from private schools we will take legal action said BC Nagesh)

Published On - 11:47 am, Mon, 16 August 21

Follow Us
TV9 Web
TV9 Web

TV9 Kannada

Read More
ಕೆವಿಎನ್ ಹಾಗೂ ಸುಪ್ರೀತ್ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಮಾತು
ಕೆವಿಎನ್ ಹಾಗೂ ಸುಪ್ರೀತ್ ಬಗ್ಗೆ ನಿರ್ಮಾಪಕ ಉದಯ್ ಮೆಹ್ತಾ ಮಾತು
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಬಿಗ್​​ಬಾಸ್ ಸ್ಪರ್ಧಿಗಳ ತಲೆ ಮೇಲೆ ಸಗಣಿ ನೀರು, ಕಸ: ವಿಡಿಯೋ ನೋಡಿ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ಸಿದ್ದರಾಮಯ್ಯ ಪ್ರತಿಮೆ ತೆರವುಗೊಳಿಸಿದ್ದಕ್ಕೆ ಸಿಡಿದೆದ್ದ ಕುರುಬ ಸಮುದಾಯ
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ತುಂಗಭದ್ರಾ ಡ್ಯಾಮ್‌ನಿಂದ ಕಾರ್ಖಾನೆಗಳಿಗೆ ಅನಧಿಕೃತ ನೀರು ಸರಬರಾಜು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಚಿತ್ರದುರ್ಗದಲ್ಲಿ ಮಹಾಗಣಪತಿ ಉತ್ಸವಕ್ಕೆ ನಗರ ದೇವತೆಗಳ ಮೆರುಗು
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಬೆಂಗಳೂರಿನ ಮಟನ್ ಶಾಪ್‌ನಲ್ಲಿ ನಡೀತಿತ್ತು ಡ್ರಗ್ಸ್ ಮಾರಾಟ! ಇಬ್ಬರ ಬಂಧನ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಕಾಮನ್‌ವೆಲ್ತ್ ಪವರ್‌ಲಿಫ್ಟಿಂಗ್: ಕನ್ನಡಿಗ ಸಚಿನ್ ಸಾಳುಂಕೆಗೆ ಬೆಳ್ಳಿ ಪದಕ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ
ಧಾರಾಕಾರ ಮಳೆಗೆ ಮಂಡ್ಯ, ಹನೂರು ತತ್ತರ: ಎಂ.ಎಂ. ಹಿಲ್ಸ್‌ನಲ್ಲಿ ಗುಡ್ಡ ಕುಸಿತ