ಅಕ್ರಮ ಆಸ್ತಿಗಳಿಕೆ: ಪೊಲೀಸ್ ಅಧೀಕ್ಷಕ ಶ್ರೀನಿವಾಸ್ ಐಯ್ಯರ್‌ಗೆ 4 ವರ್ಷ ಜೈಲುಶಿಕ್ಷೆ, ಜೊತೆಗೆ 1 ಕೋಟಿ ರೂಪಾಯಿ ದಂಡ

| Updated By: ವಿವೇಕ ಬಿರಾದಾರ

Updated on: Jul 01, 2022 | 7:40 PM

ಅಕ್ರಮ ಆಸ್ತಿಗಳಿಕೆ ಪ್ರಕರಣದಡಿ ಅಪರಾಧಿ ಶ್ರೀನಿವಾಸ್ ಐಯ್ಯರ್‌ಗೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1998 ರ ಅಡಿ 4 ವರ್ಷ ಜೈಲುಶಿಕ್ಷೆ, ಬರೋಬ್ಬರಿ 1 ಕೋಟಿ ರೂಪಾಯಿ ದಂಡವನ್ನು ಬೆಂಗಳೂರಿನ ಸಿಸಿಹೆಚ್‌ 78ನೇ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಎಸ್.ವಿ.ಶ್ರೀಕಾಂತ್‌ ಶಿಕ್ಷೆ ವಿಧಿಸಿದ್ದಾರೆ.

ಅಕ್ರಮ ಆಸ್ತಿಗಳಿಕೆ: ಪೊಲೀಸ್ ಅಧೀಕ್ಷಕ ಶ್ರೀನಿವಾಸ್ ಐಯ್ಯರ್‌ಗೆ 4 ವರ್ಷ ಜೈಲುಶಿಕ್ಷೆ, ಜೊತೆಗೆ 1 ಕೋಟಿ ರೂಪಾಯಿ ದಂಡ
ಲೋಕಾಯುಕ್ತ ಕಚೇರಿ
Follow us on

ಬೆಂಗಳೂರು: ಅಕ್ರಮ ಆಸ್ತಿಗಳಿಕೆ (Illegal property) ಪ್ರಕರಣದಡಿ ಅಪರಾಧಿ (Guilty) ಶ್ರೀನಿವಾಸ್ ಐಯ್ಯರ್‌ಗೆ ಭ್ರಷ್ಟಾಚಾರ (Corruption) ಪ್ರತಿಬಂಧಕ ಕಾಯ್ದೆ-1998 ರ ಅಡಿ 4 ವರ್ಷ ಜೈಲುಶಿಕ್ಷೆ, ಬರೋಬ್ಬರಿ 1 ಕೋಟಿ ರೂಪಾಯಿ ದಂಡವನ್ನು ಬೆಂಗಳೂರಿನ (Bengaluru) ಸಿಸಿಹೆಚ್‌ 78ನೇ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಎಸ್.ವಿ.ಶ್ರೀಕಾಂತ್‌ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೇ 1 ಕೋಟಿ ದಂಡ ಪಾವತಿಸದಿದ್ದರೆ 2 ವರ್ಷ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಹೇಳಿದ್ದಾರೆ.  ಯಲಹಂಕ ಸಶಸ್ತ್ರ ಪೊಲೀಸ್ ತರಬೇತಿ ಶಾಲೆಯ ಅಧೀಕ್ಷಕನಾಗಿದ್ದ ಶ್ರೀನಿವಾಸ್ ಅಕ್ರಮ ಆಸ್ತಿಗಳಿಕೆ ಮಾಡಿದ್ದಾರೆಂದು 2007ರಲ್ಲಿ ಲೋಕಾಯುಕ್ತ ಪೊಲೀಸರು ಅವರ ಮನೆ ಮೇಲೆ ದಾಳಿ ಮಾಡಿದ್ದರು.

ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು, ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ 2009 ರಲ್ಲಿ  ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆದಿದ್ದು, ಆದಾಯ ಮೀರಿ ಶೇ.53.58ರಷ್ಟು ಅಕ್ರಮ ಆಸ್ತಿ ಹೊಂದಿದ್ದಾರೆಂದು ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.