ಬೆಂಗಳೂರು, ಸೆಪ್ಟೆಂಬರ್ 08: ತಮಿಳುನಾಡು ಸರ್ಕಾರ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಹೊಸ ಯೋಜನೆ ನಿರ್ಮಿಸಿದೆ. ಗಡಿಭಾಗದಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಸಂಬಂಧ ಬೆಂಗಳೂರು (Bengaluru) ಸುತ್ತಮುತ್ತ ಜಾಗ ಹುಡುಕುತ್ತಿದೆ. ಈಗಾಗಲೆ ಬಿಡಿದಿ, ಹೇರೋಹಳ್ಳಿ, ಕುಣಿಗಲ್, ತುಮಕೂರು ಮತ್ತು ಜಿಗಣಿ ಸುತ್ರಮುತ್ತ ಖಾಲಿ ಜಾಗಕ್ಕೆ ರಾಜ್ಯ ಸರ್ಕಾರ ಹುಡುಕಾಟ ನಡೆಸಿದೆ.
ಜಿಗಣಿ ಭಾಗದಲ್ಲಿ ಕನಿಷ್ಠ 4 ಸಾವಿರ ಏಕರೆ ಜಾಗ ಅಲಭ್ಯ ಹಿನ್ನೆಲೆಯಲ್ಲಿ ಬಿಡದಿ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಯಾವೆಲ್ಲ ಪ್ರದೇಶಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಸಾಧ್ಯತೆ ಇದೆ ಎಂಬುವುದರ ಬಗ್ಗೆ ವರದಿ ಸಿದ್ದಪಡಿಸುವಂತೆ ಕೈಗಾರಿಕಾ ಇಲಾಖೆ ಖಾಸಗಿ ಸಂಸ್ಥೆಗೆ ಸೂಚನೆ ನೀಡಿದೆ.
ಇದನ್ನೂ ಓದಿ: ಬೆಂಗಳೂರು ಗಡಿಭಾಗದ ಹೊಸೂರಿನಲ್ಲಿ ಹೊಸ ಏರ್ಪೋರ್ಟ್ ನಿರ್ಮಾಣಕ್ಕೆ ತಮಿಳುನಾಡು ಸರ್ಕಾರ ನಿರ್ಧಾರ
ಏಕಕಾಲಕ್ಕೆ ಎರಡು ವಿಮಾನ ನಿಲ್ದಾಣಗಳನ್ನು ನಿರ್ಮಿಸುವಂತೆ ಕ್ಯಾಪ್ಟನ್ ಗೋಪಿನಾಥ್ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಇದರಿಂದ ಕೈಗಾರಿಕೆ ಹಾಗೂ ಸಂಚಾರ ಸಂಪರ್ಕದ ಮೇಲೆ ದೂರಗಾಮಿ ಸತ್ಪರಿಣಾಮ ಬೀರಲಿದೆ ಎಂದಿದ್ದಾರೆ. ಆದರೆ, ರಾಜ್ಯ ಸರ್ಕಾರ ಸದ್ಯ ಒಂದು ವಿಮಾನ ನಿಲ್ದಾಣ ನಿರ್ಮಾಣದತ್ತ ಒಲವು ಹೊಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:17 am, Sun, 8 September 24