AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು 24 ಸಚಿವರ ಪ್ರಮಾಣವಚನ: ರಾಜಭವನದ ಸುತ್ತಮುತ್ತ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾರ್ಗ ಬದಲಾವಣೆ ಹೀಗಿದೆ

ಇಂದು(ಮೇ.27) ರಾಜಭವನದಲ್ಲಿ 24 ಸಚಿವರ ಪ್ರಮಾಣವಚನ ಸ್ವೀಕಾರ ನಡೆಯಲಿದೆ. ಅದರಂತೆ ರಾಜಭವನದ ಸುತ್ತಮುತ್ತ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮಾರ್ಗ ಬದಲಾವಣೆಯಾಗಲಿದ್ದು, ಈ ಕೆಳಗಿನಂತಿದೆ.

ಇಂದು 24 ಸಚಿವರ ಪ್ರಮಾಣವಚನ: ರಾಜಭವನದ ಸುತ್ತಮುತ್ತ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾರ್ಗ ಬದಲಾವಣೆ ಹೀಗಿದೆ
ಪ್ರಮಾನ ವಚನ ಸ್ವೀಕಾರ, ಮಾರ್ಗ ಬದಲಾವಣೆ
ಕಿರಣ್ ಹನುಮಂತ್​ ಮಾದಾರ್
|

Updated on:May 27, 2023 | 6:54 AM

Share

ಬೆಂಗಳೂರು: ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಪಕ್ಷ​ ಬಹುಮತದಿಂದ ಆಡಳಿತ ಚುಕ್ಕಾಣಿ ಹಿಡಿದಿದೆ. ಅದರಂತೆ ಡಿಕೆ ಶಿವಕುಮಾರ್ (DK Shivakumar) ​ ಹಾಗೂ ಸಿದ್ದರಾಮಯ್ಯ(Siddaramaiah)ನವರ ಬಾರಿ ಜಿದ್ದಾಜಿದ್ದಿನ ನಂತರ ಸಿದ್ದರಾಮಯ್ಯ ಮುಖ್ಯಮಂತ್ರಿ ಗದ್ದುಗೆಗೆ ಏರಿದ್ದಾರೆ. ಇದಾದ ಮೇಲೆ ಸಚಿವ ಸ್ಥಾನ ನೀಡುವುದು ಹೈಕಮಾಂಡ್​ಗೆ ತಲೆನೋವಾಗಿ ಪರಿಣಮಿಸಿದ್ದು, ಇದೀಗ ತುಂಬಾ ದಿನಗಳ ಜಿದ್ದಾಜಿದ್ದಿನ ನಂತರ ಕಾಂಗ್ರೆಸ್​ ನೂತನ 24 ಸಚಿವರ ಪಟ್ಟಿ ಬಿಡುಗಡೆ ಮಾಡಿದ್ದು, ಇಂದು(ಮೇ.27) ರಾಜಭವನದಲ್ಲಿ 24 ಸಚಿವರ ಪ್ರಮಾಣವಚನ ಸ್ವೀಕಾರ ನಡೆಯಲಿದೆ. ಅದರಂತೆ ರಾಜಭವನದ ಸುತ್ತಮುತ್ತ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮಾರ್ಗ ಬದಲಾವಣೆಯಾಗಲಿದ್ದು, ಈ ಕೆಳಗಿನಂತಿದೆ.

ರಾಜಭವನದ ಸುತ್ತಮುತ್ತ ಇಂದು ಮಾರ್ಗ ಬದಲಾವಣೆ

ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮಾರ್ಗ ಬದಲಾವಣೆಯಾಗಲಿದ್ದು, ಕೆ.ಆರ್.ವೃತ್ತದಿಂದ ಗೋಪಾಲಗೌಡ ವೃತ್ತದವರೆಗೆ ಸಂಚಾರ ಬಂದ್​ ಆಗಲಿದೆ. ನೃಪತುಂಗ ರಸ್ತೆ ಅಥವಾ ಕಬ್ಬನ್​ಪಾರ್ಕ್​ ಒಳಭಾಗದ ರಸ್ತೆಯಲ್ಲಿ ಸಂಚಾರಕ್ಕೆ ಅನುಮತಿಸಲಾಗಿದೆ. ಇನ್ನು ಬಾಳೇಕುಂದ್ರಿ ವೃತ್ತದಿಂದ ಬರುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಕಾಫಿ ಬೋರ್ಡ್ ಅಥವಾ ತಿಮ್ಮಯ್ಯ ವೃತ್ತದ ಕಡೆ ಸಂಚಾರ ನಿರ್ಬಂಧ ಹೇರಲಾಗಿದೆ. ಜೊತೆಗೆ ಪೊಲೀಸ್ ತಿಮ್ಮಯ್ಯ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಸಂಚಾರ ಸಂಪೂರ್ಣ ಬಂದ್ ಆಗಲಿದೆ. ಶಿವಾಜಿನಗರ ಬಸ್ ನಿಲ್ದಾಣದಿಂದ ಬರುವ ವಾಹನಗಳ ಹಾಗೂ ಕ್ವೀನ್ಸ್ ಸರ್ಕಲ್, ಸಿದ್ದಲಿಂಗಯ್ಯ ವೃತ್ತದ ಕಡೆಗೆ ಬರುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಇದನ್ನೂ ಓದಿ:ಸಿದ್ದರಾಮಯ್ಯ ಸರ್ಕಾರ 2.O: ಮೇ. 27 ರಂದು ರಾಜಭವನದಲ್ಲಿ ನೂತನ ಸಚಿವರ ಪ್ರಮಾಣವಚನ

ರಾಜಭವನ, ಕಾಫಿಬೋರ್ಡ್​ ಕಡೆಗೆ ಗೂಡ್ಸ್​ ವಾಹನ ಸಂಚಾರಕ್ಕೆ ಬ್ರೇಕ್​

ಇನ್ನು ಎಲ್ಲಾ ಮಾದರಿ ಬಸ್​ಗಳು, ಸರಕು ಸಾಗಣೆ ವಾಹನಗಳ ಸಂಚಾರವನ್ನ ಸಂಪೂರ್ಣ ಬಂದ್​ ಮಾಡಲಾಗಿದೆ. ​ ರಾಜಭವನ, ಕಾಫಿಬೋರ್ಡ್​ ಕಡೆಗೆ ಗೂಡ್ಸ್​ ವಾಹನ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಜೊತೆಗೆ ರಾಜಭವನದ ಸುತ್ತಮುತ್ತ ವಾಹನಗಳ ನಿಲುಗಡೆಗೆ ಸಂಪೂರ್ಣ ನಿಷೇಧಿಸಲಾಗಿದೆ. ರಾಜಭವನ ರಸ್ತೆ, ಅಂಬೇಡ್ಕರ್ ರಸ್ತೆ, ಕ್ವೀನ್ಸ್ ರಸ್ತೆ, ಇನ್​ಫೆಂಟ್ರಿ ರಸ್ತೆ, ಸ್ಯಾಂಕಿ ರಸ್ತೆ, ಪ್ಯಾಲೇಸ್​ ರಸ್ತೆ, ಕಬ್ಬನ್​ ರಸ್ತೆಯಲ್ಲಿ ನಿಲುಗಡೆ ನಿಷೇಧ ಮಾಡಲಾಗಿದೆ.

ಪಾಸ್​ ಇರುವ ವಾಹನಗಳಿಗೆ ಅವಕಾಶ

ಇನ್ನು ಪಾಸ್ ಇರುವ ವಾಹನಗಳು ರಾಜಭವನದ ಗೇಟ್​ ಬಳಿಗೆ ಬರಬಹುದು, ರಾಜಭವನದ ಗೇಟ್​ ಬಳಿ ಗಣ್ಯರನ್ನು ಇಳಿಸಿ ಮುಂದೆ ಸಾಗಬೇಕು. ಎಲ್​ಹೆಚ್​ ಗೇಟ್​ ಮೂಲಕ ತೆರಳಿ ಪಾರ್ಕಿಂಗ್​ ಲಾಟ್​ನಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ:CM in Delhi: ಯಾರೆಲ್ಲ ಸಚಿವರು ಸಾರ್ ಅಂತ ಪತ್ರಕರ್ತರು ಕೇಳಿದರೆ ಶಿಳ್ಳೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉತ್ತರ!

ವಿಶೇಷ ಆಹ್ವಾನಿತರಿಗೆ ಪಾರ್ಕಿಂಗ್​ ವ್ಯವಸ್ಥೆ

ಕಾರ್ಯಕ್ರಮಕ್ಕೆ ಬರುವ ವಿಶೇಷ ಆಹ್ವಾನಿತರಿಗೆ ವಿಧಾನಸೌಧದಲ್ಲಿ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಲಾಗಿದೆ. ‘ನೆಹರು ತಾರಾಲಯ, ಎಂ.ಎಸ್.ಬಿಲ್ಡಿಂಗ್ ಒಳಭಾಗದಲ್ಲಿ ಪಾರ್ಕಿಂಗ್​, ವಿಧಾನಸೌಧದ ಪಶ್ಚಿಮ ದ್ವಾರ & ಉತ್ತರ ದ್ವಾರದ ಮುಂದಿನ ರಸ್ತೆ ವಿಕಾಸಸೌಧದ ಸೆಲ್ಲಾರ್​ನಲ್ಲಿ ಗಣ್ಯರ ವಾಹನಗಳ ಪಾರ್ಕಿಂಗ್​ಗೆ ವ್ಯವಸ್ಥೆ ಮಾಡಲಾಗಿದೆ.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:53 am, Sat, 27 May 23