ಜಯನಗರ ವಿಜಯಾ ಕಾಲೇಜಿನಲ್ಲಿ ಯುವತಿಯ ಎಳೆದಾಡಿದ್ದ ಎಕ್ಸ್​​ ಸ್ಟೂಡೆಂಟ್, ದುಬೈನಲ್ಲಿ ಟೆಕ್ಕಿಯಾಗಿದ್ದ ಆರೋಪಿ ಅರೆಸ್ಟ್!

| Updated By: ಆಯೇಷಾ ಬಾನು

Updated on: Jan 23, 2023 | 2:59 PM

ಕಾಲೇಜಿನ ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಾನಸಿಕ ಅಸ್ವಸ್ಥನಾಗಿರುವ ಆರೋಪಿ ಇದೇ ಕಾಲೇಜಿನಲ್ಲಿ ಓದಿದ್ದ. ಈ ಹಿಂದೆ ದುಬೈನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ.

ಜಯನಗರ ವಿಜಯಾ ಕಾಲೇಜಿನಲ್ಲಿ ಯುವತಿಯ ಎಳೆದಾಡಿದ್ದ ಎಕ್ಸ್​​ ಸ್ಟೂಡೆಂಟ್, ದುಬೈನಲ್ಲಿ ಟೆಕ್ಕಿಯಾಗಿದ್ದ ಆರೋಪಿ ಅರೆಸ್ಟ್!
ಆರೋಪಿ ಅಜಯ್ ಕುಮಾರ್
Follow us on

ಬೆಂಗಳೂರು: ಜಯನಗರ ವಿಜಯ ಕಾಲೇಜಿನಲ್ಲಿ ಯುವತಿ ಎಳೆದಾಡಿದ ಪ್ರಕರಣಕ್ಕೆ ಸಂಬಂಧಿಸಿ ಜಯನಗರ ಠಾಣೆ ಪೊಲೀಸರು ಆರೋಪಿ ಅಜಯ್ ಕುಮಾರ್ ಎಂಬಾತನನ್ನು ಸೆರೆ ಹಿಡಿದಿದ್ದಾರೆ. ಕಾಲೇಜಿನ ಮಹಿಳಾ ಶೌಚಾಲಯಕ್ಕೆ ನುಗ್ಗಿದ್ದ ಅಜಯ್ ಕುಮಾರ್ ಯುವತಿಯನ್ನ ಎಳೆದಾಡಿ ಬಾಯಿ ಮುಚ್ಚಿ ಬೆದರಿಕೆ ಹಾಕಿ ಪರಾರಿಯಾಗಿದ್ದ.

ಕಾಲೇಜಿನ ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಾನಸಿಕ ಅಸ್ವಸ್ಥನಾಗಿರುವ ಆರೋಪಿ ಇದೇ ಕಾಲೇಜಿನಲ್ಲಿ ಓದಿದ್ದ. ಈ ಹಿಂದೆ ದುಬೈನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ. ನಂತರ ಬೆಂಗಳೂರಿಗೆ ಹಿಂದಿರುಗಿ ಸಿನಿಮಾದಲ್ಲಿ ಚಾನ್ಸ್​​ಗಾಗಿ ಓಡಾಡಿಕೊಂಡಿದ್ದ. ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ಆರೋಪಿ ಅಜಯ್ ಕುಮಾರ್, ಊಟ ಮಾಡಿದ ಬಳಿಕ ಶೌಚಾಲಯಕ್ಕೆ ಹೋಗುವ ಅಭ್ಯಾಸ ಇತ್ತು. ಮಾನಸಿಕ ಸ್ಥಿಮಿತ ಇಲ್ಲದ ಕಾರಣ ಸಿಕ್ಕಸಿಕ್ಕ ಶೌಚಾಲಯಕ್ಕೆ ನುಗ್ಗುತ್ತಿದ್ದ. ಅಂದು ಕೂಡ ಊಟ ಮಾಡಿ ಹೆಣ್ಣುಮಕ್ಕಳ ಶೌಚಾಲಯಕ್ಕೆ ನುಗ್ಗಿದ್ದ.

ಇದನ್ನೂ ಓದಿ: ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದ ಸಾರಿಗೆ ನೌಕರರು, ನಾಳೆಯಿಂದ ಬೃಹತ್ ಧರಣಿ ಸತ್ಯಾಗ್ರಹ

ಕರ್ತವ್ಯ ನಿರ್ವಹಣೆ ವೇಳೆ ವಿದ್ಯುತ್ ಪ್ರವಹಿಸಿ ಲೈನ್​ಮ್ಯಾನ್​ ಸಾವು

ಬೆಂಗಳೂರಿನ ಗೋಪಾಲಪುರದಲ್ಲಿ ವಿದ್ಯುತ್ ಪ್ರವಹಿಸಿ ಗಂಭೀರ ಗಾಯಗಳಾಗಿದ್ದ ಸುಂಕದಕಟ್ಟೆ ನಿವಾಸಿ ಲೈನ್​ಮ್ಯಾನ್ ಗೌತಮ್​ನನ್ನು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಲೈನ್​ಮ್ಯಾನ್ ಗೌತಮ್ ಮೃತಪಟ್ಟಿದ್ದಾರೆ. ಮಾಗಡಿ ರೋಡ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ದುರಂತ ಸಂಭವಿಸಿದೆ.

ಟ್ರಾನ್ಸ್ ಫರಂ ದುರಸ್ಥಿ ವೇಳೆ ವಿದ್ಯುತ್ ಪ್ರವಹಿಸಿ ಅವಘಡ ಸಂಭವಿಸಿದೆ. ಗೌತಮ್ ಅಂಜನಾ ಚಿತ್ರ ಮಂದಿರ ಹತ್ತಿರದ ಬೆಸ್ಕಾಂ ಆಫೀಸ್ ನಲ್ಲಿ ಕೆಲಸ ಮಾಡುತಿದ್ದರು. ಗೋಪಾಲಪುರದ ಪೊಲೀಸ್ ಚೌಕಿ ಹತ್ತಿರ ಟ್ರಾನ್ಸ್ ಫಾರ್ಮರ್ ನಲ್ಲಿ ಬೆಂಕಿ ಹತ್ತಿರುವ ಬಗ್ಗೆ ದೂರು ಬಂದ ಹಿನ್ನಲೆ ಗೌತಮ್ ಮತ್ತು ಸಿದ್ದರಾಮ ಸ್ಥಳಕ್ಕೆ ತೆರಳಿದ್ದರು. ಗೌತಮ್ ಟ್ರಾನ್ಸ್ ಫಾರ್ಮರ್ ಕಂಬವನ್ನು ಹತ್ತಿ ಕೆಲಸ ಮಾಡುತ್ತಿದ್ದರು. ಈ ವೇಳೆ ಟ್ರಾನ್ಸ್ ಫಾರ್ಮರ್ ನ ಒಂದು ಕಡೆಯ ವಿದ್ಯುತ್ ಅನ್ನು ಮಾತ್ರ ಆಫ್ ಮಾಡಿ ಕೆಲಸ ಮಾಡಲಾಗುತ್ತಿತ್ತು. ಈ ವೇಳೆ ಮತ್ತೊಂದು ಟ್ರಾನ್ಸ್ ಫಾರ್ಮರ್ ನ ವಿದ್ಯುತ್ ವೈರ್ ಗೆ ಗೌತಮ್ ಅವರ ಕೈ ತಾಗಿತ್ತು. ಈ ವೇಳೆ ಗೌತಮ್ ಮೇಲಿಂದ ಕೆಳಗೆ ಬಿದ್ದಿದ್ದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:59 pm, Mon, 23 January 23