ಬೆಂಗಳೂರು: ನಗರದ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಾಕಿಸ್ತಾನ (Pakistan) ಮೂಲದ ಯುವತಿಯೊಬ್ಬಳು ಪತ್ತೆಯಾಗಿದ್ದು ಆಕೆ ಮತ್ತು ಆಕೆಯ ಗಂಡನೆಂದು ಹೇಳಲಾಗುತ್ತಿರುವ ಒಬ್ಬ ಸೆಕ್ಯುರಿಟಿ ಗಾರ್ಡ್ ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ವ್ಹೈಟ್ ಫೀಲ್ಡ್ಸ್ ಡಿಸಿಪಿ ಎಸ್ ಗಿರೀಶ್ (S Girish) ತಿಳಿಸಿದರು. ಯುವತಿ ಹೆಸರು ಇಕ್ರಾ (Iqra) ಆಗಿದ್ದು ಪಾಕಿಸ್ತಾನದ ಹೈದರಾಬಾದ್ ಪ್ರಾಂತ್ಯದವಳಾಗಿದ್ದಾಳೆ. ಆಕೆಯ ಗಂಡ ಎಂದು ಹೇಳಲಾಗುತ್ತಿರುವ ಮುಲಾಯಂ ಸಿಂಗ್ ಯಾದವ್ (Mulayam Singh Yadav) ಉತ್ತರ ಪ್ರದೇಶದ ಅಹ್ಮದಾಬಾದ್ ನಗರದವನು. ಕಳೆದ 7 ವರ್ಷಗಳಿಂದ ಅವನು ಬೇರೆ ಸಂಸ್ಥೆಗಳಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ದಾನೆ ಮತ್ತು ಸದ್ಯಕ್ಕೆ ಹೆಚ್ ಎಸ್ ಆರ್ ಲೇಔಟ್ ನಲ್ಲಿರುವ ಖಾಸಗಿ ಬ್ಯಾಂಕ್ ನ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿದ ಗಿರೀಶ್ ಅವರಿಬ್ಬರ ವಿಚಾರಣೆ ನಡೆಯುತ್ತಿದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ