ಮಹಿಳಾ ಸಬಲೀಕರಣ ಪ್ರತಿಯೊಬ್ಬ ಮಹಿಳೆಯರ ಕರ್ತವ್ಯ -ಸಚಿವ ಡಾ. MC ಸುಧಾಕರ್

| Updated By: ಆಯೇಷಾ ಬಾನು

Updated on: Mar 05, 2024 | 4:08 PM

ಮಹಿಳಾ ದಿನಾಚರಣೆ ಅಂಗವಾಗಿ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಲ್ಲಿ ನಡೆದ 2 ದಿನಗಳ ಸಮ್ಮೇಳನದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್ ಅವರು ಭಾಗಿಯಾಗಿ ಮಹಿಳಾ ಸಬಲೀಕರಣ ಬಗ್ಗೆ ಮಾತನಾಡಿದರು. ಹಾಗೂ ಈ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಮಹಿಳೆಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಹಿಳಾ ಸಬಲೀಕರಣ ಪ್ರತಿಯೊಬ್ಬ ಮಹಿಳೆಯರ ಕರ್ತವ್ಯ -ಸಚಿವ ಡಾ. MC ಸುಧಾಕರ್
ಅಪರ್ಣಾ ಪ್ರಸಾದ್, (ಜೈನ್ ಗ್ರೂಪ್​ನ ಸಂವಹನ ಮತ್ತು ಮಾನವ ಸಂಪನ್ಮೂಲಗಳ ನಿರ್ದೇಶಕಿ) ಹಾಘೂ ಸಚಿವ ಡಾ.ಎಂ.ಸಿ ಸುಧಾಕರ್
Follow us on

ಬೆಂಗಳೂರು, ಮಾರ್ಚ್​.05: ನಗರದ ಜೈನ್ ಯೂನಿವರ್ಸಿಟಿಯು (Jain University) ಹಮ್ಮಿಕೊಂಡಿದ್ದ ಎ ಸೆಲೆಬ್ರೇಷನ್ ಆಫ್ ದಿ ಎಕ್ಸ್‌ಟ್ರಾರ್ಡಿನರಿ ಎಂಬ ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ (Dr MC Sudhakar) ಭಾಗಿಯಾಗಿದ್ದು ಮಹಿಳಾ ಸಬಲೀಕರಣ ಪ್ರತಿಯೊಬ್ಬ ಮಹಿಳೆಯರ ಕರ್ತವ್ಯ ಎಂದು ಕಿವಿ ಮಾತು ಹೇಳಿದರು.

ಈ ಸಮ್ಮೇಳನದ ಮುಖ್ಯ ಅತಿಥಿಯಾಗಿದ್ದ ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್ ಅವರು ಮೊದಲನೆಯದಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು. ಶಿಕ್ಷಣದ ಪರಿವರ್ತನಾ ಶಕ್ತಿ ಬಗ್ಗೆ ಮಾತನಾಡಿದ ಅವರು, ವಿದ್ಯಾವಂತ ಮಹಿಳೆಯರು ವಿದ್ಯೆ ಬಿಟ್ಟು ಮದುವೆಯಾಗಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಜವಾಬ್ದಾರಿಯನ್ನು ಹೊತ್ತುಕೊಂಡ ಉದಾಹರಣೆಗಳನ್ನು ಉಲ್ಲೇಖಿಸಿದರು. ಡೈರಿ ಕೆಲಸಗಳನ್ನು ಮಾಡುತ್ತಿದ್ದ ಅಂದಿನ ಮಹಿಳೆಯರು ಈಗ ಕಾರ್ಪೊರೇಟ್ ಲೆವಲ್​ನಲ್ಲಿ ಸಮಾಜದ ಜವಾಬ್ದಾರಿ ಹೊತ್ತುಕೊಂಡ ಅವರ ಪರಿವರ್ತನೆಯ ಬಗ್ಗೆ ಮಾತಾಡಿದರು. ಇನ್ನು ಈ ಸಮ್ಮೇಳನದಲ್ಲಿ ಶಿಕ್ಷಣ ಸಚಿವರು, ಮಹಿಳೆಯರು ತಮಗೆ ಎದುರಾದ ಸವಾಲುಗಳನ್ನು ಹೇಗೆ ಎದುರಿಸಬೇಕು. ಮತ್ತು ಜೀವನದ ವಿವಿಧ ಅಂಶಗಳಲ್ಲಿ ಅಭಿವೃದ್ಧಿ ಹೊಂದಲು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವ ಅಗತ್ಯದ ಬಗ್ಗೆ ಮಾತನಾಡಿದರು.

ಇನ್ನು ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ರೂಪಾ ಡಿ ಮೌದ್ಗಿಲ್ ಅವರು ಸಾರ್ವಜನಿಕ ಸೇವೆಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಐಪಿಎಸ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ಪಡೆದಿದರು. ಡಾ.ಧರಣಿದೇವಿ ಮಾಲಗತ್ತಿ ಅವರು ಕಲೆ ಮತ್ತು ಸಂಸ್ಕೃತಿಯಲ್ಲಿ ಎಕ್ಸಲೆನ್ಸ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶ್ರೀಮತಿ ರುಕ್ಮಿಣಿ ಕೃಷ್ಣಸ್ವಾಮಿ ಅವರಿಗೆ ವಿಶೇಷ ಶಿಕ್ಷಣದಲ್ಲಿ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಳಿನಿ ಶೇಖರ್ ಅವರಿಗೆ ಪರಿಸರ ಸುಸ್ಥಿರತೆಯಲ್ಲಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಮತ್ತು ವಿದ್ಯಾ ಸಾಗರ್ ಅವರಿಗೆ ಬಾಹ್ಯಾಕಾಶ ಸಂಶೋಧನೆಯಲ್ಲಿ ಸಾಧನೆಗೆ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. ಡಾ. ಪ್ರಭಾ ಚಂದ್ರ ಅವರು ಮಾನಸಿಕ ಯೋಗಕ್ಷೇಮದಲ್ಲಿ ನಿಮ್ಹಾನ್ಸ್ ಎಕ್ಸಲೆನ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಬಿಲಾ ಜಮಾಲ್ ಅವರಿಗೆ ಮಾಧ್ಯಮದಲ್ಲಿ ಮಾಡಿದ ಸಾಧನೆಗೆ ಎಕ್ಸಲೆನ್ಸ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಇದನ್ನೂ ಓದಿ: ಸರ್ಕಾರದ ಮಧ್ಯಪ್ರವೇಶ; ಗೂಗಲ್ ಮತ್ತು ಭಾರತೀಯ ಸ್ಟಾರ್ಟಪ್​ಗಳ ವ್ಯಾಜ್ಯ ತಾತ್ಕಾಲಿಕ ಶಮನ

ಮಂಗಳಾ ಎನ್ ಸಂಚಾರಿ ಅವರಿಗೆ ಕಲೆ ಮತ್ತು ರಂಗಭೂಮಿಯಲ್ಲಿ ಮಾಡಿದ ಸಾಧನೆಗೆ ಎಕ್ಸಲೆನ್ಸ್ ಪ್ರಶಸ್ತಿ ನೀಡಲಾಯಿತು. ಶ್ರೀಮತಿ ಮಾಲತಿ ಕೃಷ್ಣಮೂರ್ತಿ ಹೊಳ್ಳ ಅವರಿಗೆ ಕ್ರೀಡೆಯಲ್ಲಿ ಮಾಡಿದ ಸಾಧನೆಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀಮತಿ ಆಶಾ ವಿ ಸ್ವಾಮಿ ಅವರಿಗೆ ಸಮಾಜ ಸೇವೆಯಲ್ಲಿ ಮಾಡಿದ ಸಾಧನೆ ಗುರುತಿಸಿ ಪ್ರಶಸ್ತಿ ನೀಡಲಾಯಿತು. ಮತ್ತು ಡಾ. ಶ್ವೇತಾ ಸಿಂಗ್ ಅವರಿಗೆ ಉದ್ಯಮಶೀಲತೆಯಲ್ಲಿ ಮಾಡಿದ ಸಾಧನೆಗೆ ಪ್ರಶಸ್ತಿಯನ್ನು ನೀಡಲಾಯಿತು. ಜೊತೆಗೆ ಸಮ್ಮೇಳನದಲ್ಲಿ ಸಂಶೋಧನಾ ವಿದ್ವಾಂಸರು ಮತ್ತು ವಿದ್ಯಾರ್ಥಿಗಳಿಂದ 412 ಕ್ಕೂ ಹೆಚ್ಚು (Research Paper Presentations) ಸಂಶೋಧನಾ ಪ್ರಬಂಧವನ್ನು ಮಂಡಿಸಲಾಯಿತು.

ಮಹಿಳಾ ಸಬಲೀಕರಣ ಮತ್ತು ಆತ್ಮವಿಶ್ವಾಸ ನಿರ್ಮಾಣ, ಕಲೆ ಮತ್ತು ವೈದಿಕ ಸಂಸ್ಕೃತಿ, ಸುಸ್ಥಿರ ಅಭಿವೃದ್ಧಿ, ಕ್ರೀಡೆ, ಭವಿಷ್ಯದ ಪೀಳಿಗೆಗೆ ಸ್ಫೂರ್ತಿ, ಜ್ಞಾನ ಹಂಚಿಕೆ, ಮಾರ್ಗದರ್ಶನ ಮತ್ತು ರೋಲ್ ಮಾಡೆಲ್‌ಗಳು, ನೆಟ್‌ವರ್ಕಿಂಗ್ ಮತ್ತು ಸಹಯೋಗ ಮತ್ತು ಇತರ ವಿಷಯಗಳ ಕುರಿತು ಸಂಶೋಧನಾ ಪ್ರಬಂಧ ಪ್ರಸ್ತುತಿಗಳ ಮೂಲಕ ಚರ್ಚಿಸುವುದು ಈ ಸಮ್ಮೇಳನದ ಹಿಂದಿನ ಮುಖ್ಯ ಉದ್ದೇಶ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 4:07 pm, Tue, 5 March 24