ಅಂಬೇಡ್ಕರ್ ಸಂವಿಧಾನ ಬರೆಯದಿದ್ದರೆ ಎಮ್ಮೆ ಕಾಯುತ್ತಿರುತ್ತಿದ್ದೆ: ಸಿಎಂ ಸಿದ್ದರಾಮಯ್ಯ
ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಇಂದು ಹಡಪದ ಅಪ್ಪಣ್ಣ ಜಯಂತಿ ಆಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ಭಾಗಿಯಾದ ಸಿಎಂ ಸಿದ್ದರಾಮಯ್ಯ, ಬಸವಣ್ಣ ಮತ್ತು ಅಂಬೇಡ್ಕರ್ ಅವರನ್ನು ಸ್ಮರಿಸಿದರು.
ಬೆಂಗಳೂರು: ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಬರೆದಿದ್ದರೆ ನಾನು ಇಂದು ಮುಖ್ಯಮಂತ್ರಿ ಆಗುತ್ತಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದರು. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಹಡಪದ ಅಪ್ಪಣ್ಣ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನ ಇಲ್ಲದಿದ್ದರೆ ನಾನು ಎಮ್ಮೆ ಕಾಯುತ್ತಿರುತ್ತಿದೆ. ಸಚಿವ ಶಿವರಾಜ್ ತಂಗಡಗಿ (Shivaraj Tangadagi) ಅವರು ಕಲ್ಲು ಒಡೆಯುತ್ತಿದ್ದರು ಎಂದರು.
ಸ್ವಾರ್ಥಕ್ಕಾಗಿ ಜಾತಿ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿದ ಸಿದ್ದರಾಮಯ್ಯ, ಜಾತಿ ವ್ಯವಸ್ಥೆ ವಿರುದ್ಧ ಬುದ್ಧ, ಬಸವಣ್ಣ ಹೋರಾಟ ಮಾಡಿದ್ದರು. ನಾವು ಮನುಷ್ಯರಾಗಿ ಬದುಕಿ ಸಮಾಜದಲ್ಲಿ ಪರಿವರ್ತನೆ ತರಬೇಕು. ಬಸವಣ್ಣನವರು ಕೆಳವರ್ಗದ ಜನರ ಪರವಾಗಿ ಕೆಲಸ ಮಾಡಿದ್ದರು. ಅಸಮಾನತೆ ಇದ್ದರೆ ಸಮಾಜದಲ್ಲಿ ಸಾಮರಸ್ಯ ಇರುವುದಿಲ್ಲ. ಹೀಗಾಗಿ ಬಸವಣ್ಣ ಅನುಭವ ಮಂಟಪ ನಿರ್ಮಾಣ ಮಾಡಿದರು ಎಂದರು.
ಇದನ್ನೂ ಓದಿ: ಈಶ್ವರಪ್ಪಗೆ ಸನ್ಮಾನಿಸಲು ನಿರಾಕರಿಸಿದ ಸಿದ್ದರಾಮಯ್ಯ: ಸಮುದಾಯದ ಕಾರ್ಯಕ್ರಮದಲ್ಲಿ ಉಭಯ ನಾಯಕರ ಮುನಿಸು ಬಹಿರಂಗ
ಕರ್ನಾಟಕ ಸರ್ಕಾರ ಬಹಳಷ್ಟು ಮಹಾಪುರುಷರ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಯಾಕೆಂದರೆ ಅಪ್ಪಣ್ಣ ಅವರು ಆಕಸ್ಮಿಕವಾಗಿ ಹಡಪದ ಜಾತಿಗೆ ಹುಟ್ಟಿದವರು. ಆದರೆ ಅವರ ಬದುಕು ನೋಡಿದರೆ ಕಡಪದ ಜಾತಿಗೆ ಮೀಸಲಾಗಿಲ್ಲ. ಇಡೀ ಮನುಕುಲಕ್ಕೆ ಮೀಸಲಾದವರು ಎಂದು ಸಿದ್ದರಾಮಯ್ಯ ಹೇಳಿದರು.
ತಮ್ಮ ಕಾರಿನ ಮೇಲೆ ಕಾಗೆ ಕುಳಿತ ಪ್ರಸಂಗ ಸ್ಮರಿಸಿದ ಸಿದ್ದರಾಮಯ್ಯ
ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕಾಗೆ ಕುಳಿತುಕೊಂಡಿದ್ದು ಭಾರೀ ಚರ್ಚೆಯಾಗಿತ್ತು. ಈ ಬಗ್ಗೆ ಕಾರ್ಯಕ್ರಮದಲ್ಲಿ ಸ್ಮರಿಸಿದ ಅವರು, ನನ್ನ ಕಾರಿನ ಮೇಲೆ ಕಾಗೆ ಕುಳಿತಿದ್ದಕ್ಕೆ ಭಯಂಕರ ಚರ್ಚೆ ನಡೆಯಿತು. ಒಬ್ಬರು ನಾನು ಬಜೆಟ್ ಮಂಡಿಸಲ್ಲ, ಕುರ್ಚಿ ಕಳೆದುಕೊಳ್ಳುತ್ತೇನೆ ಎಂದಿದ್ದರು. ಇನ್ನೊಬ್ಬರು ಬಜೆಟ್ ಮಂಡಿಸಿದ ಮೇಲೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದಿದ್ದರು. ಆದರೆ ಮೌಢ್ಯದ ಕಾಗೆ ಹಾರಿಸಿದವರು ನಾಪತ್ತೆಯಾದರು. ಕಾಗೆ ಕುಳಿತ ಬಳಿಕವೂ 2 ಬಜೆಟ್ ಮಂಡಿಸಿ ಅಧಿಕಾರ ನಿರ್ವಹಿಸಿದೆ. ಆದ್ದರಿಂದ ಮೌಢ್ಯವನ್ನು ನಂಬಬೇಡಿ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ