ಜ್ಞಾನ ಭಾರತಿ ವಿವಿ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ ಜಾಬ್? ಮತ್ತೆ ಚರ್ಚೆಗೆ ಬಂದ ಕನ್ನಡಿಗರ ಉದ್ಯೋಗ ಮೀಸಲಾತಿ ವಿಚಾರ

| Updated By: ಆಯೇಷಾ ಬಾನು

Updated on: Aug 05, 2024 | 7:36 AM

ಇತ್ತೀಚೆಗೆ ಕಾಂಪಿಟೇಟಿವ್ ಜಗತ್ತಿನಲ್ಲಿ, ಉದ್ಯೋಗ ಬೇಕು ಅಂದ್ರೆ ರೆಸ್ಯೂಮ್‌ನಲ್ಲಿ ಸ್ಕಿಲ್ಸ್ ಜೊತೆಗೆ ಮುಖ್ಯವಾಗಿ ಕೇಳೊದು, ಇಂಗ್ಲೀಷ್ ಬರುತ್ತಾ ಅಂತ, ಆದ್ರೆ ಅನೇಕರಿಗೆ ಸ್ಕಿಲ್ ಇರುತ್ತೆ ಆದ್ರೆ ಭಾಷೆಯ ಸಮಸ್ಯೆಯಿಂದ ಅದೆಷ್ಟೋ ಅವಕಾಶಗಳನ್ನ ಕಳೆದುಕೊಂಡಿರ್ತಾರೆ. ಸದ್ಯ ಐಟಿ ಸಿಟಿ ಬೆಂಗಳೂರಿನ ಜ್ಞಾನ ಭಾರತಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಕೆಲಸ ಇಲ್ಲವಾಯ್ತಾ ಅನ್ನೋ ಚರ್ಚೆ ಕೇಳಿ ಬಂದಿದ್ದು ಉದ್ಯೋಗ ಮೀಸಲಾತಿ ಪರ ಬೆಂಗಳೂರು ವಿವಿ ಬ್ಯಾಟ್ ಬೀಸಿದೆ.

ಜ್ಞಾನ ಭಾರತಿ ವಿವಿ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ ಜಾಬ್? ಮತ್ತೆ ಚರ್ಚೆಗೆ ಬಂದ ಕನ್ನಡಿಗರ ಉದ್ಯೋಗ ಮೀಸಲಾತಿ ವಿಚಾರ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಆಗಸ್ಟ್.05: ಖಾಸಗಿ ವಲಯದಲ್ಲಿ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಚಾರ ಕಳೆದ ತಿಂಗಳು ದೊಡ್ಡಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಸರ್ಕಾರ (Karnataka Government) ಉದ್ಯೋಗ ಮೀಸಲಾತಿ ಜಾರಿಗೆ ಮುಂದಾಗಿ ಅದ್ಯಾಕೋ ಹಿಂದೇಟು ಹಾಕಿದೆ. ಆದರೆ ಈ ಬೆನ್ನಲೆ ಈಗ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರ (Kannadigas) ಉದ್ಯೋಗ ಮೀಸಲಾತಿ ಪರ ಜ್ಞಾನ ಭಾರತಿ ವಿಶ್ವವಿದ್ಯಾಲಯ ಬ್ಯಾಟ್ ಬೀಸಿದೆ.

ಐಟಿ ಸಿಟಿಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಜಾಬ್ ಸಿಗ್ತೀಲ್ಲವಂತೆ. ರಾಜಧಾನಿಯಲ್ಲಿ ಇಂಗ್ಲೀಷ್ ಕಲಿಕೆ ಇಲ್ಲದ ವಿದ್ಯಾರ್ಥಿಗಳಿಗೆ ಕೆಲಸವೇ ಇಲ್ಲದಾಗಿದೆ. ಹೀಗಾಗಿ ಬೆಂಗಳೂರು ವಿಶ್ವವಿದ್ಯಾಲಯ ಉಚಿತವಾಗಿ ಲ್ಯಾಂಗ್ವೇಜ್ ಲ್ಯಾಬ್ ಶುರು ಮಾಡಿ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಭಾಷಾ ಶಾಸ್ತ್ರ ಹೇಳಿಕೊಡುವ ಸ್ಥಿತಿಗೆ ಬಂದಾಗಿದೆ. ವಿವಿಯ ಲಕ್ಷಾಂತರ ಗ್ರಾಮೀಣ ಭಾಗದ ಕನ್ನಡ ಮಾದ್ಯಮ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಭಾಷ ಜ್ಞಾನದ ಕೊರತೆಯಿಂದ ಕೆಲಸ ಸಿಗುತ್ತಿಲ್ಲ. ಹೀಗಾಗಿ ಲ್ಯಾಬ್ ಶುರು ಮಾಡಿದ್ದು ಇಂಗ್ಲೀಷ್ ಭಾಷಾಶಾಸ್ತ್ರ ಹೇಳಿ ಕೋಡಲಾಗ್ತೀದೆ. ಹೀಗಾಗಿ ಸರ್ಕಾರ ಕನ್ನಡದ ವಿದ್ಯಾರ್ಥಿಗಳಿಗೆ ಐಟಿ ಸೇರಿದಂತೆ ಖಾಸಗಿ ಕಂಪನಿಗಳಲ್ಲಿ ಔದ್ಯೋಗಿಕ ಮೀಸಲಾತಿ ತಂದ್ರೆ ಬೆಂಗಳೂರು ವಿವಿ ವಿದ್ಯಾರ್ಥಿಗಳ ಜೊತೆ ಎಲ್ಲ ಕನ್ನಡ ಅಭ್ಯಾಸಮಾಡುವ ವಿದ್ಯಾರ್ಥಿಗಳಿಗೂ ಸುಲಭವಾಗಿ ಕೆಲಸ ಸಿಗುತ್ತೆ ಎಂದು ಬೆಂಗಳೂರು ವಿವಿ ಕುಲಪತಿಗಳಾದ ಜಯಕರ್ ಶೆಟ್ಟಿ ತಿಳಿಸಿದ್ದಾರೆ.

ಇದನ್ನೂ ಓದಿ: ಪಾದಯಾತ್ರೆಗೆ ಸಿಮೀತವಲ್ಲ ಬಿಜೆಪಿ ಹೋರಾಟ: ಬಳ್ಳಾರಿಯಲ್ಲಿ ನಡೆಯಲಿದೆ ಬೃಹತ್ ಸಮಾವೇಶ

ಇನ್ನು ಒಳ್ಳೆ ಮಾರ್ಕ್ಸ್ ಇದೆ ಟ್ಯಾಲೆಂಟ್ ಜೊತೆಗೆ ಪದವಿಯೂ ಇದೆ ಆದ್ರೆ ಇಂಗ್ಲೀಷ್ ಕಮ್ಯೂನಿಕೇಶನ್ ಸ್ಕಿಲ್ ಬರ್ತಿಲ್ಲ. ಹೀಗಾಗಿ ಕೆಲಸವೂ ಇಲ್ಲದಾಗಿದೆ ಎಂದು ರಾಜಧಾನಿಯಲ್ಲಿ ಓದುತ್ತಿರುವ ಬಹುತೇಕ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಐಟಿ ಬಿಟಿ ಸೇರಿದ್ದಂತೆ ನಾನಾ ಕಂಪನಿಗಳಲ್ಲಿ ಸಾಕಷ್ಟು ಅವಕಾಶಗಳಿದ್ರೂ ಉತ್ತರಭಾರತದವರಿಗೆ ಸಿಕ್ಕಷ್ಟು ಅವಕಾಶಗಳು ಬೆಂಗಳೂರಿನ ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ. ಹೀಗಾಗಿ ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯ ಅನಿವಾರ್ಯವಾಗಿ ಇಂಗ್ಲೀಷ್ ಲ್ಯಾಂಗ್ವೇಜ್ ಲ್ಯಾಬ್ ಶುರುಮಾಡಿದ್ದು ಇಂಗ್ಲೀಷ್ ಹೇಳಿ ಕೊಡುತ್ತಿದೆ, ಅದ್ರೆ ಸರ್ಕಾರ ನಮ್ಗೆ ಉದ್ಯೋಗ ಮೀಸಲಾತಿ ಜಾರಿ ಮಾಡಿದ್ರೆ ಕನ್ನಡದ ವಿದ್ಯಾರ್ಥಿಗಳಿಗೆ ಸುಲಭವಾಗಿ ಕೆಲಸ ಸಿಗಲಿದೆ ಅಂತಿದ್ದು ಸರ್ಕಾರಕ್ಕೆ ಉದ್ಯೋಗ ಮೀಸಲಾತಿ ಜಾರಿ ಮಾಡುವಂತೆ ಒತ್ತಾಯ ಮಾಡ್ತೀದ್ದಾರೆ.

ಒಟ್ನಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದಲಾದ್ರೂ ಸರ್ಕಾರ ವಿದ್ಯಾರ್ಥಿಗಳಿಗೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಮೀಸಲಾತಿ ತರಬೇಕಿದೆ. ಕನ್ನಡ ಮಾದ್ಯಮದಲ್ಲಿ ಓದುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಸಿಗುವಂತೆ ಅನಕೂಲಕರವಾದ ಕಾನೂನು ಜಾರಿ ತರುವ ಕಡೆ ಸರ್ಕಾರ ಇನ್ನಾದ್ರೂ ಮನಸ್ಸು ಮಾಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ