ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ 3,661 ಕೋಟಿ ರೂ. ಅನುದಾನ ಬಿಡುಗಡೆ; ಬಿಜೆಪಿ ಶಾಸಕರ ಕ್ಷೇತ್ರಕ್ಕೆ ಬಂಪರ್ ಕೊಡುಗೆ

ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ 3,661 ಕೋಟಿ ರೂ. ಅನುದಾನ ಬಿಡುಗಡೆ; ಬಿಜೆಪಿ ಶಾಸಕರ ಕ್ಷೇತ್ರಕ್ಕೆ ಬಂಪರ್ ಕೊಡುಗೆ
ಬಿಬಿಎಂಪಿ

15 ಬಿಜೆಪಿ ಶಾಸಕರ ಕ್ಷೇತ್ರಗಳಿಗೆ 2,718 ಕೋಟಿ ರೂಪಾಯಿ ಅನುದಾನ ಲಭಿಸಿದೆ. 12 ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ 833 ಕೋಟಿ ರೂಪಾಯಿ ಅನುದಾನ ಹಾಗೂ ಜೆಡಿಎಸ್ ಶಾಸಕರಿರುವ 1 ಕ್ಷೇತ್ರಕ್ಕೆ 110 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.

TV9kannada Web Team

| Edited By: ganapathi bhat

Mar 04, 2022 | 8:03 AM

ಬೆಂಗಳೂರು: ರಾಜಧಾನಿ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರದಿಂದ 3,661 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಬಿಜೆಪಿ ಶಾಸಕರ ಕ್ಷೇತ್ರಕ್ಕೆ ಸರ್ಕಾರದಿಂದ ಬಂಪರ್ ಅನುದಾನ ಲಭಿಸಿದೆ. 15 ಬಿಜೆಪಿ ಶಾಸಕರ ಕ್ಷೇತ್ರಗಳಿಗೆ 2,718 ಕೋಟಿ ರೂಪಾಯಿ ಅನುದಾನ ಲಭಿಸಿದೆ. 12 ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ 833 ಕೋಟಿ ರೂಪಾಯಿ ಅನುದಾನ ಹಾಗೂ ಜೆಡಿಎಸ್ ಶಾಸಕರಿರುವ 1 ಕ್ಷೇತ್ರಕ್ಕೆ 110 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.

ಬೆಂಗಳೂರಿನ ಅಭಿವೃದ್ಧಿಗೆ 6 ಸಾವಿರ ಕೋಟಿ ರೂಪಾಯಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದರು. ಬೆಂಗಳೂರಿನ ರಸ್ತೆ, ಗ್ರೇಟ್‌ ಸಪರೇಟರ್‌, ಕೆರೆ, ರಾಜಕಾಲುವೆ, ಉದ್ಯಾನವನ, ಕೊಳಚೆ ಪ್ರದೇಶಗಳ ಅಭಿವೃದ್ಧಿ, ಕಟ್ಟಡ ನಿರ್ಮಾಣ, ಬೀದಿ ದೀಪ, ಘನತ್ಯಾಜ್ಯ ನಿರ್ವಹಣೆ ಹಾಗೂ ಇತ್ಯಾದಿ ಕಾಮಗಾರಿಗೆ ಬಸವರಾಜ ಬೊಮ್ಮಾಯಿ ಅನುದಾನ ಘೋಷಿಸಿದ್ದರು.

ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ ಸರ್ಕಾರದಿಂದ 3661 ಕೋಟಿ ಅನುದಾನ ಬಿಡುಗಡೆ:

 1. ಮಹದೇವಪುರ ವಿಧಾನಸಭಾ ಕ್ಷೇತ್ರ- ಅರವಿಂದ ಲಿಂಬಾವಳಿ (ಬಿಜೆಪಿ)- 208‌ಕೋಟಿ ರೂ. ಅನುದಾನ
 2. ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ- ಮುನಿರತ್ನ (ಬಿಜೆಪಿ)- 208 ಕೋಟಿ ರೂ. ಅನುದಾನ
 3. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ- ಸತೀಶ್‌ ರೆಡ್ಡಿ (ಬಿಜೆಪಿ)- 207 ಕೋಟಿ ರೂ. ಅನುದಾನ
 4. ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರ- ಬೈರತಿ ಬಸವರಾಜ (ಬಿಜೆಪಿ)- 207 ಕೋಟಿ ರೂ. ಅನುದಾನ
 5. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ- ಎಂ. ಕೃಷ್ಣಪ್ಪ (ಬಿಜೆಪಿ)- 206 ಕೋಟಿ ರೂ. ಅನುದಾನ
 6. ಯಶವಂತಪುರ ವಿಧಾನಸಭಾ ಕ್ಷೇತ್ರ- ಎಸ್‌.ಟಿ. ಸೋಮಶೇಖರ್‌ (ಬಿಜೆಪಿ)- 202 ಕೋಟಿ ರೂ. ಅನುದಾನ
 7. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ- ವಿ.ಸೋಮಣ್ಣ (ಬಿಜೆಪಿ)- 200 ಕೋಟಿ ರೂ. ಅನುದಾನ
 8. ಪದ್ಮನಾಭನಗರ ವಿಧಾನಸಭಾ ಕ್ಷೇತ್ರ- ಆರ್‌.ಅಶೋಕ (ಬಿಜೆಪಿ)- 200 ಕೋಟಿ ರೂ. ಅನುದಾನ
 9. ಯಲಹಂಕ ವಿಧಾನಸಭಾ ಕ್ಷೇತ್ರ- ಎಸ್‌.ಆರ್‌.ವಿಶ್ವನಾಥ್‌ (ಬಿಜೆಪಿ)- 170 ಕೋಟಿ ರೂ. ಅನುದಾನ
 10. ಸಿವಿರಾಮನ್‌ನಗರ ವಿಧಾನಸಭಾ ಕ್ಷೇತ್ರ- ಎಸ್‌.ರಘು (ಬಿಜೆಪಿ)- 175 ಕೋಟಿ ರೂ. ಅನುದಾನ
 11. ಮಹಾಲಕ್ಷ್ಮಿಪುರ ವಿಧಾನಸಭಾ ಕ್ಷೇತ್ರ- ಗೋಪಾಲಯ್ಯ (ಬಿಜೆಪಿ)- 170 ಕೋಟಿ ರೂ. ಅನುದಾನ
 12. ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ- ಡಾ.ಸಿ.ಎನ್‌.ಅಶ್ವತ್ಥನಾರಾಯಣ (ಬಿಜೆಪಿ)- 150 ಕೋಟಿ ರೂ. ಅನುದಾನ
 13. ರಾಜಾಜಿನಗರ ವಿಧಾನಸಭಾ ಕ್ಷೇತ್ರ- ಸುರೇಶ್‌ ಕುಮಾರ್‌ (ಬಿಜೆಪಿ)- 150 ಕೋಟಿ ರೂ. ಅನುದಾನ
 14. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ- ಉದಯ ಗರುಡಾಚಾರ್‌ (ಬಿಜೆಪಿ)- 140 ಕೋಟಿ ರೂ. ಅನುದಾನ
 15. ಬಸವನಗುಡಿ ವಿಧಾನಸಭಾ ಕ್ಷೇತ್ರ- ರವಿ ಸುಬ್ರಹ್ಮಣ್ಯ (ಬಿಜೆಪಿ)- 125 ಕೋಟಿ ರೂ. ಅನುದಾನ
 16. ದಾಸರಹಳ್ಳಿ ವಿಧಾನಸಭಾ ಕ್ಷೇತ್ರ- ಮಂಜುನಾಥ (ಜೆಡಿಎಸ್‌)- 110 ಕೋಟಿ ರೂ. ಅನುದಾನ
 17. ಹೆಬ್ಬಾಳ ವಿಧಾನಸಭಾ ಕ್ಷೇತ್ರ- ಬೈರತಿ ಸುರೇಶ್‌ (ಕಾಂಗ್ರೆಸ್‌)- 90 ಕೋಟಿ ರೂ. ಅನುದಾನ
 18. ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರ- ರಾಮಲಿಂಗಾರೆಡ್ಡಿ (ಕಾಂಗ್ರೆಸ್‌)- 80 ಕೋಟಿ ರೂ. ಅನುದಾನ
 19. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ- ಜಮೀರ್‌ ಅಹ್ಮದ್‌ (ಕಾಂಗ್ರೆಸ್‌)- 80 ಕೋಟಿ ರೂ. ಅನುದಾನ
 20. ಗಾಂಧಿನಗರ ವಿಧಾನಸಭಾ ಕ್ಷೇತ್ರ- ದಿನೇಶ್‌ ಗುಂಡೂರಾವ್‌ (ಕಾಂಗ್ರೆಸ್‌)- 80 ಕೋಟಿ ರೂ. ಅನುದಾನ
 21. ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ- ಕೆ.ಜೆ.ಜಾಜ್‌ರ್‍ (ಕಾಂಗ್ರೆಸ್‌)- 80 ಕೋಟಿ ರೂ. ಅನುದಾನ
 22. ಶಿವಾಜಿನಗರ ವಿಧಾನಸಭಾ ಕ್ಷೇತ್ರ- ರಿಜ್ವಾನ್‌ ಅಷ್ಮದ್‌ (ಕಾಂಗ್ರೆಸ್‌)- 80 ಕೋಟಿ ರೂ. ಅನುದಾನ
 23. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ- ಕೃಷ್ಣ ಭೈರೇಗೌಡ (ಕಾಂಗ್ರೆಸ್‌)- 75 ಕೋಟಿ ರೂ. ಅನುದಾನ
 24. ಪುಲಕೇಶಿನಗರ ವಿಧಾನಸಭಾ ಕ್ಷೇತ್ರ- ಅಖಂಡ ಶ್ರೀನಿವಾಸ್‌ (ಕಾಂಗ್ರೆಸ್‌)- 70 ಕೋಟಿ ರೂ. ಅನುದಾನ
 25. ಶಾಂತಿನಗರ ವಿಧಾನಸಭಾ ಕ್ಷೇತ್ರ- ಎನ್‌.ಎ.ಹ್ಯಾರಿಸ್‌ (ಕಾಂಗ್ರೆಸ್‌)- 70 ಕೋಟಿ ರೂ. ಅನುದಾನ
 26. ಜಯನಗರ ವಿಧಾನಸಭಾ ಕ್ಷೇತ್ರ- ಸೌಮ್ಯಾರೆಡ್ಡಿ (ಕಾಂಗ್ರೆಸ್‌)- 60 ಕೋಟಿ ರೂ. ಅನುದಾನ
 27. ವಿಜಯನಗರ ವಿಧಾನಸಭಾ ಕ್ಷೇತ್ರ- ಎಂ.ಕೃಷ್ಣಪ್ಪ (ಕಾಂಗ್ರೆಸ್‌)- 60 ಕೋಟಿ ರೂ. ಅನುದಾನ
 28. ಆನೇಕಲ್‌ ವಿಧಾನಸಭಾ ಕ್ಷೇತ್ರ- ಶಿವಣ್ಣ (ಕಾಂಗ್ರೆಸ್‌)- 08 ಕೋಟಿ ರೂ. ಅನುದಾನ

ಇದನ್ನೂ ಓದಿ: ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ದೂರವಾಣಿ ಮಾತುಕತೆ

ಇದನ್ನೂ ಓದಿ: Karnataka Budget 2022: ಮದ್ಯದ ಮೇಲೆ ತೆರಿಗೆ ಹೆಚ್ಚಿಸದಿರಲು ಮಾಡಿರುವ ಮನವಿಗೆ ಸ್ಪಂದಿಸುತ್ತಾರಾ ಬಸವರಾಜ್ ಬೊಮ್ಮಾಯಿ?

Follow us on

Related Stories

Most Read Stories

Click on your DTH Provider to Add TV9 Kannada