ಪ್ರತಿ ಚುನಾವಣೆಯಲ್ಲಿ ನಾನು ಪಡೆಯುವ ವೋಟು-ಪ್ರಮಾಣ ಜಾಸ್ತಿಯಾಗಿದೆಯೇ ಹೊರತು ಕಮ್ಮಿಯಾಗಿಲ್ಲ: ಜಮೀರ್ ಅಹ್ಮದ್
ಪ್ರತಿ ಚುನಾವಣೆಯಲ್ಲಿ ತಾನು ಪಡೆಯುವ ವೋಟುಗಳ ಪ್ರಮಾಣ ಜಾಸ್ತಿಯಾಗುತ್ತಿದೆ ಮತ್ತು ಎದುರಾಳಿಗಳು ಪಡೆಯುವ ವೋಟುಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಜಮೀರ್ ಹೇಳಿದರು.
ಬೆಂಗಳೂರು: ಚಾಮರಾಜಪೇಟೆಯಲ್ಲಿ ಎದುರಾಳಿಯಾದರೂ ತಾನು ಗೆಲ್ಲುವುದು ನಿಶ್ವಿತ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ (Zameer Ahmed) ಇಂದು ಬೆಂಗಳೂರಲ್ಲಿ ಹೇಳಿದರು. ಪ್ರತಿ ಚುನಾವಣೆಯಲ್ಲಿ ತಾನು ಪಡೆಯುವ ವೋಟುಗಳ ಪ್ರಮಾಣ (vote share) ಜಾಸ್ತಿಯಾಗುತ್ತಿದೆ ಮತ್ತು ಎದುರಾಳಿಗಳು ಪಡೆಯುವ ವೋಟುಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಜಮೀರ್ ಹೇಳಿದರು. 2018ರಲ್ಲಿ ತನ್ನನ್ನು ಸೋಲಿಸಲೇಬೇಕೆಂದು ಎಚ್ ಡಿ ದೇವೇಗೌಡರು (HD Devegowda) ಪಟ್ಟು ಹಿಡಿದಿದ್ದರು. ಆದರೆ 2013 ರ ಚುನಾವಣೆಯಲ್ಲಿ ಪಡೆದದ್ದಕ್ಕಿಂತ 10,000 ವೋಟುಗಳನನ್ನು ಜಾಸ್ತಿ ಪಡೆದೆ ಎಂದು ಚಾಮರಾಜಪೇಟೆ ಶಾಸಕ ಹೇಳಿದರು.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ