Congress Five Guarantees: ಕಾಂಗ್ರೆಸ್ ಗ್ಯಾರಂಟಿ ಹೊರೆ, ಬೆಂಗಳೂರಿಗರಿಗೆ ಬೀಳುತ್ತಾ ಬರೆ?

|

Updated on: May 31, 2023 | 7:08 AM

ಗ್ಯಾರಂಟಿ ಯೋಜನೆಗಳ ಜಾರಿಗೆ ಸಿದ್ದತೆ ನಡೆಸಿರುವ ಸರ್ಕಾರ ಇನ್ನೊಂದೆಡೆ ಹಣ ಕ್ರೂಢೀಕರಣದ ಕಡೆಯೂ ಗಮನ ಹರಿಸಿದೆ. ಅದರಲ್ಲೂ ಗ್ಯಾರಂಟಿ ಹೊರೆಯಿಂದ ಬೆಂಗಳೂರಿಗರಿಗೆ ಬರೆ ಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.

Congress Five Guarantees: ಕಾಂಗ್ರೆಸ್ ಗ್ಯಾರಂಟಿ ಹೊರೆ, ಬೆಂಗಳೂರಿಗರಿಗೆ ಬೀಳುತ್ತಾ ಬರೆ?
Follow us on

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ನಾಯಕರಿಂದ ಹಿಡಿದು, ರಾಷ್ಟ್ರೀಯ ನಾಯಕರೆಲ್ಲಾ ಒಂದರ ಬಳಿಕ ಒಂದರಂತೆ ಗ್ಯಾರಂಟಿ ಘೋಷಣೆ(congress guarantee) ಮಾಡಿದ್ರು. ಇದೇ ಭರವಸೆಗಳು ಕಾಂಗ್ರೆಸ್‌ನ ಕೈಹಿಡಿದಿದ್ದು, ಅಧಿಕಾರಕ್ಕೇ ಏರಿರುವ ಕಾಂಗ್ರೆಸ್ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಸರ್ಕಸ್‌ ಮಾಡುತ್ತಿದೆ. ಹಣ ಹೊಂದಿಸಲು ತೆರಿಗೆ(Tax) ಹೆಚ್ಚಳದ ಪ್ಲ್ಯಾನ್‌ ಮಾಡಿದ್ದು ಬಿಬಿಎಂಪಿ(BBMP) ಮೇಲೂ ಕಣ್ಣು ಹಾಕಿದೆ. ಸರ್ಕಾರ ಘೋಷಿಸಿರುವ ಐದು ಗ್ಯಾರಂಟಿಗಳ ಜಾರಿಗೆ ಅಂದಾಜು 50 ಸಾವಿರ ಕೋಟಿ ರೂ.ಗೂ ಹೆಚ್ಚು ಹಣ ಬೇಕಾಗಿದ್ದು, ಈ ಹಣ ಹೊಂದಿಸಲು ಬಿಬಿಎಂಪಿ ಮೇಲೆ ಕಣ್ಣು ಹಾಕಿದೆ.  ಹೌದು,,ಭರವಸೆಗಳನ್ನು ಈಡೇರಿಸಬೇಕು ಅಂದ್ರೆ ಆರ್ಥಿಕ ಹೊರೆಯಾಗಲಿದೆ. ಅದಕ್ಕೆ ಬೇಕಿರುವ ಹೆಚ್ಚುವರಿ ಹಣವನ್ನು ಬಿಬಿಎಂಪಿಯಿಂದ ರೀರೂಟ್ ಮಾಡಿಕೊಳ್ಳುವುದಕ್ಕೆ ಸರ್ಕಾರ ಚಿಂತನೆ ನಡೆಸಿದೆ. ನಗರದಲ್ಲಿ ಆದಾಯ ಹುಟ್ಟಿಸುವಂತ ಅನೇಕ ಇಲಾಖೆಗಳ ಪೈಕಿ ಬಿಬಿಎಂಪಿಯೇ ಮೊದಲನೇ ಸ್ಥಾನದಲ್ಲಿದ್ದು, ಇಲ್ಲಿಂದಲೇ ಹಣ ಕ್ರೂಢೀಕರಣಕ್ಕೆ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: ಸರ್ಕಾರಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: ರಾಮಲಿಂಗಾರೆಡ್ಡಿ ಘೋಷಣೆ

ಆಸ್ತಿ ತೆರಿಗೆ ಹೆಚ್ಚಳಕ್ಕೆ ಮುಂದಾದ ಪಾಲಿಕೆ

ಫ್ರೀ ಸ್ಕೀಂಗಳಿಗೆ ಎಲ್ಲಾ ಕಡೆಯಿಂದಲೂ ಆದಾಯ ಹೆಚ್ಚಿಸಿಕೊಳ್ಳಲು ಪ್ಲ್ಯಾನ್‌ ಮಾಡಿರುವ ಸರ್ಕಾರ, ಪಾಲಿಕೆಯಿಂದ ಒಂದು ಸಾವಿರ ಕೋಟಿ ರೂ. ಆದಾಯದ ನಿರೀಕ್ಷೆಯಲ್ಲಿದೆ. ಅದರಂತೆ ವಸತಿ ಕಟ್ಟಡಗಳಿಗೆ ಶೇಕಡಾ 10 ರಿಂದ 15, ವಾಣಿಜ್ಯ ಕಟ್ಟಡಗಳಿಗೆ 15 ರಿಂದ 20 ರಷ್ಟು ತೆರಿಗೆ ಹೆಚ್ಚಳಕ್ಕೆ ಬಿಬಿಎಂಪಿ ಪ್ರಸ್ತಾವನೆ ನೀಡಲು ಮುಂದಾಗಿದೆ. ನಿನ್ನೆ(ಮೆ 29) ಪಾಲಿಕೆ ಅಧಿಕಾರಿಗಳ ಜತೆ ಸಭೆ ನಡೆಸಿದ್ದ ಬೆಂಗಳೂರು ಅಭಿವೃದ್ಧಿ ಸಚಿವರು ಕೂಡಾ ಪ್ರಸ್ತಾವನೆ ಇದ್ದು, ಪರಿಶೀಲಿಸಿ ನಿರ್ಧಾರಿಸುವುದಾಗಿ ಹೇಳಿದ್ದಾರೆ.

ಪಾಲಿಕೆಯ ಕಾನೂನು ಹಾಗು ನಿಯಮಗಳ ಪ್ರಕಾರ, ಪ್ರತಿ 3 ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಹೆಚ್ಚಳಕ್ಕೆ ಅವಕಾಶ ಇದೆ. ಶೇ. 20 ರಿಂದ 25 ರಷ್ಟು ಹೆಚ್ಚಿಸಲು ಅವಕಾಶವಿದೆ. ಆದ್ರೆ ಕಳೆದ 12 ವರ್ಷಗಳಿಂದ ಅಸ್ತಿ ತೆರಿಗೆ ಮೊತ್ತ ಹೆಚ್ಚಳವಾಗಿಲ್ಲ. ಇದರಿಂದಾಗಿಯೇ ಬಿಬಿಎಂಪಿಯ ಆಸ್ತಿ ತೆರಿಗೆ ಗುರಿ 3500 ರಿಂದ 4000 ಕೋಟಿ ರೂ.ಗೆ ಮಾತ್ರ ಸೀಮಿತವಾಗಿದೆ. ಪ್ರಸಕ್ತ ಸಾಲಿನಲ್ಲಿ 4100 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದ್ದು, ಗುರಿ ತಲುಪಲು ತೆರಿಗೆ ಹೆಚ್ಚಳ ಅನಿವಾರ್ಯ ಆಗಿದೆ.

ಒಟ್ಟಿನಲ್ಲಿ ಫ್ರೀ ಘೋಷಣೆಗಳಿಂದ ಒಂದೆಡೆ ಜನ ಖುಷಿಯಾಗಿರುವಾಗ್ಲೇ, ತೆರಿಗೆ ಹೆಚ್ಚಳದ ಮೂಲಕ ಬೆಂಗಳೂರು ನಗರದ ಜನತೆಗೆ ಶಾಕ್‌ ಕೊಡಲು ಪಾಲಿಕೆ ಮುಂದಾಗಿದೆ.