AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Air Quality: ಇಂದು ಬೆಂಗಳೂರಿನಲ್ಲಿ ಶುದ್ಧ ವಾತಾವರಣ!

ಇಂದು ಕರ್ನಾಟಕದ ವಾಯು ಗುಣಮಟ್ಟದ ಇತ್ತೀಚಿನ ವರದಿ ಇಲ್ಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟ (AQI) ಹೇಗಿದೆ? ಆರೋಗ್ಯದ ಮೇಲೆ ಇದರ ಪರಿಣಾಮವೇನು ಮತ್ತು ಇಂದಿನ ವಾತಾವರಣದಲ್ಲಿ ನೀವು ಹೊರಗಡೆ ಓಡಾಡಬಹುದೇ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಮತ್ತು ತಜ್ಞರ ಸಲಹೆಗಳನ್ನು ಈ ಲೇಖನದಲ್ಲಿ ತಿಳಿಯಿರಿ. ಪ್ರಸ್ತುತ ರಾಜ್ಯದ ವಾತಾವರಣವು ಅತ್ಯಂತ ಶುದ್ಧವಾಗಿದ್ದು, ಆರೋಗ್ಯಕರವಾಗಿದೆ.

Bengaluru Air Quality: ಇಂದು ಬೆಂಗಳೂರಿನಲ್ಲಿ ಶುದ್ಧ ವಾತಾವರಣ!
ಇಂದು ಬೆಂಗಳೂರಿನಲ್ಲಿ ಶುದ್ಧ ವಾತಾವರಣ!
ಭಾವನಾ ಹೆಗಡೆ
|

Updated on: Aug 22, 2026 | 7:08 AM

Share

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಇಂದು ವಾಯು ಗುಣಮಟ್ಟ ಅತ್ಯುತ್ತಮ ಹಾಗೂ ತೃಪ್ತಿದಾಯಕವಾಗಿದೆ.
  • ಮೈಸೂರು ಮತ್ತು ಕರಾವಳಿ ಭಾಗದಲ್ಲಿ ಶುದ್ಧ ಗಾಳಿಯ ವಾತಾವರಣವಿದೆ.
  • ಹೊರಾಂಗಣ ಚಟುವಟಿಕೆಗಳಿಗೆ ಇಂದಿನ ವಾತಾವರಣವು ಸಂಪೂರ್ಣ ಸುರಕ್ಷಿತವಾಗಿದೆ.

ಬೆಂಗಳೂರು, ಆಗಸ್ಟ್ 22: ಇಂದು ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟ (AQI) ಅತ್ಯಂತ ಉತ್ತಮ ಹಾಗೂ ತೃಪ್ತಿದಾಯಕ ಹಂತದಲ್ಲಿದೆ. ಇತ್ತೀಚಿನ ಮಳೆ ಮತ್ತು ಉತ್ತಮ ಗಾಳಿಯ ಬೀಸುವಿಕೆಯಿಂದಾಗಿ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.

ಬೆಂಗಳೂರಿನ ಇಂದಿನ AQI ಸ್ಥಿತಿ

ಇಂದು ಬೆಂಗಳೂರಿನ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI)42 ರಿಂದ 49ರ ಆಸುಪಾಸಿನಲ್ಲಿದೆ. ವಾಯು ಮಾಲಿನ್ಯ ಸೂಚ್ಯಂಕದ ಪ್ರಕಾರ 0 ಯಿಂದ 50 ರವರೆಗಿನ ಅಂಕಗಳನ್ನು’ಉತ್ತಮ’ (Good) ಎಂದು ಪರಿಗಣಿಸಲಾಗುತ್ತದೆ. PM10 ಮತ್ತು PM2.5 ಸೂಕ್ಷ್ಮ ಕಣಗಳು ನಿಯಂತ್ರಣದಲ್ಲಿದ್ದು, ಸಾರ್ವಜನಿಕರ ಆರೋಗ್ಯಕ್ಕೆ ಯಾವುದೇ ರೀತಿಯ ಅಪಾಯವಿಲ್ಲ.

ಜಯನಗರ, ಮಲ್ಲೇಶ್ವರಂ ಮತ್ತು ಹೆಬ್ಬಾಳ ಪ್ರದೇಶಗಳಲ್ಲಿ ಗಾಳಿ ಅತ್ಯಂತ ಶುದ್ಧವಾಗಿದ್ದರೆ, ಸಿಲ್ಕ್ ಬೋರ್ಡ್ ಹಾಗೂ ವೈಟ್‌ಫೀಲ್ಡ್‌ನಂತಹ ಅತಿಯಾದ ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲಿ AQI 50 ರಿಂದ 65ರವರೆಗೆ ದಾಖಲಾಗಿದೆ.

ರಾಜ್ಯದ ಇತರೆ ಪ್ರಮುಖ ನಗರಗಳ ಪರಿಸ್ಥಿತಿ

ಬೆಂಗಳೂರು ಮಾತ್ರವಲ್ಲದೆ, ಕರ್ನಾಟಕದ ಇತರ ಪ್ರಮುಖ ನಗರಗಳಲ್ಲೂ ಇಂದಿನ ವಾಯು ಗುಣಮಟ್ಟ ಸಾರ್ವಜನಿಕರಿಗೆ ಅನುಕೂಲಕರವಾಗಿದೆ.

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ AQI ಸೂಚ್ಯಂಕ ಸುಮಾರು 35 – 40ರಷ್ಟಿದ್ದು, ರಾಜ್ಯದಲ್ಲೇ ಅತ್ಯಂತ ಶುದ್ಧ ಗಾಳಿ ಹೊಂದಿರುವ ನಗರಗಳಲ್ಲಿ ಒಂದಾಗಿದೆ. ಮಂಗಳೂರು ಹಾಗೂ ಕರಾವಳಿ ಭಾಗ: ಕರಾವಳಿ ತೀರದ ಗಾಳಿಯ ಪ್ರಭಾವದಿಂದಾಗಿ ಮಂಗಳೂರಿನಲ್ಲಿ AQI 38ರಷ್ಟಿದೆ. ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ: ಉತ್ತರ ಕರ್ನಾಟಕದ ಕೈಗಾರಿಕಾ ನಗರಗಳಲ್ಲಿ AQI 45 ರಿಂದ 58ರ ಆಸುಪಾಸಿನಲ್ಲಿದ್ದು, ಸಾಧರಣ ಮಟ್ಟದಲ್ಲಿದೆ.

ಇಂದಿನ ವಾತಾವರಣವು ವಾಕಿಂಗ್, ಜಾಗಿಂಗ್ ಹಾಗೂ ಹೊರಾಂಗಣ ಕ್ರೀಡೆಗಳಿಗೆ ಅತ್ಯಂತ ಸೂಕ್ತವಾಗಿದೆ. ವೃದ್ಧರು, ಮಕ್ಕಳು ಮತ್ತು ಉಸಿರಾಟದ ತೊಂದರೆ ಇರುವವರು ಕೂಡ ಇಂದಿನ ಶುದ್ಧ ವಾತಾವರಣದಲ್ಲಿ ಧೈರ್ಯವಾಗಿ ಹೊರಗೆ ಓಡಾಡಬಹುದು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us