ಬೆಂಗಳೂರು: ದೇಶ ಸೇರಿದಂತೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಶರವೇಗದಲ್ಲಿ ಏರಿಕೆ ಆಗ್ತಿವೆ. ರಾಜ್ಯ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಏಪ್ರಿಲ್ 24ರ ಸೋಮವಾರ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಶೇಕಡಾ 56 ರಷ್ಟು ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 339 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಇಬ್ಬರು ಸೋಂಕಿಗೆ ಬಲಿಯಾಗಿದ್ದರು. ಈ ಮೂಲಕ ಪಾಸಿಟಿವ್ ಪ್ರಮಾಣ ಶೇ 11.3ಕ್ಕೆ ತಲುಪಿದೆ. ಇನ್ನು ಏಪ್ರಿಲ್ 25ರ ಮಂಗಳವಾರ 241 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಕರ್ನಾಟಕ ರಾಜ್ಯದಲ್ಲಿ ಸೋಮವಾರ ಒಂದೇ ದಿನ 339 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಇಬ್ಬರು ಸೋಂಕಿಗೆ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ ಬೆಂಗಳೂರಲ್ಲೇ 306 ಮಂದಿಯಲ್ಲಿ ಕೊರೊನಾ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆಯ ಅಂಕಿಅಂಶಗಳು ತಿಳಿಸಿವೆ. ಇನ್ನು ಹಿಂದಿನ ಪ್ರಕರಣಗಳಿಗೆ ಹೋಲಿಸಿದರೆ ಶೇಕಡಾ 56ರಷ್ಟು ಹೆಚ್ಚಾಗಿವೆ. ಏಪ್ರಿಲ್ 25ರ ಮಂಗಳವಾರ 241 ಪ್ರಕರಣಗಳು ಪತ್ತೆಯಾಗಿವೆ. ಸದ್ಯ ನಿನ್ನೆಗಿಂತ ಇಂದು ಸೋಂಕಿತ ಸಂಖ್ಯೆ ಕಡಿಮೆಯಾಗಿದ್ದರೂ ಆತಂಕ ತಪ್ಪಿದಲ್ಲ. ಏಕೆಂದರೆ ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿದೆ. ಏಪ್ರಿಲ್ 25ರ ಮಂಗಳವಾರ ರಾಜ್ಯದಲ್ಲಿ 289ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 1895 ಸಕ್ರಿಯ ಪ್ರಕರಣಗಳಿವೆ.
ಇಂದಿನ 24/04/2023 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/tEdSKUjldv pic.twitter.com/IdzqS6tq3a
— K'taka Health Dept (@DHFWKA) April 24, 2023
ಇದನ್ನೂ ಓದಿ: Karnataka Covid Updates: ರಾಜ್ಯದಲ್ಲಿ ಕೊರೊನಾ ಏರಿಕೆ, ಕಳೆದ 24 ಗಂಟೆಯಲ್ಲಿ 537 ಪ್ರಕರಣಗಳು ಪತ್ತೆ
ರಾಜ್ಯದಲ್ಲಿ ಎಂಟು ತಿಂಗಳು ಬಳಿಕ ಕೊರೊನಾ ಕೇಸ್ ತೀವ್ರ ಏರಿಕೆ ಕಂಡು ಬರ್ತಿದೆ. ಗರಿಷ್ಠ ಪ್ರಮಾಣದಲ್ಲಿ ಕೇಸ್ ಏರಿಕೆ ರಾಜ್ಯದ ಜನರ ಆತಂಕಕ್ಕೆ ಕಾರಣವಾಗದೆ. ಇನ್ನೂ ಮೇ ತಿಂಗಳ ಕೊನೆಯವರೆಗೂ ಕೇಸ್ ಏರಿಕೆಯ ಆತಂಕವನ್ನ ಆರೋಗ್ಯ ಇಲಾಖೆ ಹೊರ ಹಾಕಿದೆ. ರಾಜ್ಯದಲ್ಲಿ ಚುನಾವಣೆಯ ಸಂದರ್ಭದಲ್ಲಿಯೇ ಕೇಸ್ ಡಬ್ಲಿಂಗ್ ಆಗ್ತೀದ್ದು ಕಳೆದ ತಿಂಗಳು 15 ಜನರು ಕೊವಿಡ್ ಗೆ ಬಲಿಯಾಗಿದ್ರೆ ಈ ತಿಂಗಳು 20 ದಿನದಲ್ಲಿಯೇ ಸಾವಿನ ಸಂಖ್ಯೆ 15ರ ಗಡಿದಾಟಿದೆ. ನಿತ್ಯ 500 ಕ್ಕೂ ಹೆಚ್ಚು ಕೇಸ್ ದಾಖಲಾಗ್ತಿದೆ. ಅಷ್ಟೇ ಅಲ್ದೆ ವಿಪರೀತ ಬೇಸಿಗೆ ಹವಮಾನದಿಂದ ರಾಜ್ಯದಲ್ಲಿ ಮುಂದಿನ ತಿಂಗಳವರೆಗೂ ಮತ್ತಷ್ಟು ಕೇಸ್ ಏರಿಕೆಯ ಆತಂಕ ಎದುರಾಗಿದೆ.
ಇನ್ನು ರಾಜ್ಯದಲ್ಲಿ ಕೊರೊನಾ ಏರಿಕೆಯ ಸಾಧ್ಯತೆ ಹಿನ್ನಲೆ ಕೇಂದ್ರ ಆರೋಗ್ಯ ಇಲಾಖೆಯೂ ರಾಜ್ಯಕ್ಕೆ ಎಚ್ಚರಿಕೆ ನೀಡಿದ್ದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೋಂಕು ಹೆಚ್ಚಳ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆಯಿಂದ ಸೂಚನೆ ನೀಡಿದೆ. ಪಾಸಿಟಿವಿಟಿ ಹೆಚ್ಚಿರುವ ಜಿಲ್ಲೆಗಳ ಮೇಲೆ ಹೆಚ್ಚು ನಿಗಾ ವಹಿಸಿಸುವಂತೆ ಹಾಗೂ ಉಸಿರಾಟದ ತೊಂದರೆ, ಜ್ವರ ಮಾದರಿಯ ಐಎಲ್‌ಐ ಪ್ರಕರಣಗಳ ಬಗ್ಗೆ ಹದ್ದಿನ ಕಣ್ಣಿಡುವಂತೆ ಎಚ್ಚರಿಕೆ ನೀಡಿದ್ದು ಕೇಂದ್ರದ ಸೂಚನೆ ಬೆನ್ನಲೆ ಅಲರ್ಟ್ ಆದ ರಾಜ್ಯ ಆರೋಗ್ಯ ಇಲಾಖೆ ಕೊವಿಡ್ ನಿಯಂತ್ರಣಕ್ಕೆ ಮುನ್ನಚ್ಚರಿಕೆ ವಹಿಸಲು ಮುಂದಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:02 am, Wed, 26 April 23