ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಬೆಂಗಳೂರು ಫ್ಲೈಓವರ್ ಸೇರಿದಂತೆ ಟೋಲ್ ಸುಂಕವನ್ನು NHIA ಶೇ 25 ರಷ್ಟು ಹೆಚ್ಚಳ ಮಾಡಿದ್ದು ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ಐದು ರೂಪಾಯಿ ಟೋಲ್ ಸುಂಕ ಹೆಚ್ಚಳವಾಗಿದೆ. ನಿನ್ನೆಯವರೆಗೂ (ಜೂನ್ 30) 20 ರೂಪಾಯಿ ಟೋಲ್ ನೀಡಿ ಫ್ಲೈಓವರ್ ಬಳಸುತ್ತಿದ್ದ ವಾಹನ ಸವಾರರು ಈಗ 25 ರೂ ನೀಡುತ್ತಿದ್ದಾರೆ. ಇದರಿಂದ ದ್ವಿಚಕ್ರ ವಾಹನ ಸವಾರರು ಫುಲ್ ಗರಂ ಆಗಿದ್ದಾರೆ. ದ್ವಿಚಕ್ರ ವಾಹನ ಸವಾರರು ಜುಲೈ 1 ರಿಂದ ಫ್ಲೈಓವರ್ ಬಳಸಿದರೆ 25 ರೂ ಸಿಂಗಲ್ ಟಿಕೆಟ್ ಪಡೆಯಬೇಕು. 35 ರೂಪಾಯಿ ನೀಡಿದರೆ 12 ಗಂಟೆಯ ವರೆಗೆ ಫ್ಲೈಓವರ್ ಬಳಸಬಹುದಾಗಿದೆ.
ಇದನ್ನು ಓದಿ: Petrol Price Today: ಬೆಂಗಳೂರು, ಮುಂಬೈ ಸೇರಿ ವಿವಿಧೆಡೆ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?
ವಾಣಿಜ್ಯ ಸಂಬಂಧಿತ ವಾಹನಗಳಿಗೂ ಟ್ಯಾಕ್ಸ್ ಹೊರೆ ಬಿದ್ದಿದ್ದು, ಕಾರು (ಸಿಂಗಲ್ ಪಾಸ್) 60 ರೂಪಾಯಿ ನೀಡಬೇಕು. ವಾಣಿಜ್ಯ ಬಳಕೆಯ ವಾಹನ (ಸಿಂಗಲ್ ಪಾಸ್) 85 ರೂ, ಟ್ರಕ್, ಬಸ್(ಸಿಂಗಲ್ ಪಾಸ್) 170 ರೂಪಾಯಿ, ಭಾರಿ ವಾಹನಗಳಿಗೆ 335 ರೂಪಾಯಿ ನೀಡಿ ಕೇವಲ ಸಿಂಗಲ್ ಪಾಸ್ ಪಡೆಯಬಹುದಾಗಿದೆ. ಒಂದು ದಿನದ ಪಾಸ್ಗೆ ದ್ವಿಚಕ್ರವಾಹನ 35, ಕಾರು 90, ವಾಣಿಜ್ಯ ವಾಹನ 125, ಟ್ರಕ್, ಬಸ್ 250, ಭಾರೀ ವಾಹನ 505 ರೂ ನೀಡಬೇಕಾಗಿದೆ. ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಧಾರಕ್ಕೆ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.