ಬೆಂಗಳೂರು: ಹಿಂದಿ ಭಾಷೆ (Hindi) ಹೇರಿಕೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರಕ್ಕೆ ಪ್ರತಿಯಾಗಿ ಕಾಂಗ್ರೆಸ್ ವಿರುದ್ಧ ರಾಜ್ಯ ಬಿಜೆಪಿ ಘಟಕ (Karnataka BJP) ಟ್ವೀಟ್ ಮಾಡಿ, ವಾಸ್ತವಾಂಶ ತೆರೆದಿಟ್ಟಿದೆ. ಈ ಹಿಂದಿನಿಂದಲೂ, ಮಾತೃಭಾಷೆಯಲ್ಲೇ (Mother Tongue) ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ಪ್ರಧಾನಿ ಮೋದಿ ಸರ್ಕಾರ ಎನ್‌ಇಪಿ (National Education Policy -NEP) ಮೂಲಕ ಈ ಅವಕಾಶ ಕಲ್ಪಿಸಿದೆ ಎಂದು ಸ್ಪಷ್ಟನೆ ನೀಡಿದೆ.
ಆದರೆ ದೇಶದಲ್ಲಿ ಹಿಂದಿ ದಿವಸ್, ತ್ರಿಭಾಷಾ ಸೂತ್ರ ಹೇರಿದ್ದು ಕಾಂಗ್ರೆಸ್. ನಿಮ್ಮ ಅಧಿಕಾರದ ಕನಸಿನಲ್ಲಾದರೂ ಹಿಂದಿ ದಿವಸ್ ರದ್ದು ಮಾಡ್ತೀವಿ ಎಂದು ಸೋನಿಯಾ ಗಾಂಧಿ ಮತ್ತು ರಾಹುಲ್ರಿಂದ ಹೇಳಿಕೆ ಕೊಡಿಸುವ ಧಮ್ ಇದೆಯಾ? ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಅನ್ನು ಬಿಜೆಪಿ ಛೇಡಿಸಿದೆ.
ಬಿಜೆಪಿ ಟ್ವೀಟ್ ಸಾರಾಂಶ ಹೀಗಿದೆ:
ಸಿದ್ದರಾಮಯ್ಯನವರೇ, ಮೋದಿ ಸರ್ಕಾರ ಎನ್‌ಇಪಿ ಮೂಲಕ ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯುವ ಅವಕಾಶ ಕಲ್ಪಿಸಿದೆ.
ಆದರೆ @INCIndia ರಾಷ್ಟ್ರವ್ಯಾಪಿ #HindiDiwas, ತ್ರಿಭಾಷಾ ಸೂತ್ರ ಹೇರಿತು.
ನಿಮ್ಮ ಅಧಿಕಾರದ ಕನಸಿನಲ್ಲಾದರೂ ಹಿಂದಿ ದಿವಸ್ ರದ್ದು ಮಾಡುತ್ತೇವೆ ಎಂದು ಸೋನಿಯಾ,
ರಾಹುಲ್ ಗಾಂಧಿ ಅವರಿಂದ ಹೇಳಿಕೆ ಕೊಡಿಸುವ ಧಮ್ ಇದೆಯೇ?
ಕಾಂಗ್ರೆಸ್ ಸರ್ಕಾರ ಹಿಂದಿ ದಿವಸ್ ಆಚರಣೆ ಜಾರಿಗೆ ತಂದರೆ, ಮೋದಿ ಸರ್ಕಾರ ಮಾತೃಭಾಷೆಗೂ ಆದ್ಯತೆ ನೀಡಿದೆ.#ಕನ್ನಡ pic.twitter.com/hSdnQ12i37
— BJP Karnataka (@BJP4Karnataka) September 14, 2022
ನೆಹರೂ ಸರ್ಕಾರ ರಾಷ್ಟ್ರೀಯ ಹಿಂದಿ ದಿನಾಚರಣೆ ಜಾರಿಗೊಳಿಸಿದರೆ, ಮನಮೋಹನ್ ಸಿಂಗ್ ಸರ್ಕಾರ ವಿಶ್ವ ಹಿಂದಿ ದಿನಾಚರಣೆ ಜಾರಿಗೆ ತಂದಿತು.
ಆದರೂ @siddaramaiah ಅವರ ಅಸಹನೆ ಬಿಜೆಪಿ ವಿರುದ್ಧ ಮಾತ್ರವೇಕೆ?#ಕನ್ನಡ pic.twitter.com/R33sGQN7gg
— BJP Karnataka (@BJP4Karnataka) September 14, 2022
ಕನ್ನಡದಲ್ಲೇ ಇಂಜಿನಿಯರಿಂಗ್ ಪರೀಕ್ಷೆ ಬರೆಯಲು ಈಗಾಗಲೇ ಅವಕಾಶ ಕಲ್ಪಿಸಲಾಗಿದೆ:
ಇದಕ್ಕೂ ಮುನ್ನ ವಿಧಾನಸಭೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಿಂದಿ ಗೊಂದಲದ ಬಗ್ಗೆ ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕನ್ನಡ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ, ಯಾವುದೇ ಅತಂಕಬೇಡ. ನೆಲ, ಜಲ, ಭಾಷೆ ವಿಚಾರದಲ್ಲಿ ರಾಜಕೀಯ ಮೀರಿ ನಡೆದುಕೊಂಡಿದ್ದೇವೆ. ಕನ್ನಡ ಕಡ್ಡಾಯಗೊಳಿಸಲು ಹೊಸ ಕಾನೂನು ತರುತ್ತೇವೆ. ಇದೇ ಅಧಿವೇಶನದಲ್ಲಿ ಹೊಸ ಕಾನೂನು ಜಾರಿ ಮಾಡ್ತೇವೆ. ಕನ್ನಡದಲ್ಲೇ ಇಂಜಿನಿಯರಿಂಗ್ ಪರೀಕ್ಷೆ ಬರೆಯಲು ಸಹ ಈಗಾಗಲೇ ಅವಕಾಶ ಕಲ್ಪಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು.