ಬೆಂಗಳೂರು ಗ್ರಾಮಾಂತರ, ಅ.15: ಸಿನಿಮೀಯ ರೀತಿಯಲ್ಲಿ ನೆಲಮಂಗಲ(Nelamangala) ತಾಲೂಕಿನ ಕಳಲುಘಟ್ಟ ಗ್ರಾಮ ಪಂಚಾಯತಿ ಪಿಡಿಒ(PDO) ಬಳಿ ಇದ್ದ ಸರ್ಕಾರದ ಜಮೀನು ಫೈಲ್ನ್ನು ಕಳವು ಮಾಡಿದ ಘಟನೆ ನಗರದ ಹನುಮಂತಪುರ ಗೇಟ್ ಬಳಿ ನಡೆದಿದೆ. ಪಿಡಿಒ ಗೀತಾಮಣಿ ಅವರು ಹೆದ್ದಾರಿ ಪಕ್ಕದಲ್ಲಿ ಬೈಕ್ ನಿಲ್ಲಿಸಿ ಮೊಬೈಲ್ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಬಿಳಿಬಣ್ಣದ ಕಾರ್ ನಲ್ಲಿ ವೇಗವಾಗಿ ಬಂದ ವ್ಯಕ್ತಿಯೊಬ್ಬ ಫೈಲ್ ಕದ್ದುಎಸ್ಕೇಫ್ ಆಗಿದ್ದಾನೆ.
ಸಧ್ಯ ಗುಂಡೇನಹಳ್ಳಿ ಅರುಣ್ ಕುಮಾರ್ ಎಂಬಾತ ಕಡತ ಕದ್ದ ಆರೋಪ ಕೇಳಿಬಂದಿದೆ. ಅರುಣ್ ಕುಮಾರ್ ವಿರುದ್ದ ಭೂ ವಿವಾದ ನಡೆಯುತ್ತಿದ್ದು, ನಾಳೆ ಈ ಬಗ್ಗೆ ಕೇಸ್ ಇತ್ತು. ಹೀಗಾಗಿ ಸಂಬಂಧ ಪಟ್ಟ ಮೂಲ ಕಡತ ಎಗರಿಸಿ ಅರುಣ್ ಪರಾರಿಯಾಗಿದ್ದಾನೆ ಎಂದು ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಆಸ್ತಿ ನಾಶ ಪಡಿಸಲು ಯತ್ನದಡಿ ಪ್ರಕರಣ
ದಾಖಲಿಸಲಾಗಿದೆ.
ಇದನ್ನೂ ಓದಿ:ದೇವಸ್ಥಾನದಲ್ಲಿ ಭಜನೆ ಮಾಡುತ್ತಿದ್ದ ಮಹಿಳೆಯ ಚಿನ್ನದ ಸರದೊಂದಿಗೆ ಕಳ್ಳ ಪರಾರಿ
ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲೂಕಿನ ಯಲಸತ್ತಿ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಸಾವನ್ನಪ್ಪಿದ ಘಟನೆ ನಡೆದಿದೆ.
ಸಿಡಿಲು ಬಡಿದು ದೇವಪ್ಪ(35) ಮೃತ ವ್ಯಕ್ತಿ. ಇನ್ನುಳಿದಂತೆ ಮೂವರಿಗೆ ಗಾಯವಾಗಿದ್ದು, ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಮೀನಿನಲ್ಲಿ ಬಿಡಿಸಿಟ್ಟ ಹತ್ತಿ ಬೆಳೆಯನ್ನ ವಾಹನದಲ್ಲಿ ಲೋಡ್ ಮಾಡುವಾಗ ಸಿಡಿಲು ಬಡಿದು ದುರ್ಘಟನೆ ನಡೆದಿದ್ದು, ಈ ಕುರಿತು ಸೈದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:31 pm, Tue, 15 October 24