
ಬೆಂಗಳೂರು, ನವೆಂಬರ್ 24: ಕೇಂದ್ರ ರೈಲ್ವೆಯ ಸೋಲಾಪುರ ವಿಭಾಗ ಕಲಬುರಗಿ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವೆ ‘ವಾರಾಂತ್ಯದ ವಿಶೇಷ ರೈಲುಗಳು’ (Kalaburagi-Bengaluru Special Trains) ವ್ಯವಸ್ಥೆಯನ್ನು ಪ್ರಾರಂಭಿಸಿದ್ದು, ಈ ರೈಲುಗಳು ನವೆಂಬರ್ ಅಂತ್ಯದಿಂದ ಡಿಸೆಂಬರ್ ಅಂತ್ಯದವರೆಗೆ ಸೇವೆ ಒದಗಿಸಲಿವೆ.
ಈ ವಿಶೇಷ ರೈಲು ಆಂಧ್ರಪ್ರದೇಶ ಮತ್ತು ಕರ್ನಾಟಕದ ಪ್ರಮುಖ ರೈಲು ನಿಲ್ದಾಣಗಳ ಮೇಲೆ ಹಾದು ಹೋಗಲಿದೆ. ವಾರಾಂತ್ಯದಲ್ಲಿ ಮಾತ್ರ ಈ ಸೇವೆ ಲಭ್ಯವಿರಿಲಿದೆ. ನಿಯಮಿತ ಮಾರ್ಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣಿಸುತ್ತಿದ್ದು, ಅವರಿಗೆ ಅನುಕೂಲವಾಗಲಿ ಎಂಬ ಕಾರಣದಿಂದ ಈ ಸೇವೆ ಆರಂಭಿಸಲಾಗಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.
ಕಲಬುರಗಿ-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ರೈಲು (ರೈಲು ಸಂಖ್ಯೆ 06208)ನವೆಂಬರ್ 23 ರಿಂದ ಡಿಸೆಂಬರ್ 28 ರವರೆಗೆ ಪ್ರತಿ ಭಾನುವಾರ ಸಂಚರಿಸಲಿದ್ದು, ಕಲಬುರಗಿಯಿಂದ ಬೆಳಿಗ್ಗೆ 09:35 ಕ್ಕೆ ಹೊರಟು ರಾತ್ರಿ 20:30 ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ಹಿಂದಿರುಗುವಾಗ,ಬೆಂಗಳೂರು ಕಂಟೋನ್ಮೆಂಟ್- ಕಲಬುರಗಿ ರೈಲು (ರೈಲು ಸಂಖ್ಯೆ 06207)ನವೆಂಬರ್ 22 ರಿಂದ ಡಿಸೆಂಬರ್ 27 ರವರೆಗೆ ಪ್ರತಿ ಶನಿವಾರ ಕಾರ್ಯನಿರ್ವಹಿಸಲಿದ್ದು, ಬೆಂಗಳೂರು ಕಂಟೋನ್ಮೆಂಟ್‌ನಿಂದ ಸಂಜೆ 7:20 ಕ್ಕೆ ಹೊರಟು ಮರುದಿನ ಬೆಳಿಗ್ಗೆ 07:30 ಕ್ಕೆ ಆಗಮಿಸಲಿದೆ. ಈ ಎರಡೂ ಮಾರ್ಗದಲ್ಲಿ ರೈಲುಗಳು 6 ಬಾರಿ ಸಂಚರಿಸಲಿವೆ.
ಈ ವಿಶೇಷ ರೈಲು ಯಲಹಂಕ, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ ರಸ್ತೆ, ರಾಯಚೂರು, ಕೃಷ್ಣಾ, ಯಾದಗಿರಿ ಮತ್ತು ಶಹಾಬಾದ್ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. ಪ್ರತಿ ರೈಲಿನಲ್ಲಿ ಒಟ್ಟು 22 ಕೋಚ್‌ಗಳು ಇರಲಿದ್ದು, 20 ಸ್ಲೀಪರ್ ಕ್ಲಾಸ್ ಕೋಚ್‌ಗಳು, 2 ಸೆಕೆಂಡ್ ಕ್ಲಾಸ್ ಲಗೇಜ್-ಕಮ್- ಅಂಗವಿಕಲರ ಕೋಚ್‌ಗಳು ಇರಲಿವೆ.
ಇದನ್ನೂ ಓದಿ ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಂಗಳೂರು-ಮುಂಬೈ ನಡುವೆ ಮತ್ತೊಂದು ಸೂಪರ್ ಫಾಸ್ಟ್ ರೈಲು
ಈ ವಾರಾಂತ್ಯದ ವಿಶೇಷ ರೈಲುಗಳ ಬುಕಿಂಗ್‌ಗಳು ವಿಶೇಷ ಶುಲ್ಕಗಳನ್ನು ಹೊಂದಿದ್ದು, ಎಲ್ಲಾ ಕಂಪ್ಯೂಟರ್ ಸೆಂಟರ್ಗಳಲ್ಲಿ ಮತ್ತು IRCTC ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಕಾಯ್ದಿರಿಸದ ಕೋಚ್‌ಗಳನ್ನು ಬಳಸುವ ಪ್ರಯಾಣಿಕರು ನಿಲ್ದಾಣದ ಕೌಂಟರ್‌ಗಳು ಅಥವಾ UTS ಅಪ್ಲಿಕೇಶನ್ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ.ಅನಾನುಕೂಲತೆಯನ್ನು ತಪ್ಪಿಸಲು ಪ್ರಯಾಣಿಕರು ಟಿಕೆಟ್‌ಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುವಂತೆ ಇಲಾಖೆ ಸೂಚಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:41 am, Mon, 24 November 25