ಬೆಂಗಳೂರು: ನಗರದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಹೊಸ ಮಾರ್ಗಸೂಚಿ ಹೊರಡಿಸಿದ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ
ಬೆಂಗಳೂರು ನಗರದ ಟ್ರಾಫಿಕ್ ಕಂಟ್ರೋಲ್ಗೆ ಪ್ರಧಾನಿ ಸೂಚಿಸಿದ ಹಿನ್ನೆಲೆ, ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು ಇಂದು (ಜುಲೈ 6) ಹೆಬ್ಬಾಳ ಜಂಕ್ಷನ್ ಬಳಿ ಟ್ರಾಫಿಕ್ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹೊಸ ಮಾರ್ಗಸೂಚಿ ರೂಪಿಸಿದ್ದಾರೆ.
ಹೆಬ್ಬಾಳ ಜಂಕ್ಷನ್ ಹೊಸ ಟ್ರಾಫಿಕ್ ಮಾರ್ಗಸೂಚಿ
Follow us on
ಬೆಂಗಳೂರು: ನಗರದ ಟ್ರಾಫಿಕ್ ನಿಯಂತ್ರಣಕ್ಕಾಗಿ (Traffic Control) ಪ್ರಧಾನಿ ನರೇಂದ್ರ ಮೋದಿ ಅವರು (Narendra Modi) ಸೂಚಿಸಿದ್ದ ಹಿನ್ನೆಲೆಯಲ್ಲಿ, ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ (Joint Police Commissioner Ravi Kante Gowda) ಅವರು ಇಂದು (ಜುಲೈ 6) ಹೆಬ್ಬಾಳ ಜಂಕ್ಷನ್ (Hebbal Junction) ಬಳಿ ಟ್ರಾಫಿಕ್ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿದರು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ. ಈ ಎಲ್ಲ ಮಾರ್ಗ ಸೂಚಿಗಳು 08-07-2022 ರ ಶುಕ್ರವಾರ ಬೆಳಗ್ಗೆ 6-00 ಗಂಟೆಯಿಂದ ಜಾರಿಗೆ ಬರಲಿವೆ ಎಂದು ಅವರು ತಿಳಿಸಿದ್ದಾರೆ.
ಯಲಹಂಕ/ಕೊಡಿಗೇಹಳ್ಳಿ/ಕೆಂಪಾಪುರ/ಜಕ್ಕೂರು ಇತ್ಯಾದಿ ಕಡೆಗಳಿಂದ ಸರ್ವಿಸ್ ರಸ್ತೆಯ ಮೂಲಕ ನಗರಕ್ಕೆ ಪ್ರವೇಶಿಸುವ ವಾಹನಗಳು ಹೆಬ್ಬಾಳ ಫ್ಲೈ ಓವರ್ ಮೂಲಕ ನೇರವಾಗಿ ಪ್ರವೇಶಿಸುವಂತಿಲ್ಲ. ಬದಲಾಗಿ ಹೆಬ್ಬಾಳ ಸರ್ಕಲ್ ನಲ್ಲಿರುವ ಲೂಪ್ ರ್ಯಾಂಪ್ನ್ನು ಬಳಸಿ, ನಗರಕ್ಕೆ ಪ್ರವೇಶಿಸಬೇಕು.
ಏರ್ಪೋರ್ಟ್ನ ಏಲಿವೇಟೆಡ್ ಕಾರಿಡಾರ್‌ನಿಂದ ಬೆಂಗಳೂರು ನಗರದ ಕಡೆಗೆ ಬರುವ ಬಸ್‌ಗಳು ಹೆಬ್ಬಾಳ ಸರ್ಕಲ್ನಲ್ಲಿ ಬಸ್ ಪ್ರಯಾಣಿಕರನ್ನು ನಿಗದಿಪಡಿಸಿದ ಬಸ್ಬೇನಲ್ಲಿ ಲೂಪ್ರ‍್ಯಾಂಪ್‌ಗಿಂತ ಮುಂಚೆ ಹತ್ತಿಸಿಕೊಳ್ಳಬೇಕು
ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಹೆದ್ದಾರಿಯಿಂದ ನಗರಕ್ಕೆ ಬರುವ ವಾಹನಗಳು ಮೊದಲಿನಂತೆ ಹೆಬ್ಬಾಳ
ಫ್ಲೈ ಓವರ್ ಮೂಲಕ ನಗರವನ್ನು ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ.
ಏರ್‌ಪೋರ್ಟ್ ಎಕ್ಸ್ ಪ್ರೆಸ್ ಹೆದ್ದಾರಿಯಿಂದ ಕೆ.ಆರ್ಪುರಂ, ತುಮಕೂರು ಕಡೆಗೆ ಹೋಗುವವರಿಗೆ ಮೊದಲಿನಂತೆ ಸರ್ವಿಸ್ ರಸ್ತೆ ಮೂಲಕ ಹೋಗಲು ಅವಕಾಶ ನೀಡಲಾಗಿದೆ.
ಏರ್‌ಪೋರ್ಟ್ ಎಕ್ಸ್ ಪ್ರೆಸ್ ಹೆದ್ದಾರಿ ಮೂಲಕ ಕೆಂಪಾಪುರಂ ಕಡೆ ಹೋಗುವವರು ವಿದ್ಯಾಶಿಲ್ಪ/ಯಲಹಂಕ
ಬೈಪಾಸ್ ಬಳಿ ಸರ್ವಿಸ್ ರಸ್ತೆಯನ್ನು ಬಳಸಬಹುದು
ವಾಹನ ಸವಾರರಿಗೆ ಡೈವರ್ಷನ್ ನಾಮಫಲಕ ಹೆಚ್ಚಳ, ವಾಹನ ಸವಾರರಿಗೆ ನಿರ್ದೇಶಿಸಲು ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲಾಗುವುದು.
ಯಾವ ಮಾರ್ಗದ ಮೂಲಕ ಹೋಗಬೇಕು ಅನ್ನೋದರ ಕುರಿತು ಸೂಚನಾ ಫಲಕ ಅಳವಡಿಸಲಿದ್ದಾರೆ.