ರಾಜ್ಯದಲ್ಲಿ ಮ್ಯೂಲ್ ಅಕೌಂಟ್‌ಗಳಿಂದ ಕೋಟ್ಯಂತರ ರೂ ವ್ಯವಹಾರ: ಸೈಬರ್​​ ಕಾರ್ಯಚರಣೆಯಲ್ಲಿ ಸ್ಫೋಟಕ ಸತ್ಯ ಬಯಲು

ರಾಜ್ಯದಲ್ಲಿ ಮ್ಯೂಲ್ ಬ್ಯಾಂಕ್ ಅಕೌಂಟ್‌ಗಳ ವಿರುದ್ಧ ಸೈಬರ್ ಕಮಾಂಡ್ ವಿಭಾಗದ ಅಧಿಕಾರಿಗಳು ಸಮರ ಸಾರಿದ್ದು, ವಿಶೇಷ ಕಾರ್ಯಾಚರಣೆ ನಡೆಸುವ ಮೂಲಕ ಸದ್ಯ ನೂರಾರು ಮ್ಯೂಲ್ ಬ್ಯಾಂಕ್ ಅಕೌಂಟ್‌ಗಳನ್ನು ಪತ್ತೆ ಮಾಡಿದ್ದಾರೆ. ಈ ಅಕೌಂಟ್‌ಗಳಿಂದ ಕೋಟ್ಯಂತರ ರೂ ವ್ಯವಹಾರ ನಡೆದಿರುವುದು ತನಿಖೆಯಲ್ಲಿ ಬಯಲಾಗಿದೆ.

ರಾಜ್ಯದಲ್ಲಿ ಮ್ಯೂಲ್ ಅಕೌಂಟ್‌ಗಳಿಂದ ಕೋಟ್ಯಂತರ ರೂ ವ್ಯವಹಾರ: ಸೈಬರ್​​ ಕಾರ್ಯಚರಣೆಯಲ್ಲಿ ಸ್ಫೋಟಕ ಸತ್ಯ ಬಯಲು
ಪ್ರಾತಿನಿಧಿಕ ಚಿತ್ರ
Image Credit source: adcb.com
Edited By:

Updated on: Feb 18, 2026 | 8:32 PM

ಬೆಂಗಳೂರು, ಫೆಬ್ರವರಿ 18: ರಾಜ್ಯದಲ್ಲಿ ಸೈಬರ್​ ಪ್ರಕರಣಗಳು (Cyber ​​cases) ಹೆಚ್ಚುತ್ತಿರುವ ಬೆನ್ನಲ್ಲೇ ಮ್ಯೂಲ್ ಬ್ಯಾಂಕ್ ಅಕೌಂಟ್‌ಗಳ (Mule bank accounts) ಮೂಲಕ ಕೂಡ ಭಾರೀ ವಂಚನೆ ನಡೆಯುತ್ತಿದೆ. ಸೈಬರ್ ಕಮಾಂಡ್ ವಿಭಾಗದಿಂದ ಮ್ಯೂಲ್ ಬ್ಯಾಂಕ್ ಅಕೌಂಟ್‌ಗಳ ವಿರುದ್ಧ ಡಿ.20ರಿಂದ ಫೆಬ್ರವರಿಗೆ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ರಾಜ್ಯದಲ್ಲಿ 869 ಮ್ಯೂಲ್ ಬ್ಯಾಂಕ್ ಅಕೌಂಟ್‌ಗಳು ಪತ್ತೆ ಆಗಿದ್ದು, ಈವರೆಗೆ 60 ಮೊಕದ್ದಮೆ ದಾಖಲಿಸಲಾಗಿದ್ದು, 68 ಆರೋಪಿಗಳನ್ನ ಬಂಧಿಸಲಾಗಿದೆ.

ಕೋಟ್ಯಂತರ ರೂ ವ್ಯವಹಾರ

ಸದ್ಯ ರಾಜ್ಯದಲ್ಲಿ ಪತ್ತೆ ಆಗಿರುವ ಈ ಅಕೌಂಟ್‌ಗಳ ವಿರುದ್ಧ ಎನ್​​ಸಿಆರ್​​ಪಿನಲ್ಲಿ 8788 ಕೇಸ್ ಇರುವುದು ಪತ್ತೆ ಆಗಿದೆ. 869 ಮ್ಯೂಲ್ ಅಕೌಂಟ್‌ ಮೂಲಕ 80.5 ಕೋಟಿ ರೂ ಹಣದ ವ್ಯವಹಾರ ನಡೆದಿದೆ. ಸೈಬರ್ ಕಮಾಂಡ್ ವಿಭಾಗ ಈ ಪೈಕಿ 13.43 ಕೋಟಿ ರೂ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವರ್ಗಾವಣೆ: ಏನಿದು ಹಣದ ರಹಸ್ಯ?

ಇನ್ನು ಬಂಧಿತ ಆರೋಪಿಗಳಿಂದ 35 ಎಟಿಎಂ ಕಾರ್ಡ್‌, 80 ಮೊಬೈಲ್‌ಫೋನ್‌, 28 ಚೆಕ್‌ಬುಕ್‌, 22 ಸಿಮ್ ಕಾರ್ಡ್‌, 50 ಇತರ ದಾಖಲಾತಿಗಳು ಪತ್ತೆ ಆಗಿದ್ದು, ಸೈಬರ್ ಕಮಾಂಡ್ ವಿಭಾಗದ ಅಧಿಕಾರಿಗಳು ಇನ್ನೂ ಕಾರ್ಯಾಚರಣೆ ಮುಂದುವರಿಸಿದೆ.

ಮ್ಯೂಲ್ ಅಕೌಂಟ್‌ ಎಂದರೇನು?

ದೊಡ್ಡ ಪ್ರಮಾಣದ ಅಕ್ರಮ ಹಣವನ್ನು ವರ್ಗಾವಣೆ ಮಾಡಲು ಯತ್ನಿಸುವವರು ಸಾಮಾನ್ಯವಾಗಿ ನೇರವಾಗಿ ತಮ್ಮ ಖಾತೆಗಳನ್ನು ಬಳಸುವುದಿಲ್ಲ. ಅದರ ಬದಲು, ಇತರರ ಹೆಸರಿನ ಬ್ಯಾಂಕ್ ಖಾತೆಗಳನ್ನು ಅಥವಾ ಡಮ್ಮಿ ತೆರೆಯಲ್ಪಟ್ಟ ಖಾತೆಗಳನ್ನು ಬಳಸುತ್ತಾರೆ. ಇಂತಹ ಖಾತೆಗಳನ್ನು ಸಾಮಾನ್ಯವಾಗಿ ಮ್ಯೂಲ್ ಖಾತೆ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಮ್ಯೂಲ್ ಅಕೌಂಟ್ ಸೈಬರ್ ದಂಧೆಗೆ ಸಿಐಡಿ ಶಾಕ್: ರಾಜ್ಯಾದ್ಯಂತ ಮೆಗಾ ದಾಳಿ, 13 ಮಾಸ್ಟರ್ ಮೈಂಡ್‌ಗಳ ಬಂಧನ

ಈ ಖಾತೆಗಳ ಮಾಲೀಕರು ಅಪರಾಧದಲ್ಲಿ ಕೆಲವೊಮ್ಮೆ ತಿಳಿದು ಸಹಕರಿಸಬಹುದು ಅಥವಾ ಸುಲಭ ಹಣದ ಆಮಿಷಕ್ಕೆ ಒಳಗಾಗಿ ತಮ್ಮ ಖಾತೆಯನ್ನು ಬಳಸಲು ಒಪ್ಪಿಕೊಳ್ಳಲುಬಹುದು. ಕಾರಣವೇನಿರಲಿ, ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗುವುದು ಕಾನೂನುಬದ್ಧವಾಗಿ ಅಪರಾಧ ಎಂದು ಪರಿಗಣಿಸಲಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:31 pm, Wed, 18 February 26