Human Powered Vehicle: ಮಕ್ಕಳ ಆಟಿಕೆ ಕಾರು ರಸ್ತೆಗೆ ಬಂದ್ಬಿಡ್ತು ಅನ್ಕೊಂಡ್ರಾ ಅಲ್ಲ, ಇದು ಬೆಂಗಳೂರಲ್ಲಿ ಕಂಡ ಹ್ಯೂಮನ್ ಪವರ್ಡ್ ವೆಹಿಕಲ್
ಬೆಂಗಳೂರಿನಲ್ಲಿ ರಸ್ತೆಯೊಂದರಲ್ಲಿ ಸ್ಲೀಪಿಂಗ್ ಪಾಡ್ ಆಕಾರದ ಹ್ಯೂಮನ್ ಪವರ್ಡ್ ವೆಹಿಕಲ್ ಕಾಣಿಸಿಕೊಂಡಿದೆ. ಇದನ್ನು ನೋಡಿ ಅನ್ಯಗ್ರಹ ಜೀವಿ ಅನ್ಕೋಬೇಡಿ, ಮಕ್ಕಳ ಆಟಿಕೆ ಕಾರು ಕೂಡ ಅಲ್ಲ, ಇದು ಕೂಡ ಒಂದು ವಾಹನ ಅಷ್ಟೇ.
ಬೆಂಗಳೂರಿನಲ್ಲಿ ರಸ್ತೆಯೊಂದರಲ್ಲಿ ಸ್ಲೀಪಿಂಗ್ ಪಾಡ್ ಆಕಾರದ ಹ್ಯೂಮನ್ ಪವರ್ಡ್ ವೆಹಿಕಲ್ ಕಾಣಿಸಿಕೊಂಡಿದೆ. ಇದನ್ನು ನೋಡಿ ಅನ್ಯಗ್ರಹ ಜೀವಿ ಅನ್ಕೋಬೇಡಿ, ಮಕ್ಕಳ ಆಟಿಕೆ ಕಾರು ಕೂಡ ಅಲ್ಲ, ಇದು ಕೂಡ ಒಂದು ವಾಹನ ಅಷ್ಟೇ. ಬೆಂಗಳೂರಿನ ಜೆಪಿ ನಗರದಲ್ಲಿ ಈ ವಾಹನ ಪತ್ತೆಯಾಗಿದೆ. ಈ ಹ್ಯೂಮನ್ ಪವರ್ಡ್ ವೆಹಿಕಲ್‌ನ ವಿಡಿಯೋ ಮತ್ತು ಕೆಲವು ಫೋಟೋಸ್ ಟ್ವಿಟರ್‌ನಲ್ಲಿ ಭಾರಿ ಸದ್ದು ಮಾಡಿದೆ. ಬಹಳಷ್ಟು ಮಂದಿ ಇದನ್ನು ಇಷ್ಟಪಟ್ಟಿದ್ದಾರೆ.
ರೇವಂತ್ ಎಂಬ ಬೆಂಗಳೂರು ವಾಸಿ ಈ ವಾಹನದ ವಿಡಿಯೋ, ಫೋಟೋವನ್ನು ಟ್ವೀಟ್ ಮಾಡಿದ್ದಾರೆ. ಇದು ನೆದರ್ಲೆಂಡ್ಸ್‌ನಿಂದ ಆಮದು ಮಾಡಿಕೊಂಡ ಹ್ಯೂಮನ್ ಪವರ್ಡ್ ವೆಹಿಕಲ್ ಎಂದು ಟ್ವೀಟ್ ಮಾಡಿದ್ದಾರೆ. ಹೀಗಾಗಿ ಬೆಂಗಳೂರಲ್ಲಿ ಕಂಡ ಇಂಪೋರ್ಟೆಡ್ ಹ್ಯುಮನ್ ಪವರ್ಡ್ ವೆಹಿಕಲ್ ವಿಡಿಯೋ, ಫೋಟೋ ಟ್ವೀಟ್ ರೀಟ್ವೀಟ್ ಮತ್ತು ಲೈಕ್ಸ್ ಅನ್ನು ಪಡೆದುಕೊಂಡಿದೆ.
ಗುಂಡಿಗಳಿಂದಲೇ ಆವೃತವಾಗಿರುವ ಈ ಬೆಂಗಳೂರಿನ ರಸ್ತೆಗಳಲ್ಲಿ ಈ ಹ್ಯೂಮನ್ ಪವರ್ಡ್ ವಾಹನವನ್ನು ಹೇಗೆ ಚಲಾಯಿಸುತ್ತಾರೆ ಎನ್ನುವ ಪ್ರಶ್ನೆ ಎದುರಾಗಿದೆ. ವಾಸ್ತವದಲ್ಲಿ ನಾನೂ ಇದನ್ನೆ ಕೇಳಿದ್ದೆ ಅವರ ಬಳಿ, ರಸ್ತೆ ಗುಂಡಿಗಳು ಇರುವಾಗ ಹೇಗೆ ಚಲಾಯಿಸಬೇಕು, ಗುಂಡಿಗಳು ಕಾಣಿಸುತ್ತಾ ಹೀಗೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಸ್ವಲ್ಪ ಸಮಯದಿಂದ ಇದನ್ನು ಇದನ್ನು ಬಳಸುತ್ತಿದ್ದೇನೆ ಎಂದು ಹೇಳಿದ್ದಾಗಿ ಬರೆದುಕೊಂಡಿದ್ದಾರೆ. ಇದು ಭಾರತದ ರಸ್ತೆಗಳಿಗೆ ಇದು ಉತ್ತಮವಾದದ್ದಲ್ಲ ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.
ಭಾರತದಲ್ಲಿ ಇಂತಹ ವಾಹನಗಳನ್ನು ಓಡಿಸಬಹುದೇ, ಏನಾದರೂ ಕಾನೂನು ಅಡ್ಡಿಗಳಿವೆಯೇ, ಒಂದೊಮ್ಮೆ ಬೆಂಗಳೂರು ಸಂಚಾರಿ ಪೊಲೀಸರಿಗೆ ಈ ವಾಹನ ಕಾಣಿಸಿಕೊಂಡರೆ ಸಾಕಷ್ಟು ಪ್ರಶ್ನೆಗಳನ್ನು ಕೇಳಬಹುದು ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ