ಕೊರೊನಾ ಹರಡಿದ್ದು -ಟ್ರಾಫಿಕ್ ಜಾಮ್ ಮಾಡಿದ್ದು ಇಷ್ಟೇ ಕಾಂಗ್ರೆಸ್​ ಪಾದಯಾತ್ರೆಯ ಸಾಧನೆ: ಸಚಿವ ಕಾರಜೋಳ ವ್ಯಂಗ್ಯ

| Updated By: ಸಾಧು ಶ್ರೀನಾಥ್​

Updated on: Mar 03, 2022 | 7:33 PM

Govind Karjol: ಅಧಿಕಾರದಲ್ಲಿದ್ದಾಗ ಯಾವುದೇ ಪರಿಣಾಮಕಾರಿ ಕ್ರಮಕ್ಕೆ ಮುಂದಾಗದೇ, ಕಾಲಹರಣ ಮಾಡಿದ ಕಾಂಗ್ರೆಸ್ ಪಕ್ಷ ಇದೀಗ ಮತ್ತೆ ಮತ್ತೆ ಪಾದಯಾತ್ರೆ ಮಾಡುವ ಮೂಲಕ ಜನದ್ರೋಹ ಎಸಗುತ್ತಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ

ಕೊರೊನಾ ಹರಡಿದ್ದು -ಟ್ರಾಫಿಕ್ ಜಾಮ್ ಮಾಡಿದ್ದು ಇಷ್ಟೇ ಕಾಂಗ್ರೆಸ್​ ಪಾದಯಾತ್ರೆಯ ಸಾಧನೆ: ಸಚಿವ ಕಾರಜೋಳ ವ್ಯಂಗ್ಯ
Follow us on

ಬೆಂಗಳೂರು: ಕಾಂಗ್ರೆಸ್ ಪಕ್ಷದವರು ಮೇಕೆದಾಟು ಯೋಜನೆಯ ಹೆಸರಿನಲ್ಲಿ ನಡೆಸಿದ ಪಾದಯಾತ್ರೆ (Mekedatu Padayatre) ಕೇವಲ ಪ್ರಚಾರ ಯಾತ್ರೆ. ಅದೊಂದು ಜನರನ್ನು ಮೋಸಗೊಳಿಸುವ ವಿಫಲ ತಂತ್ರ. ಕಾಂಗ್ರೆಸ್ನವರ ಮೊದಲ ಹಂತದ ಪಾದಯಾತ್ರೆ ಕೇವಲ ಕೊರೊನಾ ಸೋಂಕು (Coronavirus) ಹರಡುವಿಕೆಯಲ್ಲಿ ಯಶಸ್ವಿಯಾದರೆ, ಎರಡನೇ ಹಂತದ ಪಾದಯಾತ್ರೆ ಬೆಂಗಳೂರು ನಗರದಾದ್ಯಂತ ಮತ್ತು ಮೈಸೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಕಿರಿಕಿರಿಗೆ (Traffic Jams) ಮಾತ್ರ ಸಾಕ್ಷಿಯಾಯಿತು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ (Govind Karjol Minister of Major and Medium Irrigation, water Resources of Karnataka).

ಮೇಕೆದಾಟು ಯೋಜನೆ ಸಂಕಲ್ಪದಿಂದ ಸಾಕಾರಗೊಳ್ಳಬೇಕಾದರೆ ಹಾಗೂ ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಆಗುವುದು ಕೇವಲ ಭಾರತೀಯ ಜನತಾ ಪಕ್ಷ ಮತ್ತು ಅದರ ಸರ್ಕಾರದಿಂದ ಮಾತ್ರ ಸಾಧ್ಯ. ಕರ್ನಾಟಕದ ಜನತೆಗೆ ಅದರಲ್ಲೂ ವಿಶೇಷವಾಗಿ ಕಾವೇರಿ ಕೊಳ್ಳದ ಜನತೆಗೆ ಈ ವಿಷಯದ ಸತ್ಯ ದರ್ಶನವಾಗಿದೆ.

ಅಧಿಕಾರದಲ್ಲಿದ್ದಾಗ ಯಾವುದೇ ಪರಿಣಾಮಕಾರಿ ಕ್ರಮಕ್ಕೆ ಮುಂದಾಗದೇ, ಕಾಲಹರಣ ಮಾಡಿದ ಕಾಂಗ್ರೆಸ್ ಪಕ್ಷ ಇದೀಗ ಮತ್ತೆ ಮತ್ತೆ ಪಾದಯಾತ್ರೆ ಮಾಡುವ ಮೂಲಕ ಜನದ್ರೋಹ ಎಸಗುತ್ತಿದೆ. ಕಾಂಗ್ರೆಸಿಗರ ಈ ಗಿಮಿಕ್​ಗೆ ನಾಡಿನ ಜನತೆ ಮೋಸ ಹೋಗುವುದಿಲ್ಲ ಎಂಬ ಸತ್ಯದ ಅರಿವು ಕಾಂಗ್ರೆಸ್ಸಿಗೆ ಬರಬೇಕಿದೆ ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ.

ವೀಕ್ಷಿಸಿ:  Mekedatu Padayatra 2.0 Live:

Also Read:
ಅನಿವಾರ್ಯವಾಗಿ ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸಕ್ಕೆ ಇಳಿದ ರಷ್ಯಾ, ಅತ್ಯಂತ ಅಪಾಯಕಾರಿ ಅಸ್ತ್ರ ಪ್ರಯೋಗಕ್ಕೆ ಸಜ್ಜಾಯಿತು!

Also Read:
ಒಂದು ವಾರವಾದರೂ ಪುಟ್ಟ ರಾಷ್ಟ್ರ ಉಕ್ರೇನ್ ಉಡಾಯಿಸಲು ಬಲಾಢ್ಯ ರಷ್ಯಾ ಸೇನೆಗೆ ಸಾಧ್ಯವಾಗಿಲ್ಲ! ಯಾಕೆ ಗೊತ್ತಾ?

Published On - 7:23 pm, Thu, 3 March 22