Karnataka High Court: ಅರ್ಚಕರ ಉತ್ತರಾಧಿಕಾರಕ್ಕಾಗಿ ಸಹೋದರರ ಕಿತ್ತಾಟ, ಇದು ತಂದೆಯ ಕಡೆಯಾಗಿರಬೇಕು: ಹೈಕೋರ್ಟ್
ಅನುವಂಶಿಕ ಅರ್ಚಕರ ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಇದೀಗ ಹೈಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಅನುವಂಶಿಕ ಅರ್ಚಕರ ಉತ್ತರಾಧಿಕಾರ ತಂದೆಯ ಕಡೆಯಾಗಿರಬೇಕು ಮತ್ತು ತಾಯಿಯ ಕಡೆಯಲ್ಲ ಎಂದು ಹೇಳಿದೆ.
ಬೆಂಗಳೂರು: ಕೆಆರ್ ಪುರಂನಲ್ಲಿರುವ ಶ್ರೀ ಮಹಾಬಲೇಶ್ವರ ಸ್ವಾಮಿ ದೇವಸ್ಥಾನದ ಅರ್ಚರ ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಅನುವಂಶಿಕ ಅರ್ಚಕರ ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಇದೀಗ ಹೈಕೋರ್ಟ್ ನೀಡಿರುವ ತೀರ್ಪಿನ ಪ್ರಕಾರ ಅನುವಂಶಿಕ ಅರ್ಚಕರ ಉತ್ತರಾಧಿಕಾರ ತಂದೆಯ ಕಡೆಯಾಗಿರಬೇಕು ಮತ್ತು ತಾಯಿಯ ಕಡೆಯಲ್ಲ ಎಂದು ಹೇಳಿದೆ. ಕೆಆರ್ ಪುರಂನಲ್ಲಿರುವ ಶ್ರೀ ಮಹಾಬಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ತಮ್ಮ ತಾಯಿಯ ಅಜ್ಜ ಪೂಜೆ ಮಾಡುತ್ತಿದ್ದರಿಂದ ಅರ್ಚಕ ಹುದ್ದೆಗೆ ತಮ್ಮನ್ನು ಪರಿಗಣಿಸಬೇಕು ಎಂಬ ಇಬ್ಬರು ಸಹೋದರರ ಹಕ್ಕನ್ನು ತಿರಸ್ಕರಿಸಿ ಅರ್ಚಕರ ಉತ್ತರಾಧಿಕಾರ ತಂದೆಯ ಕಡೆಯಾಗಿರಬೇಕು ಮತ್ತು ತಾಯಿಯ ಕಡೆಯಲ್ಲ ನ್ಯಾಯಾಲಯ ತಿಳಿಸಿದೆ.
ಎಂಎಸ್ ರವಿ ದೀಕ್ಷಿತ್ ಮತ್ತು ಅವರ ಸಹೋದರ ಎಂಎಸ್ ವೆಂಕಟೇಶ್ ದೀಕ್ಷಿತ್ ಅವರು ಆಗಸ್ಟ್ 2016ರಲ್ಲಿ ತಮ್ಮನ್ನು ದೇವಾಲಯದ ಆನುವಂಶಿಕ ಅರ್ಚಕರು ಎಂದು ಪರಿಗಣಿಸಲು ನಿರಾಕರಿಸಿದ ಆದೇಶವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದರು. ಅವರು ತಮ್ಮ ತಾಯಿಯ ಅಜ್ಜನ ನಂತರ ತಮ್ಮ ತಂದೆ ಅರ್ಚಕರಾಗಿ ಮುಂದುವರೆದರು ಮತ್ತು ಆದ್ದರಿಂದ ಈ ಹುದ್ದೆಗೆ ನಮ್ಮನ್ನು ಪರಿಗಣಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಿದರು.
ಈ ಹಿಂದೆ ದೇವಸ್ಥಾನದಲ್ಲಿರುವ ಅರ್ಚಕರು ತಮ್ಮ ತಾಯಿಯ ಅಜ್ಜನೆಂದು ಗುರುತಿಸಲ್ಪಟ್ಟಿರುವುದರಿಂದ, ದೇವಸ್ಥಾನದಲ್ಲಿ ಅರ್ಚಕರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಸರ್ಕಾರಿ ವಕೀಲರು ವಾದಿಸಿದರು. ದಾಖಲೆಗಳನ್ನು ಅವಲೋಕಿಸಿದ ನ್ಯಾಯಮೂರ್ತಿ ಸಂಜಯ್ ಗೌಡ ಅವರು ಡಿಸೆಂಬರ್ 30, 1980ರಂದು ಕೆಆರ್ ಪುರಂ ತಹಶೀಲ್ದಾರ್ ಅವರಿಗೆ ಬರೆದ ಪತ್ರದಲ್ಲಿ, ಅರ್ಜಿದಾರರ ತಾಯಿಯ ಅಜ್ಜ ತಮ್ಮ ಅಳಿಯನನ್ನು ಅರ್ಚಕರಾಗಿ ಮುಂದುವರಿಸಲು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಚೀನಾದ ಶಿಯೋಮಿಗೆ ಭಾರೀ ಹಿನ್ನಡೆ; 5551 ಕೋಟಿ ರೂ. ಜಪ್ತಿ ಆದೇಶ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್
ಅರ್ಜಿದಾರರ ತಂದೆಯ ಮಾವ ದೇವಸ್ಥಾನದಲ್ಲಿ ಅರ್ಚಕರಾಗಿ ಕಾರ್ಯನಿರ್ವಹಿಸಬೇಕು ಎಂದು ಆದೇಶದಲ್ಲಿ ದಾಖಲಾಗಿರುವುದನ್ನು ನ್ಯಾಯಾಲಯ ಗಮನಿಸಿದೆ. ಅರ್ಜಿದಾರರು ತಮ್ಮ ತಾಯಿಯ ಅಜ್ಜ ಅರ್ಚಕ ಎಂಬ ಕಾರಣದಿಂದ ಅರ್ಚಕರಾಗಿ ಕಾರ್ಯನಿರ್ವಹಿಸುವ ಹಕ್ಕು ನಮ್ಮದು ಎಂದು ಪ್ರತಿಪಾದಿಸುತ್ತಿದ್ದಾರೆ ಎಂಬ ಅರ್ಜಿಯಲ್ಲಿ ತಿಳಿದು ಬಂದಿದೆ. ಆದರೆ ಇದೀಗ ಈ ಅರ್ಚಕ ಹುದ್ದೆ ಅನುವಂಶಿಕವಾಗಿಲ್ಲ ಎಂದು ಹೇಳಿದೆ. ಆನುವಂಶಿಕ ಅರ್ಚಕ ಹುದ್ದೆಯನ್ನು ಪಡೆಯಲು, ಉತ್ತರಾಧಿಕಾರವು ತಂದೆಯ ಕಡೆಯಾಗಿರಬೇಕು ಹೊರತು ತಾಯಿಯ ಕಡೆಯಲ್ಲ ಎಂದು ನ್ಯಾಯಾಲಯವು ಆದೇಶ ನೀಡಿದೆ.