ಬೆಂಗಳೂರು: ನಿಯಮಬಾಹಿರವಾಗಿ ಪ್ರವೇಶ ನೀಡಿದ ಹಿನ್ನೆಲೆ 10 ವಿದ್ಯಾರ್ಥಿಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕರ್ನಾಟಕ ಹೈಕೋರ್ಟ್ (Karnataka High Court) ಕಲಬುರಗಿ ಜಿಲ್ಲೆಯ ಮದರ್ ಮೇರಿ ನರ್ಸಿಂಗ್ ಕಾಲೇಜ್ಗೆ (Mother Mary Nursing College) ಆದೇಶಿಸಿದೆ. ಪ್ರವೇಶದ ಅವಧಿ ಮುಗಿದ ಮೇಲೂ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಿದ ಹಿನ್ನೆಲೆ ಕಾಲೇಜಿನ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯಕ್ಕೆ ನ್ಯಾ.ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ನಿರ್ದೇಶನ ನೀಡಿದೆ.
ವಿದ್ಯಾರ್ಥಿಗಳನ್ನು ಮದರ್ ಮೇರಿ ನರ್ಸಿಂಗ್ ಕಾಲೇಜ್ಗೆ ಸೇರಿಸುವ ಕೊನೆಯ ದಿನಾಂಕ 2022ರ ಏಪ್ರಿಲ್ 7 ಆಗಿತ್ತು. ಈ ಅವಧಿಯಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳದೆ ಮುಕ್ತಾಯದ ನಂತರ ನಕಲಿ ಪ್ರವೇಶ ದಾಖಲು ಮಾಡಿ ದಾಖಲಾತಿ ಆಗಿದೆ ಎಂದು ಸೂಚಿಸಿಲಾಗಿತ್ತು. ಅಲ್ಲದೆ, ದಾಖಲೆಗಳನ್ನು ಅಪ್ಲೋಡ್ ಮಾಡದೆ ನಕಲಿ ದಾಖಲಾತಿ ರಿಜಿಸ್ಟರ್ ಹೆಸರಿನಲ್ಲಿ ಶುಲ್ಕು ವಸೂಲಿ ಮಾಡಲಾಗಿತ್ತು. ಕೊನೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಾಗಲಿಲ್ಲ. ಆ ಮೂಲಕ ಬಿಎಸ್ಸಿ ನರ್ಸಿಂಗ್ ವ್ಯಾಸಾಂಗದ ಕನಸು ಹೊತ್ತುಕೊಂಡಿರುವ ವಿದ್ಯಾರ್ಥಿಗಳ ಬಾಳಲ್ಲಿ ಮದರ್ ಮೇರಿ ನರ್ಸಿಂಗ್ ಕಾಲೇಜು ಚೆಲ್ಲಾಟ ಆಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:17 pm, Mon, 3 July 23