ನಮ್ಮ ಮೆಟ್ರೋ ಪಿಲ್ಲರ್ ದುರಂತ: IISc ತಜ್ಞರಿಂದ BMRCL ಎಂಜಿನಿಯರ್​​ಗಳಿಗೆ ಸ್ಪೆಷಲ್ ಸಿವಿಲ್ ಎಂಜಿನಿಯರಿಂಗ್ ಕ್ಲಾಸ್!

TV9kannada Web Team

TV9kannada Web Team | Edited By: Ayesha Banu

Updated on: Jan 23, 2023 | 10:49 AM

IISc ತಜ್ಞರಿಂದ ಈ ವಾರದಲ್ಲೇ ಇಂಜಿನಿಯರ್​​ಗಳಿಗೆ ತರಬೇತಿ ನೀಡಲು ಬಿಎಂಆರ್​ಸಿಎಲ್​​ ನಿರ್ಧಾರ ಮಾಡಿದೆ. ಮೆಟ್ರೋ ಇಂಜಿನಿಯರ್ಸ್, ಗುತ್ತಿಗೆ ಪಡೆದ ಕಂಪನಿ ಸಿಬ್ಬಂದಿಗೆ ಕಾಮಗಾರಿ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತರಬೇತಿ ಕೊಡಿಸಲು ಬಿಎಂಆರ್​ಸಿಎಲ್​ ಮುಂದಾಗಿದೆ.

ನಮ್ಮ ಮೆಟ್ರೋ ಪಿಲ್ಲರ್ ದುರಂತ: IISc ತಜ್ಞರಿಂದ BMRCL ಎಂಜಿನಿಯರ್​​ಗಳಿಗೆ ಸ್ಪೆಷಲ್ ಸಿವಿಲ್ ಎಂಜಿನಿಯರಿಂಗ್ ಕ್ಲಾಸ್!
ಕುಸಿದು ಬಿದ್ದ ಮೆಟ್ರೋ ಪಿಲ್ಲರ್ ರಾಡ್​ಗಳು

ಬೆಂಗಳೂರು: ನಾಗವಾರ ಬಳಿಯ ಮೆಟ್ರೋ ಪಿಲ್ಲರ್​ನ ಚೌಕಟ್ಟು ಬಿದ್ದು ತಾಯಿ, ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ದುರಂತ ನಡೆದ ಬೆನ್ನಲ್ಲೇ ಕೊನೆಗೂ ಬಿಎಂಆರ್​ಸಿಎಲ್​ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. IISc ತಜ್ಞರಿಂದ ಈ ವಾರದಲ್ಲೇ ಇಂಜಿನಿಯರ್​​ಗಳಿಗೆ ತರಬೇತಿ ನೀಡಲು ಬಿಎಂಆರ್​ಸಿಎಲ್​​ ನಿರ್ಧಾರ ಮಾಡಿದೆ. ಮೆಟ್ರೋ ಇಂಜಿನಿಯರ್ಸ್, ಗುತ್ತಿಗೆ ಪಡೆದ ಕಂಪನಿ ಸಿಬ್ಬಂದಿಗೆ ಕಾಮಗಾರಿ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತರಬೇತಿ ಕೊಡಿಸಲು ಬಿಎಂಆರ್​ಸಿಎಲ್​ ಮುಂದಾಗಿದೆ.

ಐಐಎಸ್ಸಿ ಅಧಿಕಾರಿಗಳಿಂದ ಬಿಎಂಆರ್ಸಿಎಲ್ ಗೆ 27 ಪುಟದ ವರದಿ

ಇನ್ನು ಮೊನ್ನೆಯಷ್ಟೆ ಈ ಪ್ರಕರಣ ಸಂಬಂಧ ಐಐಎಸ್ಸಿ ಅಧಿಕಾರಿಗಳು ಬಿಎಂಆರ್ಸಿಎಲ್ ಗೆ 27 ಪುಟದ ವರದಿ ಸಲ್ಲಿಸಿತ್ತು. ವರದಿಯಲ್ಲಿ ಗುತ್ತಿಗೆ ಕಂಪನಿ ನಿರ್ಲಕ್ಷ್ಯ ವಹಿಸಿರೋದಾಗಿ ತಜ್ಞರ ತಂಡ ಉಲ್ಲೇಖಿಸಿತ್ತು. ಮತ್ತೊಂದೆಡೆ BMRCL ಎಂಡಿ ಅಂಜು ಫರ್ವೆಜ್ ರನ್ನ ಗೋವಿಂದಪುರ ಪೊಲೀಸರು 2 ಗಂಟೆಗಳ ಕಾಲ ವಿಚಾರಣೆ ನಡೆಸಿದ್ರು.

ನಾಗವಾರದ ಹೆಣ್ಣೂರು ರಸ್ತೆಯ ಬಳಿ ಜನವರಿ 10 ರಂದು 218 ನೇ ನಿರ್ಮಾಣ ಹಂತದ ಪಿಲ್ಲರ್‌ ಕುಸಿದು ತಾಯಿ, ಮಗು ದಾರುಣವಾಗಿ ಮೃತಪಟ್ಟಿದ್ದರು. ಸ್ಟ್ರಕ್ಚರ್‌ ಉರುಳಲು ತಾಂತ್ರಿಕ ಕಾರಣವೇನು ಎಂಬುದರ ಕುರಿತು ಐಐಎಸ್ಸಿ ತಜ್ಞರು ಕಳೆದ 10 ದಿನಗಳಿಂದ ತನಿಖೆ ನಡೆಸಿದ್ದರು. ಸ್ಥಳ ಪರಿಶೀಲನೆ, ಘಟನೆಯ ಹತ್ತು ದಿನಗಳ ಮೊದಲಿನ ದಾಖಲೆ ಮಾಹಿತಿ ಪಡೆದಿದ್ದ ಐಐಎಸ್‌ಸಿ, ಕಬ್ಬಿಣ, ಸ್ಟೀಲ್‌, ಸಿಮೆಂಟ್‌, ತುಂಡಾದ ಗೈರ್‌ ವೈರ್‌ ಸೇರಿ ಕಚ್ಚಾವಸ್ತುಗಳನ್ನು ತಪಾಸಣೆ ಮಾಡಿತ್ತು. ಈ ವೇಳೆ ವಸ್ತುಗಳಲ್ಲಿ ಕಳಪೆ ಗುಣಮಟ್ಟ ಕಂಡು ಬಂದಿಲ್ಲ ಎಂದು ಪ್ರೊ.ಚಂದ್ರ ಕಿಶನ್‌ ತಿಳಿಸಿದ್ದರು. ಹೀಗಾಗಿ ಎತ್ತರದ ಸ್ಟ್ರಕ್ಚರ್‌ ಬಲವರ್ಧನೆಗೆ ಸುತ್ತ ಕಂಬಿಗಳನ್ನು ನಿಲ್ಲಿಸದಿರುವುದೇ ಘಟನೆಗೆ ಕಾರಣ ಹಾಗೂ ಸ್ಟೇಜಿಂಗ್‌ ಮಾಡಿಕೊಳ್ಳದಿರುವುದು ಗೈರ್‌ ವೈರ್‌ ಕಟ್ಟುವಲ್ಲಿ ನಿರ್ಲಕ್ಷ್ಯ, ವಿನ್ಯಾಸ ಲೋಪ ಎಂದು 27 ಪುಟಗಳ ವರದಿಯಲ್ಲಿ ಸಲ್ಲಿಕೆ ಮಾಡಿದ್ರು‌‌.

ಘಟನೆಗೆ ಗುತ್ತಿಗೆ ಕಂಪನಿಯ ನಿರ್ಲಕ್ಷ್ಯ

ಮೆಟ್ರೋ ನಿರ್ಮಾಣ ಹಂತದ ಪಿಲ್ಲರ್‌ ಕುಸಿಯಲು ನಿರ್ಮಾಣ ಕಾಮಗಾರಿಯಲ್ಲಿ ಯಾವುದೇ ಕಳಪೆಯಾಗಿಲ್ಲ. ಆದರೆ ಕಾಮಗಾರಿ ಕೈಗೊಳ್ಳುವಾಗಿನ ಸಂದರ್ಭದ ನಿರ್ಲಕ್ಷ್ಯದಿಂದ ಘಟನೆ ಸಂಭವಿಸಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ಬಿಎಂಆರ್‌ಸಿಎಲ್‌ಗೆ ಶನಿವಾರ ವರದಿ ಸಲ್ಲಿಸಿದೆ. ಈ ಮೂಲಕ ಘಟನೆಗೆ ಗುತ್ತಿಗೆ ಕಂಪನಿಯ ನಿರ್ಲಕ್ಷ್ಯ ಕಾರಣ ಅನ್ನೋದನ್ನ ವರದಿಯಲ್ಲಿ ಉಲ್ಲೇಖಿಸಿದೆ. ಹೀಗಾಗಿ IISc ತಜ್ಞರಿಂದ ಇಂಜಿನಿಯರ್​​ಗಳಿಗೆ ತರಬೇತಿ ನೀಡಲು ಬಿಎಂಆರ್​ಸಿಎಲ್​​ ನಿರ್ಧಾರ ಮಾಡಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada