ಆಗಸ್ಟ್ 10 -22 ರವರೆಗೆ ಹಾಸನದಲ್ಲಿ ನಡೆಯಲಿದೆ ಅಗ್ನಿಪಥ್ ನೇಮಕಾತಿ: ಇದು 14 ಜಿಲ್ಲೆಗಳಿಗೆ ಅನ್ವಯ

ಆಗಸ್ಟ್ 10 ರಿಂದ ಹಾಸನದಲ್ಲಿ ಅಗ್ನಿಪಥ್ ನೇಮಕಾತಿ(Agnipath Recruitment) ರ್ಯಾಲಿ ನಡೆಯಲಿದೆ. ಒಟ್ಟು ಹದಿನಾಲ್ಕು ಜಿಲ್ಲೆಯ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗಿಯಾಗಬಹುದು.

ಆಗಸ್ಟ್ 10 -22 ರವರೆಗೆ ಹಾಸನದಲ್ಲಿ ನಡೆಯಲಿದೆ ಅಗ್ನಿಪಥ್ ನೇಮಕಾತಿ: ಇದು 14 ಜಿಲ್ಲೆಗಳಿಗೆ ಅನ್ವಯ
ಸಾಂದರ್ಭಿಕ ಚಿತ್ರ
TV9kannada Web Team

| Edited By: Ayesha Banu

Jul 01, 2022 | 7:37 PM

ಬೆಂಗಳೂರು: ಆಗಸ್ಟ್ 10 ರಿಂದ ಹಾಸನದಲ್ಲಿ ಅಗ್ನಿಪಥ್ ನೇಮಕಾತಿ(Agnipath Recruitment) ರ್ಯಾಲಿ ನಡೆಯಲಿದೆ. ಒಟ್ಟು ಹದಿನಾಲ್ಕು ಜಿಲ್ಲೆಯ ಅಭ್ಯರ್ಥಿಗಳು ರ್ಯಾಲಿಯಲ್ಲಿ ಭಾಗಿಯಾಗಬಹುದು. ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ‌ ಆಗಸ್ಟ್ 10 ರಿಂದ ಆಗಸ್ಟ್ 22 ರವರೆಗೂ ಅಗ್ನಿಪಥ್ ನೇಮಕಾತಿ ರ್ಯಾಲಿ ನಡೆಯಲಿದೆ. ಬೆಂಗಳೂರು ಅರ್ಬನ್, ಬೆಂಗಳೂರು ರೂರಲ್, ತುಮಕೂರು ಜಿಲ್ಲೆ, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ, ವಿಜಯನಗರ ಜಿಲ್ಲೆಯ ಅಭ್ಯರ್ಥಿಗಳು ನೇಮಕಾತಿ ರ್ಯಾಲಿಯಲ್ಲಿ ಪಾಲ್ಗೊಳ್ಳಬಹುದು. ಅಗ್ನಿವೀರ ಜನರಲ್ ಡ್ಯೂಟಿ, ಅಗ್ನಿವೀರ ಟೆಕ್ನಿಕಲ್, ಅಗ್ನಿವೀರ ಸ್ಟೋರ್ ಕೀಪರ್, ಅಗ್ನಿವೀರ ಕ್ಲರ್ಕ್ ಸೇರಿದಂತೆ ಇತರೆ ಹುದ್ದೆಗೆ ನೇಮಕಾತಿ ನಡೆಯಲಿದೆ.

Agnipath

ಅಗ್ನಿಪಥ್ ಯೋಜನೆಯಡಿ ವಾಯುಪಡೆಗೆ ನಾಲ್ಕೇ ದಿನದಲ್ಲಿ 94,281 ಅರ್ಜಿ ಸಲ್ಲಿಕೆ ನವದೆಹಲಿ: ದೇಶಾದ್ಯಂತ ಈಗಾಗಲೇ ಅಗ್ನಿಪಥ್ (Agnipath) ಯೋಜನೆಯಡಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಜೂನ್ 24ರಂದು ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಕಳೆದ ನಾಲ್ಕು ದಿನಗಳಲ್ಲಿ ಭಾರತೀಯ ವಾಯುಪಡೆ (IAF) ಅಗ್ನಿಪಥ್ ನೇಮಕಾತಿ ಯೋಜನೆಯಡಿ 94,281 ಅರ್ಜಿಗಳನ್ನು ಸ್ವೀಕರಿಸಿದೆ. ಅಗ್ನಿಪಥ್​ ಯೋಜನೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ವಿರೋಧ ಪಕ್ಷಗಳ ವ್ಯಾಪಕ ಪ್ರತಿಭಟನೆಗಳ ಹೊರತಾಗಿಯೂ ಸೇನಾಪಡೆಗಳಿಗೆ ಸೇರಲು ಭಾರೀ ಪ್ರಮಾಣದ ಅರ್ಜಿಗಳು ಬರುತ್ತಿವೆ.ಇದನ್ನೂ ಓದಿ: ಕಾಂಗ್ರೆಸ್ ಶಾಸಕ ರಾಜಣ್ಣ ವಿರುದ್ಧ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಕ್ಷರಶಃ ಗುಡುಗಿದರು!

ಜೂನ್ 14ರಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನಾವರಣಗೊಳಿಸಿದ ಅಗ್ನಿಪಥ್ ಯೋಜನೆಯ ಅನುಸಾರ 17ರಿಂದ 21ರ ವಯೋಮಾನದ ಯುವಕರನ್ನು 4 ವರ್ಷಗಳವರೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಅವರಲ್ಲಿ 25% ಜನರನ್ನು ಸೇನೆಯಲ್ಲೇ ಉಳಿಸಿಕೊಳ್ಳಲು ಅವಕಾಶವಿದೆ. ಜೂನ್ 16ರಂದು ಸರ್ಕಾರವು 2022ರ ವರ್ಷಕ್ಕೆ ಅಗ್ನಿಪಥ್ ಯೋಜನೆಯಡಿಯಲ್ಲಿ ನೇಮಕಾತಿಗಾಗಿ ಗರಿಷ್ಠ ವಯಸ್ಸಿನ ಮಿತಿಯನ್ನು 23 ವರ್ಷಗಳಿಗೆ ಹೆಚ್ಚಿಸಿತ್ತು.

ಸೋಮವಾರದವರೆಗೆ ಒಟ್ಟು 94,281 ಅಗ್ನಿವೀರ್ ವಾಯು ಆಕಾಂಕ್ಷಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಜುಲೈ 5ರಂದು ನೋಂದಣಿ ಮುಕ್ತಾಯವಾಗುತ್ತದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಎ. ಭರತ್ ಭೂಷಣ್ ಬಾಬು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada