ನಾನ್ಯಾರಿಗೂ ಹೆದರಿಸಿಲ್ಲ, ಧಮ್ಕಿ ಹಾಕಿಲ್ಲ; ಆ ವ್ಯಕ್ತಿಯೇ ಮದ್ಯದ ಅಮಲಿನಲ್ಲಿ ನನಗೆ ಫೋನ್ ಮಾಡಿದ್ದು: ಮೊಹಮ್ಮದ್ ನಲಪಾಡ್

Arun Belly

Arun Belly |

Updated on: Jan 23, 2023 | 4:47 PM

ನಾನು ಮಲಗಿದ್ದಾಗ ಕುಡಿತದ ಅಮಲಿನಲ್ಲಿ ಫೋನ್ ಮಾಡಿದ್ದೇ ಅವನು. ಮನೆ ನುಗ್ಗಿಸುತ್ತೇನೆಂದು ಅಂತ ನಾನು ಹೇಳಿದ್ದು ರೆಕಾರ್ಡಿಂಗ್ ನಲ್ಲಿದೆಯಾ? ಎಂದು ಮೊಹಮ್ಮದ್ ಕೇಳಿದರು

ಕೋಲಾರ:  ಕಾಂಗ್ರೆಸ್ ಯುವನಾಯಕ ಮೊಹಮ್ಮದ್ ನಲಪಾಡ್ (Mohammad Nalapad) ತನ್ನನ್ನು ಸುಖಾಸುಮ್ಮನೆ ಟ್ರೋಲ್ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ತನಗೆ ನಲಪಾಡ್ ಧಮ್ಕಿ (threatened) ಹಾಕಿದರು ಅಂತ ವ್ಯಕ್ತಿಯೊಬ್ಬರು ಮಾಡಿರುವ ಆರೋಪಕ್ಕೆ ಪ್ರತಿಯಾಗಿ ಕೋಲಾರದಲ್ಲಿ ಟಿವಿ9 ಕನ್ನಡ ವಾಹಿನಿಯ ವರದಿಗಾರನೊಂದಿಗೆ ಮಾತಾಡಿದ ಮೊಹಮ್ಮದ್, ‘ನಾನ್ಯಾಕೆ ಅವನಿಗೆ ಧಮ್ಕಿ ಹಾಕಲಿ, ಅಸಲಿಗೆ ರಾತ್ರಿ ಸಮಯದಲ್ಲಿ ನಾನು ಮಲಗಿದ್ದಾಗ ಕುಡಿತದ ಅಮಲಿನಲ್ಲಿ (inebriated state) ಫೋನ್ ಮಾಡಿದ್ದೇ ಅವನು. ಮನೆ ನುಗ್ಗಿಸುತ್ತೇನೆಂದು ಅಂತ ನಾನು ಹೇಳಿದ್ದು ರೆಕಾರ್ಡಿಂಗ್ ನಲ್ಲಿದೆಯಾ? ಅವನು ಒಮ್ಮೆಯಲ್ಲ ಹಲವಾರು ಬಾರಿ ಕಾಲ್ ಮಾಡಿದ್ದಾನೆ. ನನ್ನಲ್ಲಿ ದಾಖಲೆ ಇದೆ, ನನ್ನನ್ನು ಟ್ರೋಲ್ ಮಾಡಲು ವಿರೋಧ ಪಕ್ಷದವರಿಗೆ ಇಷ್ಟು ಸಿಕ್ಕರೆ ಸಾಕು,’ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada