ಬೆಂಗಳೂರು: ನಡು ರಸ್ತೆಯಲ್ಲಿ ಹತ್ಯೆಗೈದು ಸಹೋದರಿಗೆ ಕರೆ ಮಾಡಿ ವಿಷಯ ತಿಳಿಸಿದ ಹಂತಕರು

|

Updated on: May 18, 2023 | 3:10 PM

ಪೈಪ್ ಲೇನ್ ರಸ್ತೆಯ ರೈಲ್ವೆ ಟ್ರ್ಯಾಕ್ ಪಕ್ಕದ ರಸ್ತೆಯಲ್ಲಿ ಜಬೀಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ ಹಂತಕರು ಬಳಿಕ ಕೊಲೆಯಾದವನ ಸಹೋದರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಬೆಂಗಳೂರು: ನಡು ರಸ್ತೆಯಲ್ಲಿ ಹತ್ಯೆಗೈದು ಸಹೋದರಿಗೆ ಕರೆ ಮಾಡಿ ವಿಷಯ ತಿಳಿಸಿದ ಹಂತಕರು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಮೇ 13ರಂದು ಒಂದು ಕಡೆ ಚುನಾವಣಾ ಫಲಿತಾಂಶ(Karnataka Assembly Elections 2023 Result) ಹೊರಬಿದ್ರೆ ಮತ್ತೊಂದು ಕಡೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೆತ್ತರು ಹರಿದಿದೆ(Murder). ಮೇ 13ರ ಬೆಳಗಿನ ಜಾವ ಇಡೀ ರಾಜ್ಯ ಚುನಾವಣೆ ಫಲಿತಾಂಶಕ್ಕಾಗಿ ಟಿವಿ ಮುಂದೆ ಕೂತಿತ್ತು. ಆದ್ರೆ ಪೈಪ್ ಲೇನ್ ರಸ್ತೆಯ ರೈಲ್ವೆ ಟ್ರ್ಯಾಕ್ ಪಕ್ಕದ ರಸ್ತೆಯಲ್ಲಿ ಹೆಣ ಬಿದಿದೆ. ಜಬೀ ಉಲ್ಲಾ (24) ಕೊಲೆಯಾದ ವ್ಯಕ್ತಿ. ಕೆಲ ಹಂತಕರು ಜಬೀ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ಹಲ್ಲೆ ಮಾಡಿ ಸಹೋದರಿಗೆ ಕಾಲ್ ಮಾಡಿದ ಹಂತಕರು

ಪೈಪ್ ಲೇನ್ ರಸ್ತೆಯ ರೈಲ್ವೆ ಟ್ರ್ಯಾಕ್ ಪಕ್ಕದ ರಸ್ತೆಯಲ್ಲಿ ಜಬೀಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ ಹಂತಕರು ಬಳಿಕ ಕೊಲೆಯಾದವನ ಸಹೋದರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಹಲ್ಲೆ ಮಾಡಿದ್ದೇವೆ ಆಸ್ಪತ್ರೆಗೆ ಸೇರಿಸಿ ಎಂದಿದ್ದಾರೆ. ಇದರಿಂದ ಶಾಕ್ ಆದ ಜಬೀ ಸಹೋದರಿ ತಕ್ಷಣವೇ ಕೊಲೆಯಾದ ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳಕ್ಕೆ ಬರುವಷ್ಟರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಜಬೀ ಪ್ರಾಣಪಕ್ಷಿ ಹಾರಿ ಹೋಗಿದೆ. ಇನ್ನು ಕೊಲೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಜೆಜೆನಗರ ಪೊಲೀಸರು ಸದ್ಯ ಕೊಲೆ ಸಂಬಂಧ ನಾಲ್ಕಕ್ಕೂ ಅಧಿಕ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Jama Masjid: ದೆಹಲಿಯ ಜಾಮಾ ಮಸೀದಿ ಬಳಿ ಗುಂಡಿಕ್ಕಿ ಯುವಕನ ಹತ್ಯೆ

ಹಣ ಕೊಡ್ತಿಲ್ಲ ಎಂದು ಕೊಲೆ

ಆರೋಪಿಗಳು ಜಬೀಗೆ ಕ್ಯಾಂಟರ್ ಕೊಡಿಸಿದ್ದರು. ಬಳಿಕ ತಿಂಗಳಿಗೆ ಇಷ್ಟು ಹಣ ಕೊಡುವಂತೆ ಹೇಳಿದ್ದರು. ಆರಂಭದಲ್ಲಿ ಹಣ ಕೊಟ್ಟು ಬಳಿಕ ಕೊಡದೇ ಜಬೀ ಸುಮ್ಮನಾಗಿದ್ದ. ಇದೇ ವಿಚಾರವಾಗಿ ಜಗಳ ನಡೆದು ಆರೋಪಿಗಳು ಜಬೀಯನ್ನು ಕೊಲೆ ಮಾಡಿದ್ದಾರೆ. ಜೆಜೆ ನಗರ ಪೊಲೀಸರಿಂದ ತನಿಖೆ ಮುಂದುವರೆದಿದೆ.

ಶಿವಮೊಗ್ಗ: ಇಬ್ಬರು ಕಾರ್ಮಿಕರನ್ನ ಪೀಕಾಸೆಯಿಂದ ಹೊಡೆದು ಬರ್ಬರ ಹತ್ಯೆ

ಶಿವಮೊಗ್ಗ: ಪೀಕಾಸೆಯಿಂದ ಹೊಡೆದು ಕಾರ್ಮಿಕರನ್ನು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ(Thirthahalli) ತಾಲೂಕಿನ ಕುರುವಳ್ಳಿ ಗ್ರಾಮದಲ್ಲಿ ನಡೆದಿದೆ. ವಿಶ್ವಕರ್ಮ ಸಮುದಾಯ ಭವನದ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಆರೋಪಿ ರಾಜಣ್ಣ ಎಂಬಾತ ಮಂಜಪ್ಪ(45), ಬೀರೇಶ್(35) ಎಂಬಿಬ್ಬರನ್ನ ಕೊಲೆ ಮಾಡಿದ್ದಾನೆ. ಇನ್ನು ರಾತ್ರಿ ಕುಡಿದು ಗಲಾಟೆ ಮಾಡಿಕೊಂಡಿದ್ದ ಮೂವರು ಕಾರ್ಮಿಕರು, ಈ ವೇಳೆ ಆರೋಪಿ ರಾಜಣ್ಣನನ್ನು ಮಂಜಪ್ಪ ಹಾಗೂ ಬೀರೇಶ್ ಥಳಿಸಿದ್ದರು. ಇದೇ ಕಾರಣಕ್ಕೆ ಇಂದು(ಮೇ.18) ಪೀಕಾಸೆಯಿಂದ ಹೊಡೆದು ಇಬ್ಬರನ್ನು ಹತ್ಯೆ ಮಾಡಿದ್ದಾನೆ. ಈ ಹಿನ್ನಲೆ ಆರೋಪಿ ರಾಜಣ್ಣ(58)ನನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿದ್ದು, ಘಟನಾ ಸ್ಥಳಕ್ಕೆ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಭೇಟಿ ನೀಡಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:56 pm, Thu, 18 May 23