ಬೆಂಗಳೂರಿನಲ್ಲಿ ಗೂಡ್ಸ್​​ ವಾಹನ ಹರಿದು 5 ವರ್ಷದ ಬಾಲಕ ಸಾವು

ಪ್ರತ್ಯೇಕ ಘಟನೆ: ಬೆಂಗಳೂರಿನ ಕೆ.ಜಿ ಹಳ್ಳಿ(KG halli) ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೂಡ್ಸ್​​ ವಾಹನ ಹರಿದು ಬಾಲಕನೋರ್ವ ಸಾವನ್ನ್ಪಪಿರುವ ಘಟನೆ ನಡೆದಿದೆ. ಇತ್ತ ಚಾಮರಾಜನಗರ ತಾಲೂಕಿನ ಬಾಗಳಿ ಗ್ರಾಮದಲ್ಲಿ ಮಳೆಗೆ ಮನೆ ಗೋಡೆ ಕುಸಿದು ವ್ಯಕ್ತಿ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ ಗೂಡ್ಸ್​​ ವಾಹನ ಹರಿದು 5 ವರ್ಷದ ಬಾಲಕ ಸಾವು
ಬೆಂಗಳೂರಿನಲ್ಲಿ ಗೂಡ್ಸ್​​ ವಾಹನ ಹರಿದು 5 ವರ್ಷದ ಬಾಲಕ ಸಾವು
Edited By:

Updated on: Oct 13, 2024 | 3:02 PM

ಬೆಂಗಳೂರು, ಅ.13: ಗೂಡ್ಸ್​​ ವಾಹನ ಹರಿದು ಬಾಲಕನೋರ್ವ ಸಾವನ್ನ್ಪಪಿರುವ ಘಟನೆ ಬೆಂಗಳೂರಿನ ಕೆ.ಜಿ ಹಳ್ಳಿ(KG halli) ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅ.11ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಾಹಿರ್ ಪಾಷಾ(5) ಮೃತ ಬಾಲಕ. ರಸ್ತೆಯಲ್ಲಿ ಓಡಿ ಬರುತ್ತಿದ್ದ ವೇಳೆ ಪಕ್ಕದಲ್ಲಿ ನಿಂತಿದ್ದ ಸ್ಕೂಟರ್​ಗೆ ಡಿಕ್ಕಿ ಹೊಡೆದು ಚಲಿಸುತಿದ್ದ ಗೂಡ್ಸ್ ವಾಹನದ ಕೆಳಗೆ ಬಿದ್ದಿದ್ದ. ಕೆಳಗೆ ಬಿದ್ದಾಗ ಗೂಡ್ಸ್ ವಾಹನದ ಹಿಂಬದಿಯ ಟೈಯರ್ ಹೊಡೆದು ತಲೆಗೆ ತೀವ್ರ ಗಾಯವಾಗಿತ್ತು.

ಕೂಡಲೇ ಸ್ಥಳೀಯರು ಮತ್ತು ಕುಟುಂಬದವರು ಹತ್ತಿರದ ಆಸ್ಪತ್ರೆಗೆ ಕರೆಯೊಯ್ದಿದ್ದರು. ಆಸ್ಪತ್ರೆಗೆ ಸಾಗಿಸುವ ಮೊದಲೆ ತಾಹಿರ್ ಸಾವನ್ನಪ್ಪಿದ್ದಾಗಿ ವೈದ್ಯರು ತಿಳಿಸಿದ್ದಾರೆ. ಸಧ್ಯ ಘಟನೆ ಸಂಬಂಧ ಕೆಜಿ ಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಇದನ್ನೂ ಓದಿ:ಗದಗ: ತಂಗಿಯನ್ನು ಪ್ರೀತಿಸಿದ ಎಂದು ಯುವಕನಿಗೆ ಚಾಕು ಇರಿದ ಅಣ್ಣ, ಸಾವು ಬದುಕಿನ ನಡುವೆ ಯುವಕನ ಹೋರಾಟ

ಮಳೆಗೆ ಗೋಡೆ ಕುಸಿದು ವ್ಯಕ್ತಿ ಸಾವು

ಚಾಮರಾಜನಗರ: ಚಾಮರಾಜನಗರ ತಾಲೂಕಿನ ಬಾಗಳಿ ಗ್ರಾಮದಲ್ಲಿ ಮಳೆಗೆ ಮನೆ ಗೋಡೆ ಕುಸಿದು ವ್ಯಕ್ತಿ ಸಾವನ್ನಪ್ಪಿದ್ದಾರೆ. ಬಾಗಳಿ ಗ್ರಾಮದ ರೈತ ಚಂದ್ರನಾಯಕ್ ಮೃತ ವ್ಯಕ್ತಿ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಮನೆಗೋಡೆ ಶಿಥಿಲಗೊಂಡು ರಾತ್ರಿ ನಿದ್ದೆ ಮಾಡುತ್ತಿದ್ದ ವೇಳೆ ಕುಸಿದಿದೆ. ಗೋಡೆಯ ಅವಶೇಷಗಳ ಅಡಿಯಲ್ಲಿ ಸಿಲುಕಿ ಚಂದ್ರನಾಯಕ್ ಕೊನೆಯುಸಿರೆಳೆದಿದ್ದಾರೆ.  ಸ್ಥಳಕ್ಕೆ ತಹಶೀಲ್ದಾರ್ ಅಂಬುಜಾಕ್ಷಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಲೆಯಾದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ವಿಜಯಪುರ: ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಹೊರಭಾಗದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಟ್ರ್ಯಾಕ್ಟರ್ ಚಾಲಕ ತೌಶಿಫ್ ಲಟೋರಿ(24) ಎಂಬಾತನ ಶವ ಪತ್ತೆಯಾಗಿದೆ. ಶವದ ಬಳಿ ಬಿಯರ್ ಬಾಟಲಿ ಸಿಕ್ಕಿದ್ದು, ರಾತ್ರಿ ಗೆಳೆಯರೊಂದಿಗೆ ಪಾರ್ಟಿ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:54 pm, Sun, 13 October 24