ಮಹದೇವಪುರ ಮಾರ್ಗದಲ್ಲಿ ನಮ್ಮ ಮೆಟ್ರೋ ಬ್ಯಾರಿಕೇಡ್ ಬಿದ್ದು ಕಾರು ಜಖಂ! ಮೆಟ್ರೋ ಅವಘಡಗಳಿಗೆ ಕೊನೆ ಯಾವಾಗ?
ಮೆಟ್ರೋ ಕಾಮಗಾರಿ ಭದ್ರತೆಗಾಗಿ ಅಳವಡಿಸಿದ್ದ ಬ್ಯಾರಿಕೇಡ್ ಏಕಾಏಕಿ ಹುಂಡೈ i10 ಕಾರಿನ ಮೇಲೆ ಬಿದ್ದಿದೆ. ಘಟನೆಯಲ್ಲಿ i10 ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಬೆಂಗಳೂರು: ನಗರದಲ್ಲಿ ಬಿಎಂಆರ್ಸಿಎಲ್ ನಿರ್ಲಕ್ಷ್ಯ ಹೆಚ್ಚಾಗುತ್ತಿದೆ. ಇಂದು ಮತ್ತೆ ಬೆಂಗಳೂರಿನಲ್ಲಿ ಮೆಟ್ರೋ ಬ್ಯಾರಿಕೇಡ್ ಬಿದ್ದು ಕಾರು ಜಖಂ ಆಗ ಘಟನೆ ನಡೆದಿದೆ. ದೊಡ್ಡನೆಕ್ಕುಂದಿ-ಮಹದೇವಪುರ ಮಾರ್ಗದಲ್ಲಿ ಮೆಟ್ರೋ ಬ್ಯಾರಿಕೇಡ್ ಬಿದ್ದು ಕಾರು ಜಖಂ ಆಗಿದ್ದು ಅದೃಷ್ಟವಶಾತ್ ಕಾರಿನಲ್ಲಿದ್ದ ಎಲ್ಲ ಪ್ರಯಾಣಿಕರು ಪಾರಾಗಿದ್ದಾರೆ.
ಮೆಟ್ರೋ ಕಾಮಗಾರಿ ಭದ್ರತೆಗಾಗಿ ಅಳವಡಿಸಿದ್ದ ಬ್ಯಾರಿಕೇಡ್ ಏಕಾಏಕಿ ಹುಂಡೈ i10 ಕಾರಿನ ಮೇಲೆ ಬಿದ್ದಿದೆ. ಘಟನೆಯಲ್ಲಿ i10 ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರು ಚಾಲಕ ಸಂತೋಷ್ ಕುಟುಂಬಸ್ಥರ ಜೊತೆ ತೆರಳುತ್ತಿದ್ದರು. ಕಾರ್ತಿಕ್ ನಗರದಿಂದ ಕೆ.ಆರ್.ಪುರಂ ಕಡೆ ಹೋಗುವಾಗ ಅವಘಡ ಸಂಭವಿಸಿದೆ. ನಿನ್ನೆ ಮಧ್ಯಾಹ್ನ 3.30ರ ವೇಳೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಪಿಲ್ಲರ್ ದುರಂತ: IISc ತಜ್ಞರಿಂದ BMRCL ಎಂಜಿನಿಯರ್ಗಳಿಗೆ ಸ್ಪೆಷಲ್ ಸಿವಿಲ್ ಎಂಜಿನಿಯರಿಂಗ್ ಕ್ಲಾಸ್!
ಬೆಂಗಳೂರಿನಲ್ಲಿ ಸರಣಿ ಅಪಘಾತ
ಇನ್ನು ಮತ್ತೊಂದೆಡೆ ಬೆಂಗಳೂರಿನ ಸುಮ್ಮಹಳ್ಳಿ ಬಳಿ ಸರಣಿ ಅಪಘಾತ ಸಂಭವಿಸಿದೆ. ಇಂದು ಬೆಳಗ್ಗೆ 10 ಘಂಟೆಯ ಸುಮಾರಿಗೆ ನಾಲ್ಕು ಕಾರುಗಳಿಂದ ಸರಣಿ ಅಪಘಾತವಾಗಿದೆ. ಅಪಘಾತದಿಂದಾಗಿ ಕೆಲ ಕಾಲ ಸಮ್ಮನಹಳ್ಳಿ ಬಳಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕಾರು ಚಾಲಕನೊಬ್ಬ ಅತಿವೇಗದಿಂದ ಹೋಗ್ತಿದ್ದ. ಸಡನ್ ಆಗಿ ಬ್ರೇಕ್ ಹಾಕಿದ ಕಾರಣ ಹಿಂಬದಿಯ ಕಾರುಗಳು ಬ್ರೇಕ್ ಹಾಕಿವೆ. ಈ ವೇಳೆ ನಾಲ್ಕು ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ. ಘಟನೆಯಲ್ಲಿ ಕೇವಲ ಕಾರುಗಳಿಗೆ ಮಾತ್ರ ಡ್ಯಾಮೇಜ್ ಆಗಿದೆ. ಯಾವುದೇ ದುರ್ಘಟನೆ ಸಂಭವಿಸಿಲ್ಲ. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:45 pm, Mon, 23 January 23