ರಾತ್ರಿ ವೇಳೆ ಬಸ್ ಮಿಸ್ ಆಯ್ತು ಎಂದು ಡ್ರಾಪ್ ಕೇಳುವವರೆ ಎಚ್ಚರ, ಚಾಕು ತೋರಿಸಿ ದರೋಡೆ ಮಾಡುತ್ತಿದ್ದ ಮೂವರು ಅರೆಸ್ಟ್

| Updated By: ಆಯೇಷಾ ಬಾನು

Updated on: Sep 09, 2023 | 8:31 AM

ಬೆಂಗಳೂರಿನಲ್ಲಿ ರಾತ್ರಿ ವೇಳೆ ಬಸ್ ಮಿಸ್ ಆಯ್ತು ಅಂಥ ಸಿಕ್ಕ ಸಿಕ್ಕ ಗಾಡಿಗಳ ಅಡ್ಡ ಹಾಕುವ ಜನ ಈ ಸುದ್ದಿಯನ್ನು ಓದಲೇ ಬೇಕು. ರಾತ್ರಿ ವೇಳೆ ಮಾನವೀಯತೆಯ ಮಾತುಗಳನ್ನಾಡಿ ಡ್ರಾಪ್ ಕೊಡ್ತೀವಿ‌ ಅಂತ ಮೆಲ್ಲಗೆ ಕಾರು ಹತ್ತಿಸಿಕೊಂಡರೆ ಎಚ್ಚರವಾಗಿರಿ. ಒಳ್ಳೆಯವರಂತೆ ಮಾತುಗಳನ್ನಾಡಿ ಬಳಿಕ ಲಾಕ್ ಮಾಡಿ ನಿಮ್ಮ ಬಳಿ ಇರುವ ಹಣವನ್ನೆಲ್ಲ ದರೋಡೆ ಮಾಡ್ತಾರೆ.

ರಾತ್ರಿ ವೇಳೆ ಬಸ್ ಮಿಸ್ ಆಯ್ತು ಎಂದು ಡ್ರಾಪ್ ಕೇಳುವವರೆ ಎಚ್ಚರ, ಚಾಕು ತೋರಿಸಿ ದರೋಡೆ ಮಾಡುತ್ತಿದ್ದ ಮೂವರು ಅರೆಸ್ಟ್
ನಂಜುಂಡ, ಗಿರೀಶ್ ಹಾಗೂ ನವೀನ್
Follow us on

ಬೆಂಗಳೂರು, ಸೆ.09: ರಾತ್ರಿ ವೇಳೆ ಬಸ್ ಸಿಗಲಿಲ್ಲ. ಹೇಗಾದ್ರು ಮಾಡಿ ಬೇಗ ಮನೆ ಸೇರಿಕೊಳ್ಳಬೇಕು ಎಂದು ಸಿಕ್ಕ ಸಿಕ್ಕ ವಾಹನಗಳಲ್ಲಿ ಡ್ರಾಪ್ ಪಡೆದುಕೊಳ್ಳುವ ಮುನ್ನ ಎಚ್ಚರ(Robbery). ಏಕೆಂದರೆ ಬೆಂಗಳೂರಿನಲ್ಲಿ ಡ್ರಾಪ್ ಕೊಡೋ ನೆಪದಲ್ಲಿ ದರೋಡೆ ಮಾಡೋ ಗ್ಯಾಂಗ್ ಆ್ಯಕ್ಟೀವ್ ಆಗಿದೆ. ರಾತ್ರಿ ವೇಳೆ ಬಸ್ ಮಿಸ್ ಆಯ್ತು ಅಂಥ ಸಿಕ್ಕ ಸಿಕ್ಕ ಗಾಡಿಗಳ ಅಡ್ಡ ಹಾಕುವ ಜನ ಈ ಸುದ್ದಿಯನ್ನು ಓದಲೇ ಬೇಕು. ರಾತ್ರಿ ವೇಳೆ ಮಾನವೀಯತೆಯ ಮಾತುಗಳನ್ನಾಡಿ ಡ್ರಾಪ್ ಕೊಡ್ತೀವಿ‌ ಅಂತ ಮೆಲ್ಲಗೆ ಕಾರು ಹತ್ತಿಸಿಕೊಂಡರೆ ಎಚ್ಚರವಾಗಿರಿ. ಒಳ್ಳೆಯವರಂತೆ ಮಾತುಗಳನ್ನಾಡಿ ಬಳಿಕ ಲಾಕ್ ಮಾಡಿ ನಿಮ್ಮ ಬಳಿ ಇರುವ ಹಣವನ್ನೆಲ್ಲ ದರೋಡೆ ಮಾಡ್ತಾರೆ. ಸದ್ಯ ಈಗ ಈ ಖದೀಮರನ್ನು ಕಾಮಾಕ್ಷಿಪಾಳ್ಯ ಪೊಲೀಸರು(Kamakshipalya Police) ಅರೆಸ್ಟ್ ಮಾಡಿದ್ದಾರೆ.

ಡ್ರಾಪ್ ಕೊಡುವ ನೆಪದಲ್ಲಿ ದರೋಡೆ

ರಾತ್ರಿ ವೇಳೆ ಒಂಟಿಯಾಗಿ ರಸ್ತೆಯಲ್ಲಿ ನಿಂತು ಡ್ರಾಪ್ ಕೇಳುವವರನ್ನೇ ಟಾರ್ಗೆಟ್​ ಮಾಡುವ ಈ ಖದೀಮರು ಮೊದಲು ಕಾರು ಹತ್ತಿಸಿಕೊಳ್ಳುತ್ತಾರೆ. ಬಳಿಕ ಚೆನ್ನಾಗಿ ಮಾತನಾಡುತ್ತ ನಂಬಿಕೆ ಗಳಿಸುತ್ತಾರೆ. ಸ್ವಲ್ಪ ದೂರ ಹೋಗ್ತಿದ್ದಾಗ್ಲೇ ಹಿಂದಿನ ಸೀಟ್ ನಿಂದ ಕತ್ತು ಲಾಕ್ ಮಾಡಿ, ಕುತ್ತಿಗೆಗೆ‌ ಚಾಕು ಇಡ್ತಾರೆ. ಮುಖ ಮೂತಿ ನೋಡದೇ ಹಲ್ಲೆ‌ ಮಾಡಿ‌ ರಾಬರಿ ಮಾಡ್ತಾರೆ. ಹಲ್ಲೆ ಮಾಡುವಾಗ ಜೋರಾಗಿ ಎಫ್ಎಂ ಆನ್ ಮಾಡಿ ಸಾಂಗ್ ಹಾಕ್ತಾರೆ. ಎಷ್ಟೇ ಕೂಗಾಡಿ ಕಿರುಚಾಡಿದ್ರು ನಿಮ್ಮ ಧ್ವನಿ ಹೊರಗಡೆ ಕೇಳಿಸಲ್ಲ. ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ ಮಾಡಿ ದರೋಡೆ ಮಾಡ್ತಾರೆ. ಸೇಫಾಗಿ ಮನೆ ಹೋಗಬೇಕು. ದೇವರಂತೆ ರಸ್ತೆಯಲ್ಲಿ ಡ್ರಾಪ್ ಕೊಡಲು ಯಾರೋ ಸಿಕ್ಕಿದ್ರು ಅಂದು ಕೊಂಡರೆ ಅದು ನಿಮ್ಮ ದೌರ್ಭಾಗ್ಯ.

ಇದನ್ನೂ ಓದಿ: ಮೈಸೂರಿನಲ್ಲಿ 10 ಪ್ರಕರಣಗಳಲ್ಲಿ ಬೇಕಾಗಿದ್ದಆರೋಪಿಗಳ ತಂಡದ ಇಬ್ಬರ ಬಂಧನ

ಸದ್ದಿಲ್ಲದೇ ಡ್ರಾಪ್ ಕೊಡೊ‌ ನೆಪದಲ್ಲಿ ದರೋಡೆ ಮಾಡ್ತಿದ್ದವರು ಅರೆಸ್ಟ್

ಇನ್ನು ಈ ರೀತಿ ಹಲ್ಲೆ ಮಾಡಿ ದರೋಡೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಂಜುಂಡ, ಗಿರೀಶ್ ಹಾಗೂ ನವೀನ್ ಬಂಧಿತ ಆರೋಪಿಗಳು. ಎಲ್ಲೋ ಬೋರ್ಡ್ ಕಾರ್ ಬಳಸಿಕೊಂಡು ಇತ್ತೀಚೆಗೆ ಮೂರು ದಿನಗಳಲ್ಲಿ ಮೂರು ಕೃತ್ಯ ಎಸಗಿದ್ದ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ. ಈ ಖದೀಮರು ಗೊರಗುಂಟೆಪಾಳ್ಯ ಸಿಗ್ನಲ್‌, ಸುಮ್ಮನಹಳ್ಳಿ ಮತ್ತು ಅನ್ನಪೂರ್ಣೇಶ್ವರಿ ನಗರದಲ್ಲಿ ಡ್ರಾಪ್ ಕೊಡೋದಾಗಿ ಕಾರ್ ಹತ್ತಿಸಿಕೊಂಡು ಬಳಿಕ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕಾರಿನಲ್ಲೇ ಲಾಕ್‌ ಮಾಡಿ ಪರ್ಸಿನಲ್ಲಿದ್ದ ಹಣ ಹಾಘೂ ಮೊಬೈಲ್ ಮೂಲಕ ತಮ್ಮ ಅಕೌಂಟ್​ಗೆ ವರ್ಗಾವಣೆ ಮಾಡಿಕೊಂಡಿದ್ದರು. ಜೇಬಿನಲ್ಲಿ ಇರುವ ಹಣ ಅಲ್ಲದೇ ಗೂಗಲ್ ಪೇ, ಫೋನ್ ಪೇ ಮೂಲಕವೂ ಹಣ ವರ್ಗಾವಣೆ ಮಾಡಿಕೊಂಡು ದರೋಡೆ ಮಾಡಿದ್ದರು. ಬಳಿಕ ಮೊಬೈಲ್​ಗಳನ್ನ ಕಸಿದುಕೊಂಡು ಎಸ್ಕೇಪ್ ಆಗಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಶೋಧ ನಡೆಸ್ತಿದ್ದ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಸದ್ಯ ಕೃತ್ಯಕ್ಕೆ ಬಳಿಸಿದ ‌ಕಾರು ಹಾಗೂ ಮೂವರು ಆರೋಪಿಗಳನ್ನ ಬಂಧಿಸಿ ಕಾಮಾಕ್ಷಿಪಾಳ್ಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಬಂಧಿತ ಆರೋಪಿಗಳ ಮೇಲೆ ಅನ್ನಪೂರ್ಣೇಶ್ವರಿ ನಗರ, ಕಾಮಾಕ್ಷಿಪಾಳ್ಯ, ಜ್ಞಾನಭಾರತಿ ನಗರ ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗಿತ್ತು. ಓರ್ವ ಆರೋಪಿ ಖಾಸಗಿ ಕಂಪನಿಯಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡ್ತಿದ್ದ. ಇನ್ನೊಬ್ಬ ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದ ಎಂಬ ಮಾಹಿತಿ ಸಿಕ್ಕಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ