PSI Recruitment Scam | ಹಗರಣದಲ್ಲಿ ಆರ್ ಡಿ ಪಾಟೀಲ ಕೇವಲ ಆರೋಪಿ ಮಾತ್ರ, ಅಪರಾಧಿ ಅಲ್ಲ: ಎಮ್ ವೈ ಪಾಟೀಲ್, ಕಾಂಗ್ರೆಸ್ ಶಾಸಕ
ಹಾಗೊಂದು ವೇಳೆ ಅವನ ವಿರುದ್ಧ ದಾಖಲಾಗಿರುವ ಅರೋಪಗಳು ಸಿದ್ಧಗೊಂಡು ಅವನೊಬ್ಬ ದೋಷಿ ಅಂತಾದರೆ ನಾವು ನಿಸ್ಸಂದೇಹವಾಗಿ ಅವನನ್ನು ದೂರ ಇಡುತ್ತೇವೆ ಎಂದು ಎಮ್ ವೈ ಪಾಟೀಲ್ ಹೇಳಿದರು.
ಕಲಬುರಗಿ: ಕಾಂಗ್ರೆಸ್ ಶಾಸಕ ಎಮ್ ವೈ ಪಾಟೀಲ (MY Patil), ಪಿಎಸ್ ಐ ನೇಮಕಾತಿ ಅಕ್ರಮದಲ್ಲಿ (PSI Recruitment Scam) ಪ್ರಮುಖ ಅರೋಪಿ ಹಾಗೂ ಜೈಲು ಸೇರಿ ಜಾಮೀನು ಮೇಲೆ ಹೊರಬಂದಿರುವ ಆರ್ ಡಿ ಪಾಟೀಲ್ ನನ್ನು (RD Patil) ಒಬ್ಬ ಹೋರಾಟಗಾರ ಅಂತ ಬಣ್ಣಿಸಿದ್ದು ದಿಗ್ಭ್ರಮೆ ಮೂಡಿಸುತ್ತದೆ. ಕಲಬುರಗಿಯ ಅಫ್ಜಲಪುರ ತಾಲ್ಲೂಕಿನ ಗಾಣಗಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತಾಡುವಾಗ ಶಾಸಕರು, ಆರ್ ಡಿ ಪಾಟೀಲ ಈಗಲೂ ಒಬ್ಬ ಆರೋಪಿಯಾಗಿದ್ದಾನೆ. ಅವನು ಅಪರಾಧಿ ಅಂತ ಸಾಬೀತಾಗಿಲ್ಲ. ಹಾಗೊಂದು ವೇಳೆ ಅವನ ವಿರುದ್ಧ ದಾಖಲಾಗಿರುವ ಅರೋಪಗಳು ಸಿದ್ಧಗೊಂಡು ಅವನೊಬ್ಬ ದೋಷಿ ಅಂತಾದರೆ ನಾವು ನಿಸ್ಸಂದೇಹವಾಗಿ ಅವನನ್ನು ದೂರ ಇಡುತ್ತೇವೆ ಎಂದು ಎಮ್ ವೈ ಪಾಟೀಲ್ ಹೇಳಿದರು. ಅಫ್ಜಲಪುರದಲ್ಲಿ ಅರ್ ಡಿ ಪಾಟೀಮನ ಕಟೌಟ್ ಗಳು ಊರು ತುಂಬಾ ರಾರಾಜಿಸುತ್ತಿವೆಯಂತೆ!
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Latest Videos