AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಕಾನಮಿ ಅಂದ್ರೆ ಹಣವಲ್ಲ, ಜನರ ಬದುಕಿನ ದುಡಿಮೆಯೇ ಎಕಾನಮಿ ನಿರ್ಧಾರ ಮಾಡುತ್ತದೆ; ಜಿಎಸ್‌ಟಿ ದಿನಾಚರಣೆ ವೇಳೆ ಸಿಎಂ ಬೊಮ್ಮಾಯಿ ಅರ್ಥವತ್ತಾದ ಮಾತು

ಕರ್ನಾಟಕ ಜಿಎಸ್ಟಿ ನಿರ್ವಹಣೆ ವಿಚಾರದಲ್ಲಿ ಅತ್ಯಂತ ಮುಂಚೂಣಿಯಲ್ಲಿದೆ. ಕರ್ನಾಟಕದಲ್ಲಿ ಯಾವುದೇ ಪ್ರಯೋಗ ಯಶಸ್ವಿಯಾದರೆ ಉಳಿದೆಲ್ಲ ಕಡೆ ಅದನ್ನು ವಿಸ್ತರಿಸುವುದಾಗಿ ಕೇಂದ್ರ ಸರ್ಕಾರದ ಅಧಿಕಾರಿಗಳು ನಮಗೆ ಹೇಳುತ್ತಿದ್ದರು.

ಎಕಾನಮಿ ಅಂದ್ರೆ ಹಣವಲ್ಲ, ಜನರ ಬದುಕಿನ ದುಡಿಮೆಯೇ ಎಕಾನಮಿ ನಿರ್ಧಾರ ಮಾಡುತ್ತದೆ; ಜಿಎಸ್‌ಟಿ ದಿನಾಚರಣೆ ವೇಳೆ ಸಿಎಂ ಬೊಮ್ಮಾಯಿ ಅರ್ಥವತ್ತಾದ ಮಾತು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
TV9 Web
| Updated By: ಆಯೇಷಾ ಬಾನು|

Updated on: Jul 01, 2022 | 6:50 PM

Share

ಬೆಂಗಳೂರು: ಜಿಎಸ್‌ಟಿ(GST) ಮಂಡಳಿ ದಿನಾಚರಣೆ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಚಾಲನೆ ನೀಡಿದ್ದಾರೆ. ಹಾಗೂ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ‌ ನಡೆದ ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಉತ್ತಮ ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಇನ್ನು GST ಮಂಡಳಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಜಿಎಸ್ಟಿ ಪ್ರಾರಂಭವಾಗಿ ಐದು ವರ್ಷ ಆಗಿದೆ. 10 ವರ್ಷ ಇದರ ಬಗ್ಗೆ ಚರ್ಚೆ ಆಗಿದೆ. ಹಲವು ಬಾರಿ ಜಿಎಸ್ಟಿ ಬಿಲ್ ಮಂಡನೆ ಮಾಡಿ ವಾಪಸ್ ತೆಗೆದುಕೊಂಡಿದ್ದು ಆಗಿದೆ. ಅರುಣ್ ಜೇಟ್ಲಿ ಇದ್ದಾಗ ಎಲ್ಲ ರಾಜ್ಯಗಳ ಜೊತೆಗೆ ಚರ್ಚೆ ಮಾಡಿ ಜಾರಿಗೆ ತಂದರು. ಜಿಎಸ್ಟಿ ಯಾರಿಗೂ ಹೊರೆಯಾಗದೆ ಬೇರೆ ಬೇರೆ ಹಂತದಲ್ಲಿ ತೆರಿಗೆ ಹಾಕಬೇಕು ಎಂಬ ಕಾರಣಕ್ಕೆ ಚರ್ಚೆಯಾಗಿದೆ. ಯಾರಿಗೂ ತೆರಿಗೆ ಹೊರೆ ಆಗಬಾರದು ಎಂಬ ಉದ್ದೇಶವಿದೆ. ಕರ್ನಾಟಕ ಜಿಎಸ್ಟಿ ನಿರ್ವಹಣೆ ವಿಚಾರದಲ್ಲಿ ಅತ್ಯಂತ ಮುಂಚೂಣಿಯಲ್ಲಿದೆ. ಕರ್ನಾಟಕದಲ್ಲಿ ಯಾವುದೇ ಪ್ರಯೋಗ ಯಶಸ್ವಿಯಾದರೆ ಉಳಿದೆಲ್ಲ ಕಡೆ ಅದನ್ನು ವಿಸ್ತರಿಸುವುದಾಗಿ ಕೇಂದ್ರ ಸರ್ಕಾರದ ಅಧಿಕಾರಿಗಳು ನಮಗೆ ಹೇಳುತ್ತಿದ್ದರು ಎಂದರು. ಇದನ್ನೂ ಓದಿ: Viral Video: ಕೊಳದಲ್ಲಿ ಸರಳ ರೇಖೆ ಎಳೆದ ಬಾತುಕೋಳಿ, ನೆಟ್ಟಿಗರ ಮನಸ್ಸನ್ನು ಪ್ರಶಾಂತಗೊಳಿಸುವಂತಿದೆ ಈ ವಿಡಿಯೋ

ಕೋವಿಡ್ ಆಗ ತಾನೇ ಮುಗಿದ ಸಂದರ್ಭದಲ್ಲಿ ನನಗೆ ಚಾಲೆಂಜಿಂಗ್ ಆಗಿತ್ತು. ಆದರೆ ಟಾರ್ಗೆಟ್ ಮೀರಿ 15 ಸಾವಿರ ಕೋಟಿ ನಾವು ಜಿಎಸ್ಟಿ ಸಂಗ್ರಹ ಮಾಡಿದ್ದೇವೆ. ರಾಜ್ಯದ ಬೆಳವಣಿಗೆಗೆ ಬಹಳ ದೊಡ್ಡ ಕೊಡುಗೆ ವಾಣಿಜ್ಯ ತೆರಿಗೆ ಇಲಾಖೆ ಮಾಡುತ್ತಿದೆ. ಎಕಾನಮಿ ಅಂದ್ರೆ ಹಣವಲ್ಲ, ಜನರ ಬದುಕಿನ ದುಡಿಮೆಯೇ ಎಕಾನಮಿ ನಿರ್ಧಾರ ಮಾಡುತ್ತದೆ ಎಂದು ಬೊಮ್ಮಾಯಿ ಹೇಳಿದ್ರು.