ಈಶ್ವರಪ್ಪಗೆ ಸನ್ಮಾನಿಸಲು ನಿರಾಕರಿಸಿದ ಸಿದ್ದರಾಮಯ್ಯ: ಸಮುದಾಯದ ಕಾರ್ಯಕ್ರಮದಲ್ಲಿ ಉಭಯ ನಾಯಕರ ಮುನಿಸು ಬಹಿರಂಗ

ರಾಜಕೀಯ ಬದ್ಧ ವೈರಿಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಚಿವ ಕೆಎಸ್​ ಈಶ್ವರಪ್ಪ ನಡುವಿನ ಮುಸುಕಿನ ಗುದ್ದಾಟ ಸಮುದಾಯದ ಕಾರ್ಯಕ್ರದಲ್ಲಿ ಬಹಿರಂಗವಾಗಿದೆ.

ಈಶ್ವರಪ್ಪಗೆ ಸನ್ಮಾನಿಸಲು ನಿರಾಕರಿಸಿದ ಸಿದ್ದರಾಮಯ್ಯ: ಸಮುದಾಯದ ಕಾರ್ಯಕ್ರಮದಲ್ಲಿ ಉಭಯ ನಾಯಕರ ಮುನಿಸು ಬಹಿರಂಗ
ಮಠದ ಭೂಮಿ ಪೂಜೆ ಹಾಗೂ ಅಭಿನಂದನಾ ಕಾರ್ಯಕ್ರಮ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Jul 02, 2023 | 6:55 PM

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಮಾಜಿ ಸಚಿವ ಕೆಎಸ್ ಈಶ್ವರಪ್ಪ(KS Eshwarappa) ರಾಜಕೀಯ ಬದ್ಧವೈರಿಗಳು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಹೌದು…ಇಂದು (ಜುಲೈ 02) ಬೆಂಗಳೂರಿನ (Bengaluru) ಕೇತೋಹಳ್ಳಿಯಲ್ಲಿ ಕಾಗಿನೆಲೆ ಮಹಾಸಂಸ್ಥಾನದ ಶಾಖಾ ಮಠದ ಭೂಮಿ ಪೂಜೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಆಯೋಜಿಸಲಾಗಿದ್ದು, ಈ ಸಭೆಯಲ್ಲಿ ಕುರುಬ ಸಮುದಾಯದ ಎಲ್ಲಾ ಪ್ರಮುಖ ರಾಜಕೀಯ ನಾಯಕರು ಪಾಲ್ಗೊಂಡಿದ್ದರು. ಆದ್ರೆ, ಈ ವೇಳೆ ಈಶ್ವರಪ್ಪನವರಿಗೆ ಸನ್ಮಾನಿಸಲು ಸಿದ್ದರಾಮಯ್ಯ ನಿರಾಕರಿಸಿರುವ ಪ್ರಸಂಗ ನಡೆದಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗಬೇಕೆಂದು 8 ರಾಜ್ಯಗಳ ಮುಖ್ಯಮಂತ್ರಿಗಳು ಹೇಳಿದ್ರಲ್ಲ ಅದು ಕುರುಬರ ಗತ್ತು: ನಿರಂಜನಾನಂದಪುರಿಶ್ರೀ

ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ (niranjanananda Puri Swamiji) ಅವರು ಕೆಎಸ್​ ಈಶ್ವರಪ್ಪ ಅವರಿಗೆ ಸನ್ಮಾನಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೇಳಿಕೊಂಡಿದ್ದಾರೆ. ಆದ್ರೆ, ಇದಕ್ಕೆ ಸಿದ್ದರಾಮಯ್ಯ, ನೀವೇ ಸನ್ಮಾನಿಸಿ ಎಂದು ಕೈಸನ್ನೇ ಮಾಡಿದ್ದಾರೆ.  ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.  ಸಿದ್ದರಾಮಯ್ಯ ಅವರು ಈಶ್ವರಪ್ಪನವರನ್ನು ಸನ್ಮಾನಿಸಿಸಲು ಬೇಕಂತಲೇ ಹಿಂಜರಿದಿದ್ದಾರೋ ಅಥವಾ ಸಾಮಾನ್ಯವಾಗಿ ನೀವೇ ಮಾಡಿ ಮುಗಿಸಿ ಎನ್ನುವ ಅರ್ಥದಲ್ಲಿ ಕೈಸನ್ನೇ ಮಾಡಿ ಹೇಳಿದ್ದಾರೋ ಗೊತ್ತಿಲ್ಲ.

ಆಗಿದ್ದೇನು?

ಈಶ್ವರಪ್ಪನವರು ಮಠದ ಶ್ರೀರಕ್ಷೆ ಸ್ವೀಕರಿಸುವಂತೆ ನಿರೂಪಕರು ಮೈಕ್​ನಲ್ಲಿ ಹೇಳಿದ್ದಾರೆ. ಅದರಂತೆ ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಈಶ್ವರಪ್ಪ ಅವರಿಗೆ ಸನ್ಮಾನ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಲು ನೀಡಲು ಮುಂದಾಗಿದ್ದಾರೆ. ಆದ್ರೆ, ಸಿದ್ದರಾಮಯ್ಯ ಸನ್ಮಾನಿಸಲು ನಿರಾಕರಿಸಿ, ನೀವೆ ಮಾಡಿ ಎಂದಿದ್ದಾರೆ. ಕೊನೆಗೆ ಶ್ರೀಗಳೇ ಈಶ್ವರಪ್ಪರನ್ನು ಸನ್ಮಾನಿಸಿದರು. ಈ ಮೂಲಕ ಸಿದ್ದರಾಮಯ್ಯ ಮತ್ತು ಈಶ್ವರಪ್ಪ ನಡುವಿನ ರಾಜಕೀಯ ಗುದ್ದಾಟ ಸಮುದಾಯದ ವೇದಿಕೆ ಮೇಲೆ ಬಹಿರಂಗವಾದಂತಾಯ್ತು.

ಈಶ್ವರಪ್ಪ ಹೋದಲ್ಲಿ ಬಂದಲೆಲ್ಲ ಸಿದ್ದರಾಮಯ್ಯ ವಿರುದ್ಧ ಮಾತನಾಡದೇ ಇರುವುದಿಲ್ಲ. ಏನಾದರೂ ಒಂದು ವಿಚಾರಕ್ಕೆ ಸಿದ್ದರಾಮಯ್ಯ ವಿರುದ್ಧ ತೆಗಳುತ್ತಲೇ ಇರುತ್ತಾರೆ.