ಬೆಂಗಳೂರು: ಬೆಳೆಬಾಳುವ ಡೈಮಂಡ್ ಎಂದು ಟೋಪಿ ಹಾಕಲು ಯತ್ನಿಸುತ್ತಿದ್ದ ಗ್ಯಾಂಗ್ ಅರೆಸ್ಟ್
ಕೋಟಿ ಬೆಲೆಯ ಡೈಮಂಡ್ ಎಂದು ಮಕ್ಮಲ್ ಟೋಪಿಗೆ ಯತ್ನಿಸುತ್ತಿದ್ದ ಗ್ಯಾಂಗ್, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಬೆಂಗಳೂರು: ಡೈಮಂಡ್ ಹೆಸರಲ್ಲಿ ಚೀಟಿಂಗ್ ಮಾಡುತ್ತಿದ್ದ ನಾಗರಾಜ್, ಬಾಲಕೃಷ್ಣ, ರಾಜೇಶ್ ಎನ್ನುವವರನ್ನು ಬಂಧಿಸಿದ ಪುಲಿಕೇಶಿನಗರ ಪೊಲೀಸರು. ಕೋಟಿ ಕೋಟಿ ಬೆಲೆಯ ಡೈಮಂಡ್ ಎಂದು ಮಕ್ಮಲ್ ಟೋಪಿಗೆ ಯತ್ನಿಸುತ್ತಿದ್ದ ಗ್ಯಾಂಗ್. ಬ್ಯುಸಿನೆಸ್ ಮ್ಯಾನ್ಗಳನ್ನೆ ಟಾರ್ಗೆಟ್ ಮಾಡಿ ವಂಚನೆ ಮಾಡಲು ಮುಂದಾಗಿತ್ತು. ಮನೆಯಲ್ಲಿ ಡೈಮಂಡ್ ಇಟ್ಟರೆ ಒಳ್ಳೆಯದು ಎಂದು ನಂಬಿಸಿ ದೋಖಾ ಮಾಡುತ್ತಿದ್ದರು. ಡೈಮಂಡ್ ಎಂದು ತೋರಿಸಿ ಅಡ್ವಾನ್ಸ್ ಹಾಕಿಸಿಕೊಳ್ಳುತ್ತಿದ್ದ ಈ ಗ್ಯಾಂಗ್, ಹೀಗೆ ಉದ್ಯಮಿಯೊಬ್ಬರಿಗೆ ಡೈಮಂಡ್ ಆಮಿಷವೊಡ್ಡಿ ವಂಚನೆಗೆ ಯತ್ನ ಮಾಡಿದ್ದರು.
ಫ್ರೇಜರ್ ಟೌನ್ ಬಳಿ ಆರೋಪಿ ನಾಗರಾಜ್ಗೆ ಪರಿಚಯವಾಗಿದ್ದ ಉದ್ಯಮಿ. ಪಿತ್ರಾರ್ಜಿತವಾಗಿ ಬಂದ ವಜ್ರದ ಕಲ್ಲು ನೆಕ್ಲಸ್ ಇದೆ. ಅದನ್ನು ಮಾರಾಟ ಮಾಡಬೇಕು ಎಂದಿದ್ದ ಆರೋಪಿ. ಮಾರ್ಕೆಟ್ ಬೆಲೆಗಿಂತ ಕಡಿಮೆ ಬೆಲೆಗೆ ಕೊಡುವುದಾಗಿ ಆಮಿಷವೊಡ್ಡಿದ್ದ, ಬಳಿಕ ಅಡ್ವಾನ್ಸ್ ಎಂದು ಹತ್ತು ಸಾವಿರ ಕೊಟ್ಟಿದ್ದ ಉದ್ಯಮಿ. ನಂತರ 92 ಕ್ಯಾರೆಟ್ ವಜ್ರ ಇದೆ ಅದರ ಬೆಲೆ 25 ಕೋಟಿ ರೂ. ಹಣ ಹೊಂದಿಸಿಕೊಂಡು ಬಂದರೆ ಆ ದೊಡ್ಡ ವಜ್ರದ ಕಲ್ಲು ಕೊಡುವುದಾಗಿ ಆಮಿಷ ತೋರಿಸಿದ್ದಾರೆ. 25 ಕೋಟಿ ಕೊಟ್ಟರೆ ವಜ್ರದ ನೆಕ್ಲೆಸ್ ಬದಲಿಗೆ ಒಂದು ವಜ್ರದ ಕಲ್ಲನ್ನು ಕೊಡುವುದಾಗಿ ವಂಚನೆ. ಈ ಬಗ್ಗೆ ಅನುಮಾನ ಬಂದು ಪುಲಕೇಶಿ ನಗರ ಪೊಲೀಸರಿಗೆ ದೂರು. ನಾಗರಾಜ್, ಬಾಲಕೃಷ್ಣ ಹಾಗೂ ರಾಜೇಶ್ ವಿರುದ್ಧ ಉದ್ಯಮಿ ದೂರು. ದೂರು ಆಧರಿಸಿ ಮೂವರನ್ನ ಬಂಧಿಸಿದ ಪೊಲೀಸರು. ಪುಲಿಕೇಶಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ