ಡಿ.ಕೆ. ಶಿವಕುಮಾರ್ ಮನೆಗೆ ನಾಗಸಾಧು ಭೇಟಿ: ಡಿಸಿಎಂಗೆ ಮಾಡಿದ ಆಶೀರ್ವಾದ ಏನು ಗೊತ್ತಾ?
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಕಾಶಿಯಿಂದ ಆಗಮಿಸಿದ್ದ ನಾಗಸಾಧು ವೇದಗಿರಿ ನಾಗಾ ಬಾಬಾ ಭೇಟಿ ನೀಡಿದ್ದಾರೆ. ಈ ವೇಳೆ ಡಿಕೆಶಿಗೆ ಆಶೀರ್ವಾದ ಮಾಡಿದ ಬಾಬಾ, ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಪರಮಾತ್ಮನ ಹಾಗೂ ಸಂತರ ಆಶೀರ್ವಾದ ಅವರ ಮೇಲಿದ್ದು, ಭಕ್ತಿಯಿಂದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಬೆಂಗಳೂರು, ನವೆಂಬರ್ 24: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ಕಾಶಿಯಿಂದ ಆಗಮಿಸಿದ್ದ ನಾಗಸಾಧು ವೇದಗಿರಿ ನಾಗಾ ಬಾಬಾ ಅವರು ಭೇಟಿ ನೀಡಿ ಆಶೀರ್ವಾದ ನೀಡಿದ್ದಾರೆ. ಭೇಟಿಯ ಬಳಿಕ ಮಾತನಾಡಿದ ನಾಗಸಾಧು ವೇದಗಿರಿ ನಾಗಾ ಬಾಬಾ, ಡಿ.ಕೆ. ಶಿವಕುಮಾರ್ ಸಿಎಂ ಆಗಲೆಂದು ನಾನು ಆಶೀರ್ವಾದ ಮಾಡಿದ್ದೇನೆ. ಅವರು ಸಿಎಂ ಆಗ್ತಾರೆ ಎಂದು ಹೇಳಿದ್ದಾರೆ. ಭಕ್ತಿ ಹೆಚ್ಚಾದಂತೆ ಅಭಿವೃದ್ಧಿ ಆಗುತ್ತದೆ. ಪರಮಾತ್ಮನ ಹಾಗೂ ಸಂತರ ಆಶೀರ್ವಾದ ಡಿ.ಕೆ. ಶಿವಕುಮಾರ್ ಅವರ ಮೇಲಿದೆ ಎಂದು ಅವರು ತಿಳಿಸಿದ್ದಾರೆ. ಸಿಎಂ ಸ್ಥಾನಕ್ಕಾಗಿ ಡಿಕೆಶಿ ಪ್ರಯತ್ನ ನಡೆಸುತ್ತಿರುವ ನಡುವೆ ನಾಗಸಾಧು ನೀಡಿರುವ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

