AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Air Quality: ರಾಜ್ಯಾದ್ಯಂತ ಮುಂಗಾರು ಅಬ್ಬರ: ಕರಾವಳಿ, ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಭಾರಿ ಸುಧಾರಣೆ!

ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ತಗ್ಗಿದೆ. ಮೂಸೂರು, ಕೊಪ್ಪಳ ಸೇರಿದಂತೆ ಹಲವೆಡೆ ಗಾಳಿಯ ಗುಣಮಟ್ಟ ಸುಧಾರಿಸಿದೆ. ಗದಗ ಅತ್ಯಂತ ಶುದ್ಧ ಗಾಳಿಯನ್ನು ಹೊಂದಿದ್ದರೆ, ಧಾರವಾಡದಲ್ಲಿ ಕೊಂಚ ಕಳಪೆ ವಾತಾವರಣವಿದೆ. ಮಾಲಿನ್ಯದ ಪ್ರಮಾಣ ಗಣನೀಯವಾಗಿ ಕುಸಿದಿರುವುದರಿಂದ ಸಾರ್ವಜನಿಕರು ನಿರಾಳವಾಗಿದ್ದಾರೆ.

Bengaluru Air Quality: ರಾಜ್ಯಾದ್ಯಂತ ಮುಂಗಾರು ಅಬ್ಬರ: ಕರಾವಳಿ, ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಭಾರಿ ಸುಧಾರಣೆ!
ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಭಾರಿ ಸುಧಾರಣೆ! Image Credit source: Deccan herald
ಭಾವನಾ ಹೆಗಡೆ
|

Updated on: Jun 14, 2026 | 7:58 AM

Share

ಬೆಂಗಳೂರು, ಜೂನ್ 14: ರಾಜ್ಯದಲ್ಲಿ ಮುಂಗಾರು ಮಳೆ ಚುರುಕಾಗಿರುವುದರಿಂದ ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಕುಸಿದಿದ್ದು, ಬಹುತೇಕ ನಗರಗಳಲ್ಲಿ ಗಾಳಿಯ ಗುಣಮಟ್ಟ ಉತ್ತಮ ಸ್ಥಿತಿಯಲ್ಲಿದೆ. ಇಂದು ಕರ್ನಾಟಕದ ಪ್ರಮುಖ ನಗರಗಳು ಮತ್ತು ರಾಜಧಾನಿ ಬೆಂಗಳೂರಿನ ವಿವಿಧ ಪ್ರದೇಶಗಳ ವಾಯು ಗುಣಮಟ್ಟ ಸೂಚ್ಯಂಕ (AQI) ವಿವರ ಇಲ್ಲಿದೆ.

ಮುಖ್ಯಾಂಶಗಳು

  • ಮುಂಗಾರು ಮಳೆಯಿಂದಾಗಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಗಣನೀಯವಾಗಿ ಕುಸಿತ ಕಂಡಿದೆ.
  • ಗದಗ ನಗರದಲ್ಲಿ ಅತ್ಯಂತ ಸ್ವಚ್ಛ ಹಾಗೂ ಶುದ್ಧ ಗಾಳಿ ದಾಖಲಾಗಿದೆ.
  • ಧಾರವಾಡ ಮತ್ತು ಮಂಗಳೂರಿನಲ್ಲಿ ಮಾಲಿನ್ಯದ ಪ್ರಮಾಣ ಕೊಂಚ ಏರಿಕೆ ಕಂಡಿದೆ.

ಬೆಂಗಳೂರಿನಲ್ಲಿ ಇಂದಿನ ವಾಯು ಗುಣಮಟ್ಟ ಹೇಗಿದೆ?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ ಇಂದು 33 ರಿಂದ 56ರ ಆಸುಪಾಸಿನಲ್ಲಿ ದಾಖಲಾಗಿದ್ದು, ಉತ್ತಮ ಹಾಗೂ ಸಾಧಾರಣ ಶ್ರೇಣಿಯಲ್ಲಿದೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ವಾತಾವರಣದಲ್ಲಿನ ಧೂಳಿನ ಕಣಗಳು ಕಡಿಮೆಯಾಗಿವೆ.

  • ಹೆಬ್ಬಾಳ: 30 (ಉತ್ತಮ – ಅತ್ಯಂತ ಶುದ್ಧ ಗಾಳಿ)
  • ಸಿಲ್ಕ್ ಬೋರ್ಡ್: 54 (ಸಾಧಾರಣ)
  • ಹೊಂಬೇಗೌಡ ನಗರ: 51 (ಸಾಧಾರಣ)
  • ಬಿಟಿಎಂ ಲೇಔಟ್: 63 (ಸಾಧಾರಣ)
  • ಕಡಬೀಸನಹಳ್ಳಿ : 97 (ಅಪಾಯಕಾರಿ)

ಒಟ್ಟಾರೆಯಾಗಿ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದಾದ ಪೂರಕ ವಾತಾವರಣವಿದೆ. ರಾಜ್ಯದ ಇತರೆ ನಗರಗಳ ಇಂದಿನ ವಾಯು ಗುಣಮಟ್ಟದ ಶ್ರೇಯಾಂಕಗಳನ್ನು ಗಮನಿಸಿದರೆ, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಧೂಳಿನಿಂದಾಗಿ ಮಾಲಿನ್ಯ ಕೊಂಚ ಏರಿದ್ದರೆ, ಕರಾವಳಿ ಮತ್ತು ಮಲೆನಾಡು ಭಾಗಗಳು ಅತ್ಯಂತ ಶುದ್ಧ ಗಾಳಿಯನ್ನು ಹೊಂದಿವೆ.

ಹೆಚ್ಚು ಮಾಲಿನ್ಯವಿರುವ ನಗರಗಳು

  • ಧಾರವಾಡ: 153 (ಕಳಪೆ)
  • ಮಂಗಳೂರು: 108 (ಸಾಧಾರಣಕ್ಕಿಂತ ಕೊಂಚ ಹೆಚ್ಚು)
  • ಹುಬ್ಬಳ್ಳಿ: 86 (ಸಾಧಾರಣ)

ಅತ್ಯಂತ ಶುದ್ಧ ಗಾಳಿಯಿರುವ ನಗರಗಳು

  • ಗದಗ: 19 (ಅತ್ಯುತ್ತಮ ಹಾಗೂ ಅತ್ಯಂತ ಸ್ವಚ್ಛ ಗಾಳಿ)
  • ಕೊಪ್ಪಳ: 44 (ಉತ್ತಮ)
  • ಮೈಸೂರು: 56 (ಸಾಧಾರಣ)
  • ಶಿವಮೊಗ್ಗ: 77 (ಸಾಧಾರಣ)

ಮಳೆಯ ಮುನ್ಸೂಚನೆ ಇರುವುದರಿಂದ ಮುಂಬರುವ ದಿನಗಳಲ್ಲಿ ವಾಯು ಗುಣಮಟ್ಟ ಇನ್ನಷ್ಟು ಸುಧಾರಿಸುವ ನಿರೀಕ್ಷೆಯಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹಳೇ ವಾಹನಗಳ ಬಳಕೆ ಕಡಿಮೆ ಮಾಡುವುದು ಮತ್ತು ಹಸಿರು ವಲಯವನ್ನು ಹೆಚ್ಚಿಸುವುದು ಇಂದಿನ ಅಗತ್ಯವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
ಮನೆಗೆ ಹಾವು ಬಂದ್ರೆ ಕೊಲ್ಲಬಾರದು ಯಾಕೆ?
ಮನೆಗೆ ಹಾವು ಬಂದ್ರೆ ಕೊಲ್ಲಬಾರದು ಯಾಕೆ?
ಇಂದು ಈ ರಾಶಿಯವರು ಕೆಲಸಗಳಲ್ಲಿ ಅವಸರ ಮಾಡಬೇಡಿ
ಇಂದು ಈ ರಾಶಿಯವರು ಕೆಲಸಗಳಲ್ಲಿ ಅವಸರ ಮಾಡಬೇಡಿ
ಫುಟ್​​ಬಾಲ್ ವಿಶ್ವಕಪ್ ಉದ್ಘಾಟನೆಯಲ್ಲಿ ಹೀಗಿತ್ತು ನೋರಾ ಫತೇಹಿ ಪ್ರದರ್ಶನ
ಫುಟ್​​ಬಾಲ್ ವಿಶ್ವಕಪ್ ಉದ್ಘಾಟನೆಯಲ್ಲಿ ಹೀಗಿತ್ತು ನೋರಾ ಫತೇಹಿ ಪ್ರದರ್ಶನ
ಸಾವಿನ ಬಗ್ಗೆ ಪದೇ ಪದೇ ಸುಳ್ಳು ಸುದ್ದಿ: ನಟ ದೊಡ್ಡಣ್ಣ ಹೇಳಿದ್ದೇನು?
ಸಾವಿನ ಬಗ್ಗೆ ಪದೇ ಪದೇ ಸುಳ್ಳು ಸುದ್ದಿ: ನಟ ದೊಡ್ಡಣ್ಣ ಹೇಳಿದ್ದೇನು?
ವೆನೆಜುವೆಲಾ ದರೋಡೆಕೋರನ ಮೇಲಿನ ವೈಮಾನಿಕ ದಾಳಿಯ ವಿಡಿಯೋ ಹಂಚಿಕೊಂಡ ಟ್ರಂಪ್
ವೆನೆಜುವೆಲಾ ದರೋಡೆಕೋರನ ಮೇಲಿನ ವೈಮಾನಿಕ ದಾಳಿಯ ವಿಡಿಯೋ ಹಂಚಿಕೊಂಡ ಟ್ರಂಪ್
ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಸಿಎಂ ಸೂಚನೆ
ಬೆಳಗ್ಗೆ 10 ಗಂಟೆಗೆ ಕಚೇರಿಯಲ್ಲಿ ಹಾಜರಿರಬೇಕು: ಅಧಿಕಾರಿಗಳಿಗೆ ಸಿಎಂ ಸೂಚನೆ
ಮತ್ತೆ ವಿದೇಶಕ್ಕೆ ತೆರಳಿದ ಪ್ರಧಾನಿ ಮೋದಿ; ಫ್ರಾನ್ಸ್​, ಸ್ಲೋವಾಕಿಯಾಗೆ ಭೇಟಿ
ಮತ್ತೆ ವಿದೇಶಕ್ಕೆ ತೆರಳಿದ ಪ್ರಧಾನಿ ಮೋದಿ; ಫ್ರಾನ್ಸ್​, ಸ್ಲೋವಾಕಿಯಾಗೆ ಭೇಟಿ
ಮನಾಲಿಗೆ ಹೊರಟ ಪ್ರವಾಸಿಗರಿಂದ ಕುಲು-ಮಂಡಿ ಮಾರ್ಗದಲ್ಲಿ ಟ್ರಾಫಿಕ್ ಜಾಮ್
ಮನಾಲಿಗೆ ಹೊರಟ ಪ್ರವಾಸಿಗರಿಂದ ಕುಲು-ಮಂಡಿ ಮಾರ್ಗದಲ್ಲಿ ಟ್ರಾಫಿಕ್ ಜಾಮ್
ಪ್ರಥಮ ದರ್ಜೆ ನೌಕರನಿಗೆ ಚಪ್ಪಲಿ ಏಟು ಕೊಟ್ಟ ರೈತ! ಯಾಕೆ ಗೊತ್ತಾ?
ಪ್ರಥಮ ದರ್ಜೆ ನೌಕರನಿಗೆ ಚಪ್ಪಲಿ ಏಟು ಕೊಟ್ಟ ರೈತ! ಯಾಕೆ ಗೊತ್ತಾ?
ಬಿಡದಿ ಟೌನ್​ಶಿಪ್​ ಯೋಜನೆ ವಿರೋಧಿಸಿ ಜೂನ್ 22ರಂದು ಬೃಹತ್ ಪ್ರತಿಭಟನೆ!
ಬಿಡದಿ ಟೌನ್​ಶಿಪ್​ ಯೋಜನೆ ವಿರೋಧಿಸಿ ಜೂನ್ 22ರಂದು ಬೃಹತ್ ಪ್ರತಿಭಟನೆ!