ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಿರುದ್ಧ ರಾಜ್ಯ ಬಿಜೆಪಿ (BJP) ಘಟಕ ಟ್ವೀಟ್ ಮಡಿದ್ದು, “ಭ್ರಷ್ಟರಾಮಯ್ಯರೇ ಕೆರೆಗಳ ಡಿನೋಟಿಫೈಗಿದ್ದ ತಡೆ ಕಾಯ್ದೆಯನ್ನೇ ಬದಲಾವಣೆ ಮಾಡಿ ಅನುಮೋದನೆ ನೀಡಿದ್ದು ಏಕೆ?”, ಎಂದು ಪ್ರಶ್ನೆ ಮಾಡಿದೆ. ಅಕ್ರಮ ಒತ್ತುವರಿಗೆ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ. ಸಮಸ್ಯೆ ಸೃಷ್ಟಿಸಿ ಇಂದು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದವಲ್ಲವೇ? ಎಂದು ಹೇಳಿದೆ.
ಕೆರೆಗಳನ್ನು ಡಿ-ನೋಟಿಫಿಕೇಶನ್ ಮಾಡಲು ಅವಕಾಶ ಇಲ್ಲವೆಂದು, ಅಧಿಕಾರಿಗಳು ತಿಳಿಸಿದರೂ ಕಾಯ್ದೆಯನ್ನೇ ತಿದ್ದುಪಡಿ ಮಾಡಿತು. ಭ್ರಷ್ಟರಾಮಯ್ಯ ಸರ್ಕಾರ ಕಾಯ್ದೆ ತಿದ್ದುಪಡಿ ಮಾಡಿತು. ಈ ಜನವಿರೋಧಿ ನಿರ್ಧಾರದ ಮೂಲಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರ ಪಡೆದ ಕಪ್ಪ ಕಾಣಿಕೆ ಎಷ್ಟು? ಎಂದು ಟ್ವೀಟ್ ಮಾಡಿದೆ.
ಮಾನ್ಯ #ಭ್ರಷ್ಟರಾಮಯ್ಯ ಅವರೇ,
ಕೆರೆಗಳನ್ನು ಡಿನೋಟಿಫೈ ಮಾಡಲು ತಡೆಯಿದ್ದ ಕಾಯ್ದೆಯನ್ನೇ ಅಂದು ಬದಲಾವಣೆ ಮಾಡಿ ಅನುಮೋದನೆ ನೀಡಿದ್ದು ಏಕೆ?
ಅಕ್ರಮ ಒತ್ತುವರಿಗೆ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ. ಅಂದು ಸಮಸ್ಯೆ ಸೃಷ್ಟಿಸಿ ಇಂದು ಪ್ರಶ್ನಿಸುತ್ತಿರುವುದು ಹಾಸ್ಯಾಸ್ಪದವಲ್ಲವೇ?
— BJP Karnataka (@BJP4Karnataka) September 12, 2022
ಈ ಜನವಿರೋಧಿ ನಿರ್ಧಾರದ ಮೂಲಕ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರ ಪಡೆದ ಕಪ್ಪ ಕಾಣಿಕೆ ಎಷ್ಟು? ಎಂದು ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಡಾ.ಇ.ವಿ. ರಮಣರೆಡ್ಡಿ ಟಿಪ್ಪಣಿಯನ್ನು ಉಲ್ಲೇಖಿಸಿ ಬಿಜೆಪಿ ಕಿಡಿಕಾರಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ