Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಸಿಎಂ ಆಗಬೇಕೆಂದು 8 ರಾಜ್ಯಗಳ ಮುಖ್ಯಮಂತ್ರಿಗಳು ಹೇಳಿದ್ರಲ್ಲ ಅದು ಕುರುಬರ ಗತ್ತು: ನಿರಂಜನಾನಂದಪುರಿಶ್ರೀ

ಬೆಂಗಳೂರಿನ ಕೇತೋಹಳ್ಳಿಯಲ್ಲಿ ಕಾಗಿನೆಲೆ ಮಹಾಸಂಸ್ಥಾನದ ಶಾಖಾ ಮಠದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಶ್ರೀ ಸೇರಿದಂತೆ ಇತರೆ ನಾಯಕರು ಸಿಎಂ ಸಿದ್ದರಾಮಯ್ಯನವರನ್ನು ಹಾಡಿಹೊಗಳಿಸಿದರು.

ಸಿದ್ದರಾಮಯ್ಯ ಸಿಎಂ ಆಗಬೇಕೆಂದು 8 ರಾಜ್ಯಗಳ ಮುಖ್ಯಮಂತ್ರಿಗಳು ಹೇಳಿದ್ರಲ್ಲ ಅದು ಕುರುಬರ ಗತ್ತು: ನಿರಂಜನಾನಂದಪುರಿಶ್ರೀ
Follow us
Anil Kalkere
| Updated By: ರಮೇಶ್ ಬಿ. ಜವಳಗೇರಾ

Updated on: Jul 02, 2023 | 2:07 PM

ಬೆಂಗಳೂರು: ಸಿದ್ದರಾಮಯ್ಯ(Siddaramaiah) ಸಿಎಂ ಆಗಬೇಕೆಂದು 8 ರಾಜ್ಯಗಳ ಮುಖ್ಯಮಂತ್ರಿಗಳು ಮಾತನಾಡಿದರು. ಅದು ಕುರುಬರ ಗತ್ತು ಎಂದು ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಶ್ರೀ (Niranjanananda puri Swamiji) ಹೇಳಿದರು. ಇಂದು(ಜುಲೈ 02) ಬೆಂಗಳೂರಿನ ಕೇತೋಹಳ್ಳಿಯಲ್ಲಿ ಕಾಗಿನೆಲೆ ಮಹಾಸಂಸ್ಥಾನದ ಶಾಖಾ ಮಠದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಕುರುಬ ಸಮುದಾಯದ ಸಿಎಂ ಆಗಬೇಕೆಂಬ ಕೂಗು ಬರುತ್ತಾನೆ ಇರುತ್ತೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎನ್ನುವುದು ವಿಶೇಷ ಅಲ್ಲ. 8 ರಾಜ್ಯಗಳ ಮುಖ್ಯಮಂತ್ರಿಗಳು ಹೇಳಿದ್ರಲ್ಲ ಅದು ಕುರುಬರ ಗತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದು ನಮಗೆಲ್ಲ ಹೆಮ್ಮೆ ಇದ ಎಂದರು.

ನಮ್ಮ ಸಮುದಾಯದ ಸಿದ್ದರಾಮಯ್ಯ ಮೌಢ್ಯಕ್ಕೆ ಬ್ರೇಕ್ ಹಾಕಿದ್ದಾರೆ. ಸಿದ್ದರಾಮಯ್ಯ ವಿಧಾನಸೌಧಯಲ್ಲಿ ಮುಚ್ಚಿದ ಬಾಗಿಲು ತೆರೆಸಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಮೌಢ್ಯಕ್ಕೆ ಬ್ರೇಕ್ ಹಾಕಿದ್ದಾರೆ. ಸರ್ಕಾರದಿಂದ ನಮ್ಮ ಶಾಖಾ ಮಠಕ್ಕೆ ಯಾವುದೇ ಅನುದಾನ ಬೇಡ. ಸಮಾಜದ ಜನರ ಜೋಳಿಗೆಯಿಂದಲೇ ಮಠ ನಿರ್ಮಾಣವಾಗಬೇಕು ಎಂದು ಸ್ಪಷ್ಟಪಡಿಸಿದರು.

ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಸಮುದಾಯದ ಎಲ್ಲಾ ನಾಯಕರು ಭಾಗವಹಿಸಿದ್ದಾರೆ. ಈ ಮಠಕ್ಕೆ ಸರ್ಕಾರದಿಂದ ಯಾವುದೇ ಅನುದಾನ ಬೇಡ. ಈ ಶಾಖಾ ಮಠಕ್ಕೆ ಸಮುದಾಯದ ಜನರ ಜೋಳಿಗಿಯಿಂದಲ್ಲೇ ಮಠ ನಿರ್ಮಾಣವಾಗಬೇಕು. ನಮ್ಮ ಸಮುದಾಯದಲ್ಲಿ ಹುಟ್ಟಿದ ನಾಯಕ ಸಿದ್ದರಾಮಯ್ಯ, ಮೌಡ್ಯಕ್ಕೆ ಬ್ರೇಕ್ ಹಾಕಿದ್ದಾರೆ. ವಿಧಾನಸೌದ ತಮ್ಮ ಕೊಠಡಿಯಲ್ಲಿ ಮುಚ್ಚಿದ ಬಾಗಿಲನ್ನ ತೆಗೆದು ಮೌಡ್ಯಕ್ಕೆ ಬ್ರೇಕ್ ಹಾಕಿದ್ದಾರೆ. ಅವರು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತರಲ್ಲ. ಸಿದ್ದರಾಮಯ್ಯ ರಾಜ್ಯದ ಎಲ್ಲಾ ಜನರ ಮುಖ್ಯಮಂತ್ರಿ ಎಂದು ಹೇಳಿದರು.

ಇದೇ ವೇಳೆ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮಾತನಾಡಿ, ಕನಕ ಜಯಂತಿ ಆಚರಣೆಯ ಕೀರ್ತಿ ಸಿದ್ದರಾಮಯ್ಯಗೆ ಸಲ್ಲುತ್ತದೆ. ಶಾಸಕರು ಕ್ಷೇತ್ರದ ಕೆಲಸ ಮಾತ್ರವಲ್ಲ, ಸಮಾಜದ ಕೆಲಸ ಮಾಡಲಿ. ನಾಲ್ಕು ಮಠಗಳು ಒಂದೇ ದಿಕ್ಕಿನಲ್ಲಿ‌ ಹೋಗಬೇಕಿದೆ. ಟ್ರಸ್ಟ್ ಆಗಬೇಕು, ಚುನಾವಣೆ ಆಗಬೇಕು. ನಮ್ಮ‌ ಸಂಘ ಇವತ್ತು ಹೊಡೆದು ಹೋಗಿದ್ದು, ಇದನ್ನ ಸಿದ್ದರಾಮಯ್ಯ ಸರಿ ಮಾಡಿಸುವ ಕೆಲಸ ಮಾಡಬೇಕು.. ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಸಿಎಂ ಸಿದ್ದರಾಮಯ್ಯ ಮಾಡಬೇಕು. ನನಗೆ ರಾಜಕೀಯ ಸ್ಥಾನಮಾನ ಸಿಗದಿದ್ದರೂ ಪರವಾಗಿಲ್ಲ. ಸಮಾಜದ ಸ್ಥಾನಮಾನ ಸಿಗಬೇಕು ಎಂದು ವೇದಿಕೆ ಮೇಲೆ ಹೇಳಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯ ಹೆಚ್​ ವಿಶ್ವನಾಥ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಎಲ್ಲಾ ಜಾತಿಯವರಿಗೆ ಯೋಜನೆ ನೀಡಿದ್ದಾರೆ. ನೀವು ಕೊಟ್ಟ ಶಕ್ತಿ ಯೋಜನೆ ಕುರುಬ ಮಹಿಳೆಯರಿಗೆ ಮಾತ್ರ ಅಲ್ಲ. ಕೇವಲ ಕಾಂಗ್ರೆಸ್ ಪಕ್ಷದ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿಲ್ಲ. ಎಲ್ಲ ಪಕ್ಷ, ಎಲ್ಲಾ ಜಾತಿಯ ಜನರಿಗೆ ಯೋಜನೆ ಜಾರಿ ಮಾಡಿದ್ದಾರೆ ಎಂದು ಸಿದ್ದರಾಮಯ್ಯರನ್ನು ಹಾಡಿಹೊಗಳಿದ.

ಸಿದ್ದರಾಮಯ್ಯ ಬರೀ ಸಿದ್ದರಾಮಯ್ಯ ಮಾತ್ರವಲ್ಲ‌ ಎಲ್ಲರ ರಾಮಯ್ಯ. ಅಧಿವೇಶನದ ಬಳಿಕ ಕುರುಬ ಸಮುದಾಯದ ಸಮಸ್ಯೆಗಳ ಕುರಿತು ಸಿದ್ದರಾಮಯ್ಯನವರು ಮಾತನಾಡಬೇಕಿದೆ ಎಂದ ವಿಶ್ವನಾಥ್, ಇನ್ನು ರಾಮನನ್ನ ತೋರಿಸುವುದಕ್ಕೆ ಸಿದ್ದರಾಮಯ್ಯನವರು ಬಸ್ ಬಿಟ್ಟಿದ್ದಾರೆ ಎಂದು ವಿಶ್ವನಾಥ್ ಹೇಳುತ್ತಲ್ಲೇ ಜನರ ಜೈಕಾರ, ಘೋಷಣೆ ಮುಗಿಲುಮುಟಿತು.