ವಿಂಡ್ಸರ್​ ಮ್ಯಾನರ್​ ಬ್ರಿಡ್ಜ್​ ಮೇಲಿಂದ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ವ್ಯಕ್ತಿ ಸಾವು

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 05, 2024 | 5:52 PM

ವಿಂಡ್ಸರ್​ ಮ್ಯಾನರ್​ ಬ್ರಿಡ್ಜ್(Windsor Manor Bridge)​ ಮೇಲಿಂದ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿ ಬ್ರಿಡ್ಜ್​ ಮೇಲಿಂದ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ವ್ಯಕ್ತಿ ಕೊನೆಯುಸಿರೆಳೆದಿದ್ದಾನೆ.

ವಿಂಡ್ಸರ್​ ಮ್ಯಾನರ್​ ಬ್ರಿಡ್ಜ್​ ಮೇಲಿಂದ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ವ್ಯಕ್ತಿ ಸಾವು
ಅಪಘಾತ
Follow us on

ಬೆಂಗಳೂರು, ಮಾ.05: ಅನುಮಾನಸ್ಪದವಾಗಿ ವಿಂಡ್ಸರ್​ ಮ್ಯಾನರ್​ ಬ್ರಿಡ್ಜ್(Windsor Manor Bridge)​ ಮೇಲಿಂದ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ತಮಿಳುನಾಡಿನ ವೆಲ್ಲೂರು ಮೂಲದ ಯುವಕ ವೇಣು(21) ಎಂಬುವವರು ಬ್ರಿಡ್ಜ್​ ಮೇಲಿಂದ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ. ಕೂಡಲೇ ಪೊಲೀಸರು ವ್ಯಕ್ತಿಯನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಇದೀಗ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಹೈಗ್ರೌಂಡ್ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಲಿಸುತ್ತಿದ್ದ ರೈಲಿನಿಂದ ಬಿದ್ದನಾ? ಅಥವಾ ಆತ್ಮಹತ್ಯೆಗೆ ಯತ್ನಿಸಿದ್ದಾನಾ ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಚಲಿಸುತ್ತಿದ್ದ ರೈಲಿನಿಂದ ಬಿದ್ದಿರುವ ಶಂಕೆ

ಚಲಿಸುತ್ತಿದ್ದ ರೈಲಿನಿಂದ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಯುವತಿ ಚಲಾಯಿಸುತ್ತಿದ್ದ ಕಿಯಾ ಸಾನೆಟ್ ಕಾರು ಇದಾಗಿದ್ದು, ಸುಮಾರು 35 ರಿಂದ 40 ವರ್ಷದ ಆಸುಪಾಸಿನ ವ್ಯಕ್ತಿ ಎಂಬುದು ತಿಳಿದು ಬಂದಿದೆ. ಬಿದ್ದ ರಭಸಕ್ಕೆ ವ್ಯಕ್ತಿ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಬೀದರ್​​ನಲ್ಲಿ ಭೀಕರ ರಸ್ತೆ ಅಪಘಾತ; ಟ್ರಕ್-ಟಾಟಾ ಎಸ್ ಡಿಕ್ಕಿಯಾಗಿ ನಾಲ್ವರು ಸಾವು

ಥಾರ್ ಜೀಪ್ ಚಾಲಕನ ಅವಾಂತರಕ್ಕೆ ಬೈಕ್ ಸವಾರ ಬಲಿ

ಮಂಗಳೂರು: ಥಾರ್ ಜೀಪ್ ಚಾಲಕನ ಅವಾಂತರಕ್ಕೆ ಬೈಕ್ ಸವಾರ ಕೊನೆಯುಸಿರೆಳೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕೊಲ್ಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಕೊಲ್ಯ ನಿವಾಸಿ ಸಂತೋಷ್ ಬೆಳ್ಚಡ (45) ಮೃತ ವ್ಯಕ್ತಿ. ಕಾರಿನ ಹಿಂಭಾಗಕ್ಕೆ ಥಾರ್ ಜೀಪ್ ಡಿಕ್ಕಿ ಹೊಡೆದಿದ್ದು, ಈ ವೇಳೆ  ಡಿಕ್ಕಿಯ ರಭಸಕ್ಕೆ ಕಾರಿನ ಚಕ್ರ ಸಿಡಿದಿದೆ.  ಇದರಿಂದ ನಿಯಂತ್ರಣ ತಪ್ಪಿ ಬೈಕ್ ಗೆ ಗುದ್ದಿದೆ. ಬಳಿಕ ಕಾರು ಗುದ್ದಿ ಡಿವೈಡರ್ ಗೆ ಬೈಕ್ ಡಿಕ್ಕಿಯಾಗಿದ್ದು, ಡಿವೈಡರ್​ಗೆ ತಲೆ ತಾಗಿ ಗಂಭಿರ ಗಾಯಗೊಂಡು ಬಾಳೆ ಹಣ್ಣು ವ್ಯಾಪಾರಿಯಾಗಿದ್ದ ಸಂತೋಷ್ ಕೊನೆಯುಸಿರೆಳೆದಿದ್ದಾರೆ. ಜೀಪ್ ಚಾಲಕ ನಶೆಯಲ್ಲಿದ್ದ ಆರೋಪ ಕೇಳಿಬಂದಿದ್ದು, ಸ್ಥಳೀಯರಿಂದ ಪೊಲೀಸರೊಂದಿಗೆ ವಾಗ್ವಾದ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:40 pm, Tue, 5 March 24